ರಂಜಾನ್ ಮುಸ್ಲಿಮರಿಗೆ ಪವಿತ್ರವಾದ ತಿಂಗಳು. ರಂಜಾನ್ ಆಚರೆಣೆಗೆ ವಿಶೇಷ ತಿನಿಸು ರಸದೌತಣವೂ ಆಗಿರುತ್ತದೆ. ಪ್ರತಿದಿನ ಉಪಾಸದ ವ್ರತ ಮುಗಿದ ಬಳಿಕ ತಮ್ಮಿಷ್ಟದ ಆಹಾರ ಮೊರೆ ಹೋಗುವ ಬಹುತೇಕರಿಗೆ ತಂಪಾಗಿ ಕುಡಿಯಲು ಏನಾದರೂ ಬೇಕು ಎನ್ನಿಸುತ್ತದೆ. ರಂಜಾನ್ ಉಪಾಸದ ಸಮಯದಲ್ಲಿ ಹಾಗೂ ಬಿಸಿಲಿನಬೆಗೆಯಲ್ಲಿ ತಂಪಾಗಿ ಕುಡಿಯಲು ಹೆಸರುಕಾಳಿನ ಸ್ಪೆಷಲ್ ಜ್ಯೂಸ್ ಮಾಡಿಕೊಂಡು ಸವಿಯಬಹುದಾಗಿದೆ. ಇಲ್ಲಿದೆ ಮಾಡುವ ವಿಧಾನ.
Advertisement
ಬೇಕಾಗುವ ಸಾಮಗ್ರಿಗಳು:
* ಬೆಲ್ಲ- 1ಕಪ್
* ಹೆಸರುಕಾಳು- 1ಕಪ್
* ಏಲಕ್ಕಿ- 2ರಿಂದ3
Advertisement
ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ಹೆಸರುಕಾಳನ್ನು ಹಾಕಿ ಸಣ್ಣ ಉರಿ ಬೆಂಕಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು.
Advertisement
* ಹೆಸರುಕಾಳಿನ ಹಸಿ ಹೋಗುವವರೆಗೆ ಹುರಿಯಬೇಕು. ನಂತರ ಹೆಸರುಕಾಳು ಸ್ಪಲ್ಪ ಆರುವವರೆಗೆ ಬಿಟ್ಟುಬಿಡಬೇಕು.
Advertisement
* ಒಂದು ಮಿಕ್ಸಿ ಜಾರಿಗೆ ಹುರಿದ ಹೆಸರುಕಾಳನ್ನು ಹಾಕಿ ಸಣ್ಣದಾಗಿ ಹುಡಿ ಮಾಡಿಕೊಳ್ಳಬೇಕು.
* ನಂತರ ಹೆಸರುಕಾಳಿನ ಹುಡಿಗೆ ಬೆಲ್ಲವನ್ನು ಹಾಕಿ ಜೊತೆಯಲ್ಲಿ ಸ್ವಲ್ಪ ನೀರು ಹಾಗೂ ಏಲಕ್ಕಿಯನ್ನು ಹಾಕಿ ರುಬ್ಬಿಕೊಳ್ಳಬೇಕು.
* ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಬೇಕಾಗುವಷ್ಟು ನೀರನ್ನು ಸೇರಿಸಿಕೊಳ್ಳಬೇಕು. ಗ್ಲಾಸ್‍ಗೆ ಹಾಕಿದರೆ ತಂಪಾದ ಮತ್ತು ರುಚಿಯಾದ ಹೆಸರುಕಾಳು ಜ್ಯೂಸ್ ಕುಡಿಯಲು ಸಿದ್ಧವಾಗುತ್ತದೆ.