ಕಾರವಾರ: ಇತ್ತೀಚೆಗಷ್ಟೇ ರಾಂಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್-2 ಚಿತ್ರದ ಟೀಸರ್ ವಿಶ್ವಾದ್ಯಂತ ಸಖತ್ ವೈರಲ್ ಆಗುವ ಮೂಲಕ ದೊಡ್ಡ ಸದ್ದು ಮಾಡುತ್ತಿದೆ. ಈ ಮಧ್ಯೆ ಕಾರವಾರದಲ್ಲಿ ರಾಕಿಬಾಯ್ ಚಿತ್ರ ರಂಗೂಲಿಯಲ್ಲಿ ಬಿಡಿಸುವ ಮೂಲಕ ಫುಲ್ ವೈರಲ್ ಆಗುತ್ತಿದೆ.
Advertisement
ಪ್ರತಿ ವರ್ಷ ಕಾರವಾರದ ಪ್ರಸಿದ್ಧ ಮಾರುತಿ ಗಲ್ಲಿಯಲ್ಲಿ ಸಂಕ್ರಾಂತಿಗೂ ಮೊದಲು ಮಾರುತಿ ದೇವರ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ವೇಳೆ ಮಾರುತಿ ಗಲ್ಲಿಯ ನಿವಾಸಿಗಳು ರಸ್ತೆಗಳ ಸಾಲಿನಲ್ಲಿ ವಿಶೇಷ ರಂಗೋಲಿ ಚಿತ್ರಗಳನ್ನು ಬಿಡಿಸಿ ದೇವರ ಮೆರವಣಿಗೆಯನ್ನು ಬರಮಾಡಿಕೊಳ್ಳುತ್ತಾರೆ. ಹೀಗಾಗಿ ಈ ಜಾತ್ರೆ ರಂಗೋಲಿ ಜಾತ್ರೆ ಎಂದೇ ಪ್ರಸಿದ್ಧವಾಗಿದೆ.
Advertisement
Advertisement
ಈ ಬಾರಿ ನಡೆದ ಜಾತ್ರೆಯಲ್ಲಿ ಜಗತ್ತಿನಲ್ಲಿ ಸದ್ದು ಮಾಡಿದ ಕೆಜಿಎಫ್-2 ಚಿತ್ರದ ಟೀಸರ್ ನಲ್ಲಿ ಕಣಿಸಿಕೊಂಡ ಯಶ್ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಲಾಯಿತು. ಈ ಕಲಾಕೃತಿಯನ್ನು ಕಾರವಾರದ ವಿಷ್ಟು ಆರ್ಟ್ ಕಲಾ ತಂಡ ರಚಿಸಿದೆ. ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸಲು ಕೊರೊನಾ ವಾರಿಯರ್ಸ್ ಗಳ ಚಿತ್ರ ರಂಗೋಲಿಯಲ್ಲಿ ಮೂಡಿತು. ಇದಲ್ಲದೇ ಕೊರೊನಾ ಜಾಗೃತಿ ಸಂದೇಶದ ರಂಗೋಲಿ ಚಿತ್ರ, ಕೃಷ್ಣ, ರಾಧೆ, ದುರ್ಗೆ, ಮಾರುತಿ, ಗಣಪತಿ ಸೇರಿದಂತೆ ಹತ್ತು ಹಲವು ಚಿತ್ರಗಳು ರಂಗೋಲಿಯಲ್ಲಿ ಜೀವ ಪಡೆದವು.
Advertisement
ಈ ಬಾರಿ ಕೊರೊನಾದಿಂದ ಒಂದಿಷ್ಟು ಜಾತ್ರೆಯ ಸೊಬಗಿಗೆ ಮೆರುಗು ಇಳಿಮುಖವಾಗಿದ್ದರೂ ಬಣ್ಣ ಬಣ್ಣದ ವಿಶಿಷ್ಟ ರಂಗೋಲಿಗಳು ಕಳೆಕಟ್ಟುವ ಮೂಲಕ ಮೆರುಗು ನೀಡಿದೆ.