ಕಲಬುರಗಿ: ಯೂಟ್ಯೂಬ್ ಚಾನೆಲ್ ಹೆಸರಲ್ಲಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಮೂವರನ್ನು ಜೇವರ್ಗಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಗಿರೀಶ್ ತುಂಬಗಿ, ಗುಂಡು ಗುತ್ತೆದಾರ್ ಹಾಗೂ ರವಿಚಂದ್ರ್ ಗುತ್ತೆದಾರ್ ಎಂದು ಗುರುತಿಸಲಾಗಿದೆ. ಆರೋಪಿಗಳು ಲಾರಿ ಚಾಲಕನಿಗೆ ಹೆದರಿಸಿ 3 ಲಕ್ಷ 50 ಸಾವಿರ ಹಣ ವಸೂಲಿ ಮಾಡಿದ್ದರು.
Advertisement
Advertisement
ಕಲಬುರಗಿ ಜಿಲ್ಲೆಯ ಜೇವರ್ಗಿ ಹೊರವಲಯದ ರಸ್ತೆಯಲ್ಲಿ ಲಾರಿ ಅಡ್ಡಗಟ್ಟಿದ ಆರೋಪಿಗಳು ಲಾರಿಯಲ್ಲಿ ಕಳ್ಳತನದ ಅಕ್ಕಿ ಸಾಗಿಸುತ್ತಿದ್ದಿಯಾ ಹಣ ಕೊಡು, ಇಲ್ಲ ಅಂದ್ರೆ ಟಿವಿಯಲ್ಲಿ ಹಾಕಿ ಮರ್ಯಾದೆ ತೆಗೆಯುವುದಾಗಿ ಬೇದರಿಕೆ ಹಾಕಿದ್ದರು. ಅಲ್ಲದೆ ನಗದು ಹಣ ಇಲ್ಲದ ಹಿನ್ನೆಲೆ ಗೂಗಲ್ ಪೇ ಮುಖಾಂತರ ಆರೋಪಿಗಳು ಹಣ ಹಾಕಿಸಿಕೊಂಡಿದ್ದರು.
Advertisement
Advertisement
ಕಾರಿನಲ್ಲಿ ಬಂದ ಆರೋಪಿಗಳು, ತಾವು ಕಲ್ಯಾಣ ಕರ್ನಾಟಕ ನ್ಯೂಸ್ ಚಾನೆಲ್ ರಿಪೋರ್ಟರ್ ಅಂತ ಹೇಳಿಕೊಂಡಿದ್ದಾರೆ. ಲಾರಿ ಯಾದಗಿರಿ ಜಿಲ್ಲೆಯ ಗೂಗಿ ಗ್ರಾಮದಿಂದ ಬೀದರ್ ಜಿಲ್ಲೆಗೆ ಅಕ್ಕಿ ತೆಗೆದುಕೊಂಡು ಹೋಗುತ್ತಿತ್ತು. ಸಂದೀಪ್ ರಾಠೋಡ್ ಎಂಬ ಲಾರಿ ಚಾಲಕನ ಬಳಿ 3.50 ಲಕ್ಷ ಹಣ ವಸೂಲಿ ಮಾಡಿದ್ದರು.
ಲಾರಿ ಚಾಲಕ ಸಂದೀಪ್ ರಾಠೋಡ್ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.