ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆಶಿ ಹಾಗೂ ಹಿರಿಯ ಕಾಂಗ್ರೆಸ್ಸಿಗರು ಹೀಗೆ ಮೂರು ಬಣಗಳ ಪ್ರತಿಷ್ಠೆಯ ಕದನವಾದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಗೊಂದಲ ಕಾಂಗ್ರೆಸ್ಸಿನಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಇಷ್ಟು ದಿನಗಳ ಕಾಲ ಬಣ ರಾಜಕಾರಣಕ್ಕೆ ಕಾರಣವಾಗಿದ್ದ ಈಗ ಜಾತಿಯ ಸ್ವರೂಪ ಪಡೆದುಕೊಂಡಿದೆ. ಆ ಮೂಲಕ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಜಾತಿ ಆಧಾರಿತ ವಿವಾದವಾಗಿ ಮಾರ್ಪಟ್ಟಿದೆ.
ಹಿಂದುಳಿದ ಬಲಿಜ ಸಮುದಾಯದ ರಕ್ಷಾ ರಾಮಯ್ಯಗೆ ಅನ್ಯಾಯ ಆಗುತ್ತೆ ಅವರನ್ನೇ ಮುಂದುವರಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕರಿಂದ ಎಐಸಿಸಿ ಮಟ್ಟದಲ್ಲಿ ಲಾಬಿ ನಡೆದಿದೆ. ಹಿರಿಯ ಕಾಂಗ್ರೆಸ್ ನಾಯಕರ ವಾದಕ್ಕೆ ಡಿಕೆಶಿ ಬಣ ಇನ್ನೊಂದು ರೀತಿಯ ಜಾತಿ ಸಮ್ಮಕರಣದ ಕೌಂಟರ್ ಕೊಟ್ಟಿದೆ. ನಲಪಾಡ್ ಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗದಿದ್ದರೆ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಆಗಲಿದೆ ಎಂಬುದು ಡಿ.ಕೆ.ಶಿವಕುಮಾರ್ ಬಣದ ವಾದವಾಗಿದೆ. ಇದನ್ನೂ ಓದಿ: ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನಲಪಾಡ್‍ಗೆ ಕೊಡಿಸಲು ಹೋಗಿ ಡಿಕೆಶಿಗೆ ಮುಖಭಂಗ
ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಗಲಾಟೆ ಈಗ ಹಿಂದುಳಿದ ಸಮುದಾಯ ಹಾಗೂ ಅಲ್ಪಸಂಖ್ಯಾತ ಸಮಯದಾಯದ ಸ್ವರೂಪ ಪಡೆದಿದೆ. ಚುನಾವಣೆ ಸೋಲು ಗೆಲುವಿನ ಬದಲು, ಈಗ ಜಾತಿ ಲೆಕ್ಕಾಚಾರದ ಸ್ವರೂಪವನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪಡೆದಿದೆ. ಈ ಮಧ್ಯೆ ಹಿಂದುಳಿದ ಸಮುದಾಯ ಅಲ್ಪಸಂಖ್ಯಾತ ಸಮುದಾಯ ಯಾವುದಕ್ಕೂ ಅನ್ಯಾಯವಾಗದಂತೆ ಕ್ರಮ ಆಗಲಿ ಅಂತ ಸಿದ್ದರಾಮಯ್ಯ ಬಣದ ವಾದವಾಗಿದೆ.
ಒಟ್ಟಾರೆ ಇಷ್ಟು ದಿನ ಯುವ ಕಾಂಗ್ರೆಸ್ ಗಾದಿ ಗಲಾಟೆ ಈಗ ಜಾತಿ ಲೆಕ್ಕಾಚಾರದ ಗಲಾಟೆಯಾಗಿ ಬದಲಾಗಿದೆ.