– ಯುವತಿಯ ಹೇಳಿಕೆಗಳನ್ನ ಧಾರಾವಾಹಿಗೆ ಹೋಲಿಕೆ
ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದ ಯುವತಿಯ ವೀಡಿಯೋಗಳನ್ನ ಧಾರಾವಾಹಿಗೆ ಹೋಲಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವರು, ಧಾರಾವಾಹಿಯ ರೀತಿಯಲ್ಲಿಯೇ ಆಡಿಯೋ, ವೀಡಿಯೋಗಳು ಹೊರ ಬರುತ್ತಿವೆ. ಯುವತಿ ಬಿಡುಗಡೆ ಮಾಡಿರುವ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಾರೆ. ತನಿಖೆಯನ್ನು ನಿಷ್ಠುರವಾಗಿ, ನ್ಯಾಯಸಮ್ಮತವಾಗಿ ಮಾಡುತ್ತೇವೆ. ಯಾರ ಪರ, ಯಾರ ವಿರುದ್ಧ ತನಿಖೆ ಮಾಡುವುದಿಲ್ಲ. ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಸಹಾಯ ಕೇಳಿ ಡಿಕೆಶಿ ಮನೆ ಹತ್ರ ಹೋಗಿದ್ದು ನಿಜ: ಸಿಡಿ ಯುವತಿಯ ಹೇಳಿಕೆ
Advertisement
Advertisement
ದಿನನಿತ್ಯವೂ ಸರಣಿ ವಿಡಿಯೋ ಆಡಿಯೋ ಬಿಡುಗಡೆಯಾಗುತ್ತಿದೆ. ಸಿಡಿ, ಆಡಿಯೋ, ವಿಡಿಯೋ ಇಟ್ಟುಕೊಂಡು ಎಸ್‍ಐಟಿ ಕೂಲಂಕುಷವಾಗಿ ತನಿಖೆ ಮಾಡುತ್ತದೆ. ವೈಜ್ಞಾನಿಕವಾಗಿ ಪರಿಶೀಲನೆ ಮಾಡಲಾಗುತ್ತದೆ. ಯಾವುದೇ ರೀತಿಯ ಒತ್ತಡ, ಪ್ರಭಾವ ಅಥವಾ ದಾರಿ ತಪ್ಪಿಸುವುದು ನಡೆಯುವುದಿಲ್ಲ. ಎಸ್‍ಐಟಿ ಕ್ರಮಬದ್ಧವಾಗಿ, ಕಾನೂನುಬದ್ಧವಾಗಿ ತನಿಖೆ ಮಾಡಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಂತ್ರಸ್ತೆಗೆ ನ್ಯಾಯ ಸಿಗಬೇಕಾದ್ರೆ ಆರೋಪಿಯ ಬಂಧಿಸಿ: ಯುವತಿ ಪರ ವಕೀಲ
Advertisement
Advertisement
ಎರಡು, ಮೂರು ಹಾಗೂ ನಾಲ್ಕನೇ ವೀಡಿಯೋದಲ್ಲಿ ಎಸ್‍ಐಟಿ ತನಿಖೆಯ ಬಗ್ಗೆ ಯುವತಿ ಅನುಮಾನ ವ್ಯಕ್ತಪಡಿಸಿದ್ದರು. ಇಂದು ಸಹ ಎಸ್‍ಐಟಿ ತನ್ನ ಪೋಷಕರಿಗೆ ಸೂಕ್ತ ರಕ್ಷಣೆ ನೀಡುತ್ತಿಲ್ಲ. ರಮೇಶ್ ಜಾರಕಿಹೊಳಿ ಅವರಿಂದ ತನಗೂ ಮತ್ತು ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಯುವತಿ ಆರೋಪಿಸಿರುವ ವೀಡಿಯೋ ಇಂದು ಬಿಡುಗಡೆಯಾಗಿದೆ. ಇದನ್ನೂ ಓದಿ: ಯುವತಿ ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿರಬಹುದು : ಡಿಕೆ ಶಿವಕುಮಾರ್