– ಜೆಡಿಎಸ್ ಎಂದೂ ರೈತ ವಿರೋಧಿ ನಿಲುವು ತಳೆಯಲ್ಲ
– ಜೆಡಿಎಸ್ ಗುಲಾಮಿ ಸಂಸ್ಕೃತಿಯ ಪಕ್ಷವಲ್ಲ
– ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ಕಿಡಿ
ಬೆಂಗಳೂರು: ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಜೆಡಿಎಸ್ ರೈತರ ಹಿತ ಕಾಯುತ್ತ ಆ ಕೆಲಸ ಮಾಡಿದೆ ಎಂದು ಪಕ್ಷವನ್ನು ಟೀಕಿಸಿದವರ ವಿರುದ್ಧ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಈ ಸಂಬಂಧ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ನಾವು ಬೆಂಬಲಿಸಿದ್ದು ಯಾಕೆ ಎಂಬುದನ್ನು ಸಮರ್ಥಿಸಿ ಸರಣಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಜೆಡಿಎಸ್ ಎಂದೂ ಗುಲಾಮಿ ಸಂಸ್ಕೃತಿಯ ಪಕ್ಷವಲ್ಲ ಎಂದು ಹೇಳಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬೆಳಗ್ಗೆ ಬಂದ್‍ಗೆ ಜೆಡಿಎಸ್ ಸಪೋರ್ಟ್, ಮಧ್ಯಾಹ್ನ ಬಿಲ್‍ಗೆ ಬೆಂಬಲ- ಮೇಲ್ಮನೆಯಲ್ಲಿ ಭೂಸುಧಾರಣೆ ಮಸೂದೆ ಪಾಸ್
79(ಎ, ಬಿ) ಕಲಂಗೆ ಇತಿಶ್ರೀ ಹಾಡಿರುವುದು ನಮ್ಮ ಕೃಷಿ ವ್ಯಾಪ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಯುವಕರನ್ನು ಕೃಷಿಯತ್ತ ಆಕರ್ಷಿಸಲು ಸಹಾಯಕವಾಗುತ್ತದೆ. ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಬಯಸುವವರಿಗೆ ಹಾದಿ ಸುಗಮವಾಗುತ್ತದೆ. ಸಾಂಪ್ರದಾಯಕ ಕೃಷಿಯ ಜಾಗಕ್ಕೆ ವೈಜ್ಞಾನಿಕ ಕೃಷಿ ಬರಲು ಅನುಕೂಲವಾಗುತ್ತದೆ. ಇದನ್ನು ಎಲ್ಲರೂ ಗಮನಿಸಬೇಕು. 7/10
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 9, 2020
ಟ್ವೀಟ್‌ನಲ್ಲಿ ಏನಿದೆ?
ವಿರೋಧಕ್ಕೆ ಮಾತ್ರ ವಿರೋಧ ಪಕ್ಷವಲ್ಲ. ತನ್ನ ಜವಾಬ್ದಾರಿಗಳನ್ನು ಅದು ರಚನಾತ್ಮಕವಾಗಿ ನಿರ್ವಹಿಸಬೇಕು. ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಜೆಡಿಎಸ್ ರೈತರ ಹಿತ ಕಾಯುತ್ತ ಆ ಕೆಲಸ ಮಾಡಿದೆ. ಕಾಯ್ದೆ ವಿಚಾರವಾಗಿ ನ್ಯಾಯ ಕಾಂಗ್ರೆಸ್ ಕಡೆಯೂ ಇರಲಿಲ್ಲ, ಬಿಜೆಪಿ ಕೆಡೆಯೂ ಇರಲಿಲ್ಲ. ಕಾಯ್ದೆ ಸಮತೋಲನಗೊಳ್ಳುವಂತೆ ಜೆಡಿಎಸ್ ಮಾಡಿದೆ.
79(ಎ, ಬಿ) ಕಲಂಗೆ ಇತಿಶ್ರೀ ಹಾಡಿರುವುದು ನಮ್ಮ ಕೃಷಿ ವ್ಯಾಪ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಯುವಕರನ್ನು ಕೃಷಿಯತ್ತ ಆಕರ್ಷಿಸಲು ಸಹಾಯಕವಾಗುತ್ತದೆ. ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಬಯಸುವವರಿಗೆ ಹಾದಿ ಸುಗಮವಾಗುತ್ತದೆ. ಸಾಂಪ್ರದಾಯಕ ಕೃಷಿಯ ಜಾಗಕ್ಕೆ ವೈಜ್ಞಾನಿಕ ಕೃಷಿ ಬರಲು ಅನುಕೂಲವಾಗುತ್ತದೆ. ಇದನ್ನು ಎಲ್ಲರೂ ಗಮನಿಸಬೇಕು.
ಬಿಜೆಪಿ ಪ್ರಸ್ತಾಪಿಸಿದ ಭೂ ಸುಧಾರಣಾ ತಿದ್ದುಪಡಿ ಮಸೂದೆ, ಅದರಲ್ಲಿದ್ದ ಕೆಲ ಅಂಶಗಳನ್ನು ಜೆಡಿಎಸ್ ಆರಂಭದಲ್ಲಿ ವಿರೋಧಿಸಿತ್ತು. ಅದರಲ್ಲಿ ಏನೇನು ಬದಲಾವಣೆಗಳು ಆಗಬೇಕು ಎಂಬುದನ್ನು ಹೇಳಿತ್ತು. ಕಾಂಗ್ರೆಸ್ ಕೂಡ ಮಸೂದೆ ವಿರೋಧಿಸಿತ್ತಾದರೂ, ಏನು ಬದಲಾವಣೆ ಆಗಬೇಕು ಎಂಬುದನ್ನು ಹೇಳಿರಲಿಲ್ಲ. ಅದು ವಿರೋಧಕ್ಕೆ ಮಾತ್ರ ಸೀಮಿತವಾಗಿತ್ತು.
ಜೆಡಿಎಸ್ ಸೂಚಿಸಿದಂತೆ ಕಾಯ್ದೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಮೊದಲು ಪ್ರಸ್ತಾಪಿಸಿದ ಮಸೂದೆಯಲ್ಲಿ ಯಾವುದೇ ವ್ಯಕ್ತಿ ಗರಿಷ್ಠ 248 ಎಕರೆ ಜಮೀನು ಹೊಂದಲು ಅವಕಾಶವಿತ್ತು. ಆದರೆ, ಈಗ ಅದನ್ನು ತೆಗೆದು ಹಾಕಲಾಗಿದೆ. ಕಲಂ 80ರ ಅಡಿಯ ನೀರಾವರಿ ಜಮೀನನ್ನು ಕೃಷಿ ಉದ್ದೇಶಕ್ಕೆ ಮಾತ್ರವೇ ಬಳಸಬೇಕು ಎಂಬ ನಿಬಂಧನೆ ವಿಧಿಸಲಾಗಿದೆ.
ಭೂಸುಧಾರಣ ಕಾಯ್ದೆಯಲ್ಲಿ ನಿಜವಾದ ಸುಧಾರಣಾ ಕ್ರಮಗಳನ್ನು ಸಾಧಿಸಿದ್ದು ಜೆಡಿಎಸ್. ಆದರೂ ವಿಮರ್ಶೆ ಇಲ್ಲದೇ ಏಕಾಏಕಿ ಜೆಡಿಎಸ್ ಅನ್ನು ದೂರಲಾಗುತ್ತಿದೆ. ಜೆಡಿಎಸ್‌ನ ಮೇಲೆ ದಾಳಿ ಮಾಡುತ್ತಿರುವ ಕೆಲ ರೈತ ಮುಖಂಡರು ಒಂದು ಬಾರಿ ಪರಾಮರ್ಶೆ ಮಾಡಲಿ. ಜೆಡಿಎಸ್ ರೈತ ವಿರೋಧಿ ನಿಲುವು ತಳೆಯಲು ಎಂದಾದರೂ ಸಾಧ್ಯವೇ ಎಂದು ಪ್ರಶ್ನೆ ಮಾಡಿಕೊಳ್ಳಲಿ.
ಮಿತಿಗಳು, ಭಿನ್ನಮತಗಳ ನಡುವೆಯೂ ರೈತರ 25 ಸಾವಿರ ಕೋಟಿಗೂ ಮಿಗಿಲಾದ ಸಾಲ ಮನ್ನಾ ಮಾಡಿದ್ದು ಇದೇ ಕುಮಾರಸ್ವಾಮಿಯೇ ಹೊರತು ಬೇರಾರೂ ಅಲ್ಲ. ಆಗ ನನ್ನನ್ನು ಯಾರೊಬ್ಬರೂ ಬೆನ್ನುತಟ್ಟಲಿಲ್ಲ, ರೈತರಿಗೆ ನೀಡಿದ ವಚನ ಪಾಲಿಸಿ, ಅಧಿಕಾರದಿಂದ ಹೊರ ನಡೆದಾಗ ನನ್ನ ಬೆಂಬಲಕ್ಕೆ ಯಾರೂ ಬರಲಿಲ್ಲ. ಈಗ ಸುಧಾರಣೆ ಕ್ರಮಗಳನ್ನು ಸಾಧಿಸಿದಾಗಲೂ ನಾನು ಏಕಾಂಗಿ.
ನನ್ನನ್ನು ಟೀಕೆ ಮಾಡುತ್ತಿರುವ ಮನಸ್ಸುಗಳು ಒಮ್ಮೆ ನನ್ನ ರೈತ ಪರ ನಿಲುವುಗಳನ್ನು ಪರಾಮರ್ಶೆ ಮಾಡಲಿ, ಈ ವರೆಗಿನ ನನ್ನ ರೈತ ಪರ ಕಾರ್ಯಕ್ರಮಗಳನ್ನು ಅವಲೋಕಿಸಲಿ. ರೈತ ಕುಟುಂಬದಿಂದ ಬಂದ, ಮಣ್ಣಿನಿಂದ ಮೇಲೆದ್ದ ದೇವೇಗೌಡರ ಹಾದಿಯಲ್ಲಿ ನಡೆಯುತ್ತಿರುವ ನಾನು ಮತ್ತು ಜೆಡಿಎಸ್ ಈ ಮಣ್ಣಿಗೆ, ಮಣ್ಣಿನ ಮಕ್ಕಳಿಗೆ ಎಂದೂ ದ್ರೋಹ ಮಾಡುವುದಿಲ್ಲ.
ನಿಮ್ಮ ತಾಳಕ್ಕೆ ಕುಣಿಯಲು ಜೆಡಿಎಸ್ ಗುಲಾಮಿ ಸಂಸ್ಕೃತಿಯ ಪಕ್ಷವಲ್ಲ ರಾಜ್ಯದ ಇಂದಿನ ರಾಜಕಾರಣದ ಅಯೋಮಯ ಸ್ಥಿತಿಗೆ ನಿಮ್ಮ ದ್ವಂದ್ವ ಹಾಗೂ ಇಬ್ಬಂದಿತನದ ನಿಲುವೇ ಕಾರಣ.
ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ವೇಳೆ ಜೆಡಿಎಸ್ ಜಾತ್ಯತೀತತೆ ಬಹಿರಂಗವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರ ದೃಷ್ಟಿಯಲ್ಲಿ ಜಾತ್ಯತೀತತೆ ಅಂದರೆ ಏನು? ಇದನ್ನು ಈ ವೇಳೆಯಲ್ಲಿ ತಿಳಿಯ ಬಯಸುತ್ತೇನೆ. ಕಾಂಗ್ರೆಸ್ಸಿನ ಅಪವ್ಯಾಖ್ಯಾನದಿಂದಲೇ ಇಂದು ಜಾತ್ಯತೀತೆಯನ್ನು ಅನುಮಾನಿಸಲಾಗುತ್ತಿದೆ.
ಜೆಡಿಎಸ್ ಸೂಚಿಸಿದಂತೆ ಕಾಯ್ದೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಮೊದಲು ಪ್ರಸ್ತಾಪಿಸಿದ ಮಸೂದೆಯಲ್ಲಿ ಯಾವುದೇ ವ್ಯಕ್ತಿ ಗರಿಷ್ಠ 248 ಎಕರೆ ಜಮೀನು ಹೊಂದಲು ಅವಕಾಶವಿತ್ತು. ಆದರೆ, ಈಗ ಅದನ್ನು ತೆಗೆದು ಹಾಕಲಾಗಿದೆ. ಕಲಂ 80ರ ಅಡಿಯ ನೀರಾವರಿ ಜಮೀನನ್ನು ಕೃಷಿ ಉದ್ದೇಶಕ್ಕೆ ಮಾತ್ರವೇ ಬಳಸಬೇಕು ಎಂಬ ನಿಬಂಧನೆ ವಿಧಿಸಲಾಗಿದೆ. 3/10
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 9, 2020