ಅಪಾಯಕಾರಿ ಬೈಕ್ ಸ್ಟಂಟ್ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಯುವಕನೋರ್ವ ಬೈಕ್ ಸ್ಟಂಟ್ ಮಾಡುತ್ತಿರುವ ವೇಳೆ ನೆರೆ ಮನೆಯವರ ಕಾಂಪೌಂಡ್ ಗೆ ಗುದ್ದಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ನ ಸ್ಪ್ಲೆಂಡರ್ ಬುಲೆಟ್ ಲೋವ್ ಎಂಬ ಖಾತೆಯಲ್ಲಿ ಶೇರ್ ಮಾಡಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾವಿರಾರು ಲೈಕ್ಸ್ ಮತ್ತು ವ್ಯೂವ್ಸ್ ಪಡೆದುಕೊಂಡಿದೆ.
View this post on Instagram
ವೀಡಿಯೋದಲ್ಲಿ ಯುವಕನೋರ್ವ ನೀರಿನ ಮೇಲೆ ತನ್ನ ಬೈಕನ್ನು ವ್ಹೀಲಿಂಗ್ ಮಾಡಿ, ಒಂದೇ ಚಕ್ರದಲ್ಲಿ ಗಾಡಿಯನ್ನು ಓಡಿಸುತ್ತಾನೆ. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ನೆರೆಮನೆಯವರ ಕಾಂಪೌಂಡ್ಗೆ ಡಿಕ್ಕಿ ಹೊಡೆದು ಗೋಡೆ ಕಿತ್ತು ಹೋಗುತ್ತದೆ. ಗೋಡೆ ಒಡೆದು ಹೋದರೂ ಯುವಕ ಮಾತ್ರ ಬೈಕನ್ನು ತನ್ನ ಕೈಯಲ್ಲಿಯೇ ಬಿಗಿಯಾಗಿ ಹಿಡಿದುಕೊಂಡಿರುತ್ತಾನೆ. ಅಲ್ಲದೇ ಹೆಲ್ಮೆಟ್ ಕೂಡ ಧರಿಸಿರುವುದಿಲ್ಲ. ಅದೃಷ್ಟವಶಾತ್ ಯುವಕ ಅಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ನಟಿ ಸುರೇಖಾ ಸಿಕ್ರಿ ಇನ್ನಿಲ್ಲ