ಚಾಮರಾಜನಗರ: ಲಾಕ್‍ಡೌನ್ ವೇಳೆ ಮಾತ್ರೆ ಖರೀದಿಸಲು ಬಂದಿದ್ದ ಯುವಕನಿಗೆ ದರ್ಪ ತೋರಿ ಕಾಲಿನಿಂದ ಒದ್ದು ನಿಂದಿಸಿದ್ದ ಎಎಸ್‍ಐ ಅವರನ್ನು ಎಸ್ಪಿ ಅಮಾನತು ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಮೇ 23 ರಂದು ಯುವಕನೋರ್ವ ಮಾತ್ರೆ ಖರೀದಿಸಲು ಬೈಕ್‍ನಲ್ಲಿ ನಗರಕ್ಕೆ ಬಂದಿದ್ದ. ಈ ವೇಳೆ ಕೊಳ್ಳೇಗಾಲ ಪಟ್ಟಣ ಠಾಣೆಯ ಎಎಸ್‍ಐ ರಾಮಸ್ವಾಮಿ, ಯುವಕನಿಗೆ ದರ್ಪ ತೋರಿ ಕಾಲಿಂದ ಒದ್ದು ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದರು. ಯುವಕನಿಗೆ ನಿಂದಿಸಿ, ಒದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆಯ ಬಳಿಕ ಎಎಸ್‍ಐ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನ್ನೂ ಓದಿ: ಬೈಕ್ ಬಿಟ್ಟು ಬಿಡಿ – ಡಿವೈಎಸ್ಪಿ ಕಾಲಿಗೆ ಬಿದ್ದು ಮಹಿಳೆ ಕಣ್ಣೀರು
ಈ ಹಿನ್ನಲೆಯಲ್ಲಿ ಚಾಮರಾಜನಗರ ಎಸ್ಪಿ ದಿವ್ಯ ಸಾರಾ ಥಾಮಸ್, ಘಟನೆಯ ಬಗ್ಗೆ ಸರಿಯಾಗಿ ತನಿಖೆ ನಡೆಸಿ ಯುವಕನಿಗೆ ಕಾಲಿನಿಂದ ಒದ್ದು ಅಶಿಸ್ತು ತೋರಿದ ಎಎಸ್‍ಐ ರಾಮಸ್ವಾಮಿ ವಿರುದ್ಧ ಕ್ರಮ ಕೈಗೊಂಡಿದ್ದು, ರಾಮಸ್ವಾಮಿ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.