ಲಂಡನ್: ಆಕ್ಸಫರ್ಡ್ ವಿಶ್ವವಿದ್ಯಾಲಯದ ಆಸ್ಟ್ರಾಜೆನಿಕಾ ಲಸಿಕೆಯ ತುರ್ತು ಬಳಕೆಗೆ ಯುಕೆ ಸರ್ಕಾರ ಅನುಮತಿ ನೀಡಿದೆ. ಕೊರೊನಾ ರೂಪಾಂತರಿ ವೈರಸ್ ನಿಂದ ಬಿಗಾಯಿಡಿಸುತ್ತಿರುವ ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಲಸಿಕೆ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ವರದಿಯಾಗಿದೆ.
Advertisement
ಮುಂದಿನ ವಾರದೊಳಗೆ ಫೈಜರ್ ಲಸಿಕೆಯನ್ನ ಸುಮಾರು 60 ಸಾವಿರ ಜನರಿಗೆ ನೀಡಲಾಗುವುದು. ಬುಧವಾರವೇ ಅಸ್ಟ್ರಾಜೆನಿಕಾ ಲಸಿಕೆ ಮೊದಲ ಡೋಸ್ ನೀಡುವ ಕೆಲಸ ಆರಂಭವಾಗಲಿದೆ. ಮೂರು ತಿಂಗಳಲ್ಲಿ 1 ಕೋಟಿ ಜನರಿಗೆ ಫಸ್ಟ್ ಡೋಸ್ ನೀಡುವ ಗುರಿಯನ್ನು ಯುಕೆ ಸರ್ಕಾರ ಹೊಂದಿದೆ.
Advertisement
Advertisement
ಸೋಮವಾರ ಆಸ್ಟ್ರಾಜೆನಿಕಾ ಲಸಿಕೆಗೆ ಅಧಿಕೃತವಾಗಿ ಅನುಮತಿ ನೀಡಲಾಗಿದೆ. ಲಸಿಕೆ ಪೂರೈಕೆ ಆಗುವರೆಗೂ ಕಟ್ಟುನಿಟ್ಟಿನ ಲಾಕ್‍ಡೌನ್ ನಿಯಮಗಳು ಇರಲಿದ್ದು, ಹಂತ ಹಂತವಾಗಿ ವಿನಾಯ್ತಿಗಳನ್ನು ನೀಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಹೊಸ ರೂಪಾಂತರಿ ವೈರಸ್ ಭೀತಿಯಿಂದಾಗಿ ಕ್ರಿಸ್‍ಮಸ್ ಆಚರಣೆ ರದ್ದುಗೊಳಿಸಲಾಗಿತ್ತು ಎಂದು ಯುಕೆ ಸಚಿವ ಮೈಕಲ್ ಗೋವ್ ತಿಳಿಸಿದ್ದಾರೆ.
Advertisement
ಲಂಡನ್ ಮತ್ತು ದಕ್ಷಿಣ ಇಂಗ್ಲೆಂಡ್ ನಲ್ಲಿ ಲಸಿಕೆಯ ತುರ್ತು ಅಗತ್ಯವಿದೆ. ಹೊಸ ರೂಪಾಂತರಿ ವೈರಸ್ ಹರಡುವಿಕೆ ವೇಗ ಹೆಚ್ಚಿದ್ದು ವಿದೇಶಗಳಿಗೆ ವಿಮಾನ ಸಂಚಾರ ರದ್ದುಗೊಳಿಸಲಾಗಿದೆ. ಆಸ್ಟ್ರಾಜೆನಿಕಾ ಇತರ ಲಸಿಕೆಗಿಂತ ಕಡಿಮೆ ತಾಪಮಾನದಲ್ಲಿ ಸ್ಟೋರ್ ಮಾಡಬಹುದಾಗಿದೆ.
ಯುಕೆಯ ಲಕ್ಷಾಂತರ ಜನಕ್ಕೆ ತುಂಬಾ ಪ್ರಮುಖ ಮತ್ತು ಮಹತ್ವದ ದಿನ. ಇಂಗ್ಲೆಂಡ್ ಜನತೆ ಹೊಸ ಕೊರೊನಾ ಲಸಿಕೆ ಲಭ್ಯವಾಗಲಿದೆ. ಲಸಿಕೆ ಪರಿಣಾಮಕಾರಿಯಾಗಿದ್ದು, ಶೇಖರಣೆ ಮತ್ತು ಪೂರೈಕೆಯೂ ಸರಳವಾಗಿರಲಿದೆ. ಯಾವುದೇ ಲಾಭಾಂಶವಿಲ್ಲದೇ ಈ ಲಸಿಕೆಯನ್ನ ಪೂರೈಸಲಾಗುವುದು ಎಂದು ಅಸ್ಟ್ರಾಜೆನಿಕಾ ಸಿಇಓ ಪಾಸ್ಕಲ್ ಸೊರಿಯಾಟ್ ಸಂತಸ ವ್ಯಕ್ತಪಡಿಸಿದ್ದಾರೆ.
Oxford University/AstraZeneca’s Covid-19 vaccine approved by the United Kingdom regulator
"Govt has today accepted the recommendation from the Medicines and Healthcare products Regulatory Agency to authorise Oxford University/AstraZeneca’s Covid-19 vaccine for use," says UK Govt
— ANI (@ANI) December 30, 2020