ಸಾಮಾನ್ಯವಾಗಿ ಕೂದಲಿಗೆ ಸದಾ ಒಂದೇ ರೀತಿಯ ಹೇರ್ ಕಲರ್ ಹಚ್ಚಿದರೆ ಬೋರ್ ಆಗುತ್ತದೆ. ಮೊದಲಿಗೆ ಹೇರ್ ಕಲರ್ ಹಚ್ಚಿಕೊಂಡಾಗ ಅದನ್ನು ಬಹಳ ಇಷ್ಟ ಪಡುತ್ತೀರಾ, ಆದರೆ ತಿಂಗಳುಗಳು ಕಳೆದಂತೆ ಕನ್ನಡಿ ಮುಂದೆ ನಿಂತಾಗ ಒಂದೇ ರೀತಿಯ ಹೇರ್ ಕಲರ್ ನಿಮಗೆ ಬೇಸರ ತರಿಸುತ್ತದೆ. ಹೀಗಾಗಿ ಅದರಲ್ಲಿ ಹೊಸತನ ಹುಡುಕಲು ಆರಂಭಿಸುತ್ತೀರ. ಖುಷಿ ವಿಚಾರವೆಂದರೆ ಇದೀಗ ಹೇರ್ ಕಲರ್‍ಗೊಳಿಸಲು ಹಲವಾರು ರೀತಿಯ ಬಣ್ಣಗಳಿವೆ. ಅದರಲ್ಲೂ ನಿಮ್ಮ ಸ್ಕೀನ್ ಕಲರ್‍ಗೆ ಮ್ಯಾಚ್ ಆಗುವಂತಹ ಹೇರ್ ಕಲರ್ ನಿಮಗೆ ಸಖತ್ ರಿಚ್ ಲುಕ್ ನೀಡುತ್ತದೆ. ಆದರೆ ನಿಮ್ಮ ಕೂದಲಿಗೆ ಸೂಟ್ ಆಗುವಂತಹ ಬಣ್ಣ ಯಾವುದು? ಯಾವ ತರಹದ ಕೂದಲಿಗೆ ಯಾವ ಬಣ್ಣ ಹಚ್ಚಿಕೊಳ್ಳಬೇಕು ಈ ಎಲ್ಲದರ ಬಗ್ಗೆ ಕೆಲವೊಂದಷ್ಟು ಮಾಹಿತಿ ಈ ಕೆಳಗಿನಂತಿದೆ.
Advertisement
ಬೋಲ್ಡ್ ಕಲರ್ ಹೇರ್
ದಪ್ಪ ಹಾಗೂ ಉದ್ದನೆಯ ಕೂದಲನ್ನು ಹೊಂದಿರುವವರು ಪರ್ಪಲ್(ನೇರಳೆ) ಮತ್ತು ಬ್ಲೂ(ನೀಲಿ) ಹೇರ್ ಕಲರಿಂಗ್ ಮಾಡಿಸಿದರೆ ನಿಮ್ಮ ಕೂದಲು ಬಹಳ ಸುಂದರವಾಗಿ ಕಾಣಿಸುತ್ತದೆ. ಅಲ್ಲದೆ ಈ ಬಣ್ಣ ಕೂದಲಗೆ ಆಕರ್ಷಕ ಲುಕ್ ನೀಡುತ್ತದೆ.
Advertisement
Advertisement
ರೆಡ್-ಬ್ರಾವ್ನ್ ಕಲರ್ ಹೇರ್
ರೆಡ್ ಹಾಗೂ ಬ್ರಾವ್ನ್ ಮಿಶ್ರಿತ ಕಲರ್ ಪ್ರಸ್ತುತ ಬೋಲ್ಡ್ ಲುಕ್ ನೀಡುತ್ತದೆ. ಎಲ್ಲಾ ರೀತಿಯ ಮಾಡ್ರೆನ್ ಡ್ರಸ್‍ಗಳಿಗೆ ಈ ಹೇರ್ ಕಲರ್ ಸಖತ್ ಮ್ಯಾಚ್ ಆಗುತ್ತದೆ.
Advertisement
ಟೂ-ಟೋನ್ಡ್ ಹೇರ್ ಕಲರ್
ಬೇಬಿ ಕಟ್ ಹೇರ್ ಸ್ಟೈಲ್ ಮಾಡಿಸಿದ್ರೆ, ನಿಮ್ಮ ಕೂದಲಿಗೆ ಟೂ-ಟೋನ್ಡ್ ಹೇರ್ ಕಲರ್ ಉತ್ತಮ. ಇದು ಒಂದೇ ಕಡೆ ಎರಡು ಶೇಡ್‍ನಂತೆ ಕಾಣಿಸುವ ಈ ಹೇರ್ ಕಲರ್ ಮಹಿಳೆಯರಿಗೆ ಸಖತ್ ಡಿಫರೆಂಟ್ ಲುಕ್ ನೀಡುತ್ತದೆ.
ಪ್ಲಾಟಿನಂ ಬ್ಲಾಂಡ್ ಹಾಗೂ ಪರ್ಪಲ್ ರೂಟ್ಸ್
ಕಣ್ಮನ ಸೆಳೆಯುವಂತಹ ಈ ಹೇರ್ ಕಲರ್ ಪ್ಲಾಟಿನಂ ಹಾಗೂ ಪರ್ಪಲ್(ನೇರಳೆ) ಮಿಶ್ರಣ ಹೊಂದಿರುವ ಹೇರ್ ಕಲರ್ ಆಗಿದ್ದು, ಇದು ಕೂದಲಿಗೆ ಸಖತ್ ಸ್ಟೈಲಿಶ್ ಲುಕ್ ನೀಡುತ್ತದೆ.
ಸ್ಟ್ರಾಬೆರಿ ಬ್ಲಾಂಡ್ ಒಂಬ್ರೆ
ಈ ಹೇರ್ ಕಲರ್ ಕೂದಲಿಗೆ ಕತ್ತಲಿನಲ್ಲಿಯು ಹೊಳಪು ನೀಡುತ್ತದೆ. ಸ್ಟ್ರಾಬೆರೆ ಬ್ರಾವ್ನ್ ಹಾಗೂ ಆರೆಂಜ್ ಕಲರ್ ಬಣ್ಣದಿಂದ ಮಿಶ್ರಣಗೊಂಡ ಹೇರ್ ಕಲರ್ ಆಗಿದ್ದು, ಬಿಳಿ ತ್ವಚೆ ಹೊಂದಿರುವವರಿಗೆ ಬಹಳ ಸುಂದರವಾಗಿ ಕಾಣಿಸುತ್ತದೆ.
ಒಟ್ಟಾರೆ ಮುಂಜಾಗ್ರತಾ ಕ್ರಮವಾಗಿ ನಿಮ್ಮ ತ್ವಚೆಯ ಆರೋಗ್ಯಕ್ಕೆ ಹೊಂದಾಣಿಕೆಯಾಗುವಂತಹ ಹೇರ್ ಕಲರ್ ಮಾಡಿಕೊಳ್ಳುವುದು ಉತ್ತಮ. ಇದನ್ನು ಓದಿ: ಮಹಿಳೆಯರ ಫೇಮಸ್ 5 ಅಂಡರ್‌ಕಟ್ ಹೇರ್ ಸ್ಟೈಲ್