ಚಿಕ್ಕಬಳ್ಳಾಪುರ: ರಾಮ ಮಂದಿರ ನಿರ್ಮಾಣಕ್ಕೆ ಯಾರಿಗೆ ದೇಣಿಗೆ ಕೊಡುವುದಕ್ಕೆ ಆಗುವುದಿಲ್ಲವೋ ಅವರು ಕೊಡುವುದು ಬೇಡ. ಯಾರಿಗೂ ಬಲವಂತ ಮಾಡುತ್ತಿಲ್ಲ ಎಂದು ಹೇಳುವ ಮೂಲಕ ವಿಪಕ್ಷಗಳ ಟೀಕೆಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ.
Advertisement
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಟೀಕೆ ಮಾಡುವವರಿಗೆ ಬೀಗ ಹಾಕುವುದಕ್ಕೆ ಆಗುವುದಿಲ್ಲ. ಶ್ರೀರಾಮ ಅಯೋಧ್ಯೆಯಲ್ಲಿ ನೆಲೆಸಿದ್ದ ಎಂಬುದು ಹಿಂದೂ ಧರ್ಮದಲ್ಲಿ ಇದೆ. ಹಾಗಾಗಿ ಶ್ರೀರಾಮಚಂದ್ರ ನಮ್ಮ ಆರಾಧ್ಯ ದೈವ. ರಾಮ ಮಂದಿರ ನಿರ್ಮಾಣದಲ್ಲಿ ಪ್ರತಿಯೊಬ್ಬರ ಕೊಡುಗೆ ಇರಬೇಕು ಎಂಬುವುದು ನಮ್ಮ ಭಾವನೆ. ಆದರೆ ಯಾರಿಗೆ ದೇಣಿಗೆ ಕೊಡುವುದಕ್ಕೆ ಆಗುವುದಿಲ್ಲವೋ ಅವರು ದೇಣಿಗೆ ಕೊಡುವುದು ಬೇಡ. ನಾವು ಯಾರಿಗೂ ಬಲವಂತ ಮಾಡುತ್ತಿಲ್ಲ. ಈ ವಿಚಾರದಲ್ಲಿ ಸಿದ್ದರಾಮಯ್ಯ ಆಗಲಿ, ಕುಮಾರಸ್ವಾಮಿ ಆಗಲಿ ಟೀಕೆ ಮಾಡಬಾರದು ಎಂದು ಹೇಳಿದರು.
Advertisement
Advertisement
ಕೇರಳ, ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಸಂಬಂಧ ಈಗಾಗಲೇ ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ. ಕೋವಿಡ್ ಶಮನವಾಗಿದೆ ಎಂದು ಕೆಲವರು ತಿಳಿದು ಕೊರೋನಾ ಕುರಿತಂತೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದು ಪರಿಣಾಮಕಾರಿಯಾಗಿದ್ದು, ಜನ ಎಚ್ಚರದಿಂದ ಇರಬೇಕು ಎಂದು ಸೂಚನೆ ನೀಡಿದರು.
Advertisement
ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಆಗಿದೆ. ಎಲ್ಲ ಸಚಿವರು ಅವರವರ ಅಭಿಪ್ರಾಯಗಳನ್ನ ತಿಳಿಸಿದ್ದಾರೆ. ಎಲ್ಲಾ ಸಮುದಾಯಗಳಿಗೂ ನ್ಯಾಯ ಕೊಡುವ ಆಶಯ ನಮ್ಮದಿದೆ. ಸಂವಿಧಾನದ ಆಶಯದಂತೆ ನೊಂದವರಿಗೆ ಮೀಸಲಾತಿ ಸಿಗಲಿದೆ. ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಹಿರಂಗವಾಗಿ ಯಾರೂ ಎಲ್ಲೂ ಕೇವಲವಾಗಿ ಮೀಸಲಾತಿ ಬಗೆಗೆ ಮಾತನಾಡಬಾರದು. ಏನೇ ಅಭಿಪ್ರಾಯ ಇದ್ದರೂ ಸಿಎಂ ಯಡಿಯೂರಪ್ಪರವರ ಗಮನಕ್ಕೆ ತರಬೇಕು. ಎಲ್ಲಾ ಸಮುದಾಯಗಳು ಮೀಸಲಾತಿ ಕೇಳುತ್ತಿವೆ. ಹಾಗಾಗಿ ಬಹಿರಂಗವಾಗಿ ಯಾರು ಮಾತನಾಡದಂತೆ ಎಚ್ಚರಿಕೆ ನೀಡಿದರು.