– ನನ್ನ ಸ್ನೇಹಿತರು ನನ್ನನ್ನು ಒಂಟಿ ಮಾಡಿದ್ದಾರೆ.
ಚಿತ್ರದುರ್ಗ: ಯಾರಿಗೆ ಗಟ್ಟಿ ಧ್ವನಿ ಇರುತ್ತೋ ಅವನು ಒಂಟಿ ಆಗುತ್ತಾನೆ. ನನ್ನ ಸ್ನೇಹಿತರು ನನ್ನನ್ನು ಒಂಟಿ ಮಾಡಿ ಹೋದರು. ಆದರೆ ನಾನು ಒಂಟಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದರು.
ಕಾಗಿನೆಲೆಯಿಂದ ಆರಂಭವಾಗಿರುವ ಕುರುಬ ಸಮುದಾಯದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಪಾದಯಾತ್ರೆಗೆ ತೆರಳುವ ಮುನ್ನ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ಒಂಟಿ ಅಲ್ಲ ರಾಜ್ಯದ ಜನರು ನನ್ನ ಜೊತೆಯಾಗಿದ್ದಾರೆ. ನನ್ನ 17 ಜನ ಸ್ನೇಹಿತರು ಬಿಡಿ, ಮಂತ್ರಿ ಆಗುತ್ತಾರೆ. ಅವರು ಅಷ್ಟಕ್ಕೆ ಸಿಮೀತ. ಆದರೆ ನಾನು ವಾಸ್ತವದ ನೆಲೆಗಟ್ಟಿನಲ್ಲಿ ಮಾತನಾಡುತ್ತಾ ಬಂದವನು ಎಂದರು.
ಅವರಿಗೆ ತಪ್ಪಿದ ಮಂತ್ರಿಗಿರಿ ಬಗ್ಗೆ ಪ್ರತಿಕ್ರಿಯಿಸಿ, ಮಂತ್ರಿಗಿರಿ ಸಿಗುತ್ತೋ ಬಿಡುತ್ತೋ ರಾಜ್ಯದ ಸಾಕ್ಷಿಪ್ರಜ್ಞೆಯಿಂದ ನಾನು ಸಹ 17 ಜನರ ಟೀಮ್‍ನಲ್ಲಿ ಇದ್ದೇನೆ. ನಾನೇ ಟೀಮ್ ಮುನ್ನಡೆಸಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ ತಮ್ಮನ್ನು ಬಿಟ್ಟು ಮಿತ್ರ ಮಂಡಳಿ ಚಿಕ್ಕಮಗಳೂರಿನಲ್ಲಿ ನಡೆಸಿರುವ ಗೌಪ್ಯ ಸಭೆ ವಿಚಾರವಾಗಿ ಮಾತನಾಡಿ ಬೇಸರ ವ್ಯಕ್ತಪಡಿಸಿದರು.
ನನ್ನ ಜೊತೆ ಮಾತಾಡಿದರೆ ಸಿಎಂ ಬಿಎಸ್‍ವೈ ಏನಾದರು ತಿಳಿದುಕೊಂಡರೆ? ಅಂತ ಪ್ರಶ್ನಾರ್ಥಕವಾಗಿ ಮಾತನಾಡಿದ್ದೂ, ಗಟ್ಟಿ ಧ್ವನಿ ರಾಜ್ಯದಲ್ಲಿ ಪ್ರತಿಧ್ವನಿಸುತ್ತದೆ ನನ್ನದು ಹೇಡಿ ಧ್ವನಿ ಅಲ್ಲ ಎಂದು ಕಿಡಿ ಕಾರಿದ್ದಾರೆ.