ಯಾದಗಿರಿ: ಪಬ್ಲಿಕ್ ಟಿವಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯಾದಗಿರಿ ಜಿಲ್ಲೆಯ ಕ್ಯಾಮೆರಾ ಮ್ಯಾನ್ ರೂಪೇಶ್ ಹುಲಿಕಾರರವರು ಜಿಲ್ಲಾಡಳಿತ ನೀಡುವ ಗಣರಾಜೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರೂಪೇಶ್‍ರವರು ಯಾದಗಿರಿ ಜಿಲ್ಲೆಯ ವೀಡಿಯೋ ಪತ್ರಕರ್ತರಾಗಿ ಪಬ್ಲಿಕ್ ಟಿವಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಾರಿ ಯಾದಗಿರಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದ ಸಂಧರ್ಭದಲ್ಲಿ ಸಾಕಷ್ಟು ಸಾಹಸಮಯ ಸನ್ನಿವೇಶಗಳು ಎದುರಿಸಿ, ಅತ್ಯುತ್ತಮವಾಗಿ ದೃಶ್ಯಗಳನ್ನು ಸೆರೆಹಿಡಿದಿದ್ದರು. ಅಲ್ಲದೆ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಜಿಲ್ಲಾಡಳಿತದಿಂದ ನಿರ್ಮಾಣಗೊಂಡ, ಜಾಗೃತಿ ಎಂಬ ಕಿರು ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದರು.
ರೂಪೇಶ್ ಅವರ ಈ ಕಾರ್ಯಗಳನ್ನು ಗುರುತಿಸಿರುವ ಯಾದಗಿರಿ ಜಿಲ್ಲಾಡಳಿತ, ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಗಣರಾಜ್ಯೋತ್ಸವದಂದು ನೀಡುವ ಪ್ರಶಸ್ತಿಗೆ ಈ ಬಾರಿ ಆಯ್ಕೆ ಮಾಡಿ ಗೌರವಿಸಿದೆ.
ಗಣರಾಜೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ನೀಡುವ ಅತ್ಯುತ್ತಮ ಛಾಯಾಗ್ರಹಕ ಪ್ರಶಸ್ತಿಗೆ ಆಯ್ಕೆಯಾಗಿರುವ ರೂಪೇಶ್ ಹುಲಿಕಾರರವರಿಗೆ, ನಾಳೆ ಧ್ವಜಾರೋಹಣ ಬಳಿಕ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಆರ್ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.