– ಬೆಳಗಾವಿಯ ಇಂಗಳಿ ಗ್ರಾಮದ ಜನ ಸ್ಥಳಾಂತರ
ಯಾದಗಿರಿ: ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಮುಂದುವರಿದಿದ್ದು, ಪ್ರವಾಹ ಹೆಚ್ಚುತ್ತಲೇ ಇದೆ. ಜಿಲ್ಲೆಯಲ್ಲಿ ಇದೀಗ ಎರಡು ನದಿಗಳ ಪ್ರವಾಹ ಎದುರಾಗಿದ್ದು, ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಒಂದೆಡೆ ಕೃಷ್ಣಾ ಭೋರ್ಗರೆಯುತ್ತಾ ಪ್ರವಾಹದ ಮೊದಲ ಪರಿಣಾಮ ನೀಡಿದರೆ, ಮತ್ತೊಂದೆಡೆ, ಭೀಮಾ ಮೆಲ್ಲಗೆ ಪ್ರವಾಹದ ಸುಳಿವನ್ನು ನೀಡುತ್ತಿದೆ. ಸೊನ್ನಾ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ಭಾರೀ ಪ್ರಮಾಣದ ನೀರು ಬಿಡಲಾಗುತ್ತಿದ್ದು, ಸೋಮವಾರ ರಾತ್ರಿಯಿಂದ 22,000 ಕ್ಯೂಸೆಕ್ ನೀರು ಭೀಮಾ ನದಿಗೆ ಬಿಡಲಾಗುತ್ತಿದೆ. ಇದರ ಪರಿಣಾಮ ನಗರದ ಹೊರಭಾಗದಲ್ಲಿನ ಭೀಮಾ ನದಿ ತೀರದ ಕಂಗಳೇಶ್ವರ ಹಾಗೂ ವೀರಾಂಜನೇಯ ದೇವಾಲಯ ಜಲಾವೃತವಾಗಿವೆ. ದೇವಸ್ಥಾನಗಳು ಸಂಪೂರ್ಣ ಜಲಾವೃತಗೊಂಡಿದ್ದು, ಜನ ಆತಂಕಗೊಂಡಿದ್ದಾರೆ.
Advertisement
Advertisement
ಇತ್ತ ಕೊಯ್ನಾ ಜಲಾಶಯದಿಂದ ನೀರು ಬಿಟ್ಟಿರುವ ಹಿನ್ನೆಲೆ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ನದಿ ತೀರದ ಜನ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದು, ಇಂಗಳಿ ಗ್ರಾಮದ ದನವಾಡೆ ತೋಟವನ್ನು ಕೃಷ್ಣಾ ನದಿ ನೀರು ಆವರಿಸಿಕೊಂಡಿದೆ. ಹೀಗಾಗಿ ಇಂಗಳಿ ಗ್ರಾಮದ ತೋಟದ ವಸತಿ ಪ್ರದೇಶದ ಜನ ಸ್ಥಳಾಂತಗೊಳ್ಳುತ್ತಿದ್ದಾರೆ. ಜನ ಭಯಭೀತರಾಗಿ ಸ್ವಯಂ ಪ್ರೇರಿತರಾಗಿ ಸ್ಥಳಾಂತರವಾಗುತ್ತಿದ್ದಾರೆ.
Advertisement
ಬೆಳಗಾವಿ ಜಿಲ್ಲಾಡಳಿತ ನದಿ ತೀರದ ಜನರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಪ್ರವಾಹ ಸ್ಥಿತಿ ಇದ್ದರೂ ಮನೆಯ ಅಧಿಕಾರಿಗಳು ಮಲಗಿದ್ದಾರೆ. ಚಿಕ್ಕೋಡಿ ಉಪ ವಿಬಾಧಿಕಾರಿಗಳ ನಿರ್ಲಕ್ಷ್ಯದಿಂದ ಜನ ಪರದಾಡುವಂತಾಗಿದೆ. ಜನರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಸೌಜನ್ಯಕ್ಕೂ ಒಂದು ಬೋಟ್ ವ್ಯವಸ್ಥೆ ಮಾಡಿಲ್ಲ. ಹೆಚ್ಚಿನ ಪ್ರಮಾಣದ ನೀರಿದ್ದರೂ ಜನ ಪ್ರಾಣದ ಹಂಗು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.
Advertisement
ಕೃಷ್ಣಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದರೂ, ಜಿಲ್ಲಾಡಳಿತದ ನಿರ್ಲಕ್ಷ್ಯ ವಹಿಸಿದ್ದು, ಪ್ರವಾಹ ಪೀಡಿತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷ್ಣಾ ನದಿಯ ಒಳವು 1.80 ಲಕ್ಷ ಕ್ಯೂಸೆಕ್ ಗಿಂತ ಹೆಚಾಗಿದ್ದು, ಇಷ್ಟಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ.