– ನೋಟೀಸ್ ಗೆ 11 ಪೇಜ್ ಉತ್ತರ ಕೊಟ್ಟಿದ್ದೇನೆ
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬ ಬಿಜೆಪಿ ಶಾಸಕರನ್ನ ಗೌರವಿಸ್ತಿಲ್ಲ. ಬಿಜೆಪಿ ಆಶಯಕ್ಕೆ ತಕ್ಕಂತೆ ಅಧಿಕಾರ ನಡೆಸ್ತಿಲ್ಲ. ಯಡಿಯೂರಪ್ಪ ಕುಟುಂಬದ ಬಗ್ಗೆಯೂ ಉಲ್ಲೇಖಿಸಿದ್ದೇನೆ. ಯಡಿಯೂರಪ್ಪ ಅವರ ಕುಟುಂಬದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನನಗೆ ನೋಟೀಸ್ ಬಂದಿದೆ, ತಲುಪಿದೆ. ನೋಟೀಸ್ ಗೆ 11 ಪೇಜ್ ಉತ್ತರ ಕೊಟ್ಟಿದ್ದೇನೆ ಎಂದರು.
Advertisement
Advertisement
ಬಿಹಾರದ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಎಷ್ಟು ಹಣ ಕಳುಹಿಸಿದ್ದಾರೆ..? ವಿಜಯೇಂದ್ರ ಅವರ ಆಪ್ತರ ಮೂಲಕ ಹಣ ಎಷ್ಟು ಕಳುಹಿಸಿದ್ರು ಎಂಬುದರ ಬಗ್ಗೆ ತನಿಖೆ ಆಗಬೇಕು. ಭ್ರಷ್ಟಾಚಾರ, ಹಸ್ತಕ್ಷೇಪ, ವರ್ಗಾವಣೆ ದಂಧೆ ಬಗ್ಗೆ ತನಿಖೆ ಮಾಡಬೇಕು ಎಂದು ಪತ್ರದಲ್ಲಿ ಹೇಳಿದ್ದೇನೆ. ನೋಟೀಸ್ ಗೆ ಉತ್ತರ ಕೊಡುವಾಗ ನಾನು ಪತ್ರದಲ್ಲಿ ಎಲ್ಲೂ ಕ್ಷಮೆ ಯಾಚಿಸಿಲ್ಲ. 11 ಪುಟಗಳ ಪತ್ರದಲ್ಲಿ 45 ಪ್ಯಾರ ಇದೆ, ಪ್ರತಿ ಪ್ಯಾರದ ವಿಚಾರಗಳನ್ನ ಹಂತ ಹಂತವಾಗಿ ಮಾಧ್ಯಮದ ಮುಂದೆ ಹೇಳುತ್ತೇನೆ ಎಂದರು.
Advertisement
ಬಿಹಾರ ಚುನಾವಣೆಗೆ ಫಂಡಿಂಗ್ ಮಾಡಿದ್ದಾರೆ. ಆರ್ ಜೆಡಿ, ಕಾಂಗ್ರೆಸ್ ಗೆ ವಿಜಯೇಂದ್ರ ಫಂಡಿಂಗ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿ ಕುಗ್ಗಿಸಲು ವಿಜಯೇಂದ್ರ ಫಂಡಿಂಗ್. ಆ ಕಾರಣಕ್ಕಾಗಿ ಫಂಡಿಂಗ್ ಮಾಡಿದ್ದಾರೆ ಎಂದು ಇದೇ ವೇಳೆ ಶಾಸಕರು ಆರೋಪಿಸಿದರು.
Advertisement
ಮಾರಿಷಸ್ ವಿಚಾರವನ್ನು ಬರೆದಿದ್ದೇನೆ. ಮಾರಿಷಸ್ ಗೆ ಏತಕ್ಕೆ ಹೋಗಿದ್ರು..? ಮಾರಿಷಸ್ ಗೆ ಯಾವ ಫ್ಲೈಟ್ ಗೆ ಹೋಗಿದ್ರು, ಆ ಫ್ಲೈಟ್ ನಂಬರ್ ಕೂಡ ಬರೆದಿದ್ದೇನೆ. ಎಷ್ಟು ಜನ ಹೋಗಿದ್ರು ಅನ್ನೋದನ್ನ ಬರೆದಿದ್ದೇನೆ. ಮಾಜಿ ಗೃಹ ಸಚಿವರೊಬ್ಬರ ಪಿಎ ಮೂಲಕ ಮಾರಿಷಸ್ ಗೆ ಏನೇನ್ ತಗೊಂಡಿದ್ದಾರೆ ಅನ್ನೋದನ್ನ ಉಲ್ಲೇಖಿಸಿದ್ದೇನೆ. ತನಿಖೆ ಮಾಡಲು ಆಗ್ರಹಿಸಿದ್ದೇನೆ ಎಂದು ಹೇಳಿದರು.
ರಾಮಮಂದಿರ ದೇಣಿಗೆ ವಿಚಾರದಲ್ಲಿ ವಿಪಕ್ಷಗಳ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ದೇಣಿಗೆ ಕೊಡಲು ಇಷ್ಟವಿದ್ದರೆ ಕೊಡಲಿ, ಇಲ್ಲವಾದರೆ ಬಿಡಲಿ. ಅಲ್ಲಿ ರಾಮಂಮದಿರ ನಿರ್ಮಾಣ ಆಗಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇವರಿಗೆ ರಾಮನ ವಿರುದ್ಧ ಮಾತನಾಡಿದರೆ ಮಾತ್ರ ಮುಸ್ಲಿಂ ವೋಟುಗಳು ಬೀಳುತ್ತವೆ. ಅದಕ್ಕೇ ಹೀಗೆ ಮಾತಾಡ್ತಾರೆ ಎಂದು ತಿಳಿಸಿದರು.
ಮಾರಿಷಸ್ ಪ್ರವಾಸದ ಬಗ್ಗೆ ಉತ್ತರ ನೀಡದೆ, ಡಿವಿ ಗುಂಡಪ್ಪನವರ, ಶಿವರಾಮ ಕಾರಂತರ ಮಾತನ್ನು ಹೇಳಿ ತಪ್ಪಿಸಿಕೊಳ್ಳಲು ಆಗಲ್ಲ. ಕೋಟ್ಯಂತರ ಕಾರ್ಯಕರ್ತರ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಹಾರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಎಷ್ಟು ಹಣ ಕಳುಹಿಸಿದ್ದಾರೆ ಎಂಬ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಯಡಿಯೂರಪ್ಪನವರು, ವಿಜಯೇಂದ್ರ ಉತ್ತರ ನೀಡಬೇಕು. ನಾನು ಆರೋಪ ಮಾಡಿರುವ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ನಾನು ಯಡಿಯೂರಪ್ಪ ನವರ ಆಡಳಿತ ಭ್ರಷ್ಟಾಚಾರ, ವಿಜಯೇಂದ್ರ ಅವರ ಹಸ್ತ ಕ್ಷೇಪದ ಬಗ್ಗೆ ಸವಿವರವಾಗಿ ಪತ್ರದಲ್ಲಿ ಬರೆದಿದ್ದೇನೆ. ನಾನು ಎಲ್ಲೂ ವಿಷಾದ, ಕ್ಷಮೆ ಕೇಳಿಲ್ಲ. ಸಾಕಷ್ಟು ವಿಚಾರ ನಾನು ಪ್ರಸ್ತಾಪ ಮಾಡಿದ್ದೇನೆ ಎಂದರು.