ಬೆಂಗಳೂರು: ರಾಮ ರಾಮರೇ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಸತ್ಯ ಪ್ರಕಾಶ್ ಇದೀಗ ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ. ವಿಶೇಷವೆಂದರೆ ಈ ಸಿನಿಮಾದ ಜೊತೆಗೆ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕೈ ಜೋಡಿಸಿದ್ದಾರೆ.
ಹೌದು ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾವನ್ನು ಪಿಆರ್ಕೆ ಬ್ಯಾನರ್ನಡಿ ನಿರ್ಮಾಣ ಮಾಡಲು ನಟ ಪುನೀತ್ ರಾಜ್ಕುಮಾರ್ ಮುಂದಾಗಿದ್ದಾರೆ. ಚಿತ್ರದ ಕಥೆ ಕೇಳಿ ಇಷ್ಟಪಟ್ಟಿರುವ ಪುನೀತ್ ರಾಜ್ ಕುಮಾರ್ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ.
ಏಪ್ರಿಲ್ನಲ್ಲಿಯೇ ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾದ ಚಿತ್ರೀಕರಣ ಆರಂಭವಾಗಬೇಕಿತ್ತು ಆದರೆ, ಕೊರೊನಾ ಲಾಕ್ಡೌನ್ ಕಾರಣಗಳಿಂದ ಸಿನಿಮಾದ ಚಿತ್ರೀಕರಣ ಈಗ ಆರಂಭವಾಗಿದ್ದು, ಶೂಟಿಂಗ್ ಸೆಟ್ಗೆ ಪುನೀತ್ ರಾಜ್ಕುಮಾರ್ರವರು ಭೇಟಿ ನೀಡಿದ್ದರು.
ರಾಮಾ ರಾಮಾ ರೇ ಸಿನಿಮಾದಲ್ಲಿ ಅಭಿನಯಿಸಿದ್ದ ನಟರಾಜ್ ಹಾಗೂ ಧರ್ಮಣ್ಣರವರೇ ಈ ಸಿನಿಮಾದಲ್ಲಿ ಕೂಡ ಅಭಿನಯಿಸುತ್ತಿದ್ದು, ಉಳಿದಂತೆ ಹೊಸ ಕಲಾವಿದರು ಅಭಿನಯಿಸಲಿದ್ದಾರೆ. ಇದನ್ನೂ ಓದಿ: ನನಗೆ ಎರಡು ಡೈವೋರ್ಸ್ ಆಗಿದೆ: ಚಕ್ರವರ್ತಿ ಚಂದ್ರಚೂಡ್