‘ಮ್ಯಾನ್ ಆಫ್ ದಿ ಮ್ಯಾಚ್’ಗೆ ನಟ ಪುನೀತ್ ರಾಜ್‍ಕುಮಾರ್ ಸಾಥ್

Public TV
1 Min Read
puneeth 2 1

ಬೆಂಗಳೂರು: ರಾಮ ರಾಮರೇ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಸತ್ಯ ಪ್ರಕಾಶ್ ಇದೀಗ ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ. ವಿಶೇಷವೆಂದರೆ ಈ ಸಿನಿಮಾದ ಜೊತೆಗೆ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೈ ಜೋಡಿಸಿದ್ದಾರೆ.

puneeth rajkumar video 2

ಹೌದು ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾವನ್ನು ಪಿಆರ್‌ಕೆ ಬ್ಯಾನರ್‍ನಡಿ ನಿರ್ಮಾಣ ಮಾಡಲು ನಟ ಪುನೀತ್ ರಾಜ್‍ಕುಮಾರ್ ಮುಂದಾಗಿದ್ದಾರೆ. ಚಿತ್ರದ ಕಥೆ ಕೇಳಿ ಇಷ್ಟಪಟ್ಟಿರುವ ಪುನೀತ್ ರಾಜ್ ಕುಮಾರ್ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ.

puneeth rajkumar 3

ಏಪ್ರಿಲ್‍ನಲ್ಲಿಯೇ ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾದ ಚಿತ್ರೀಕರಣ ಆರಂಭವಾಗಬೇಕಿತ್ತು ಆದರೆ, ಕೊರೊನಾ ಲಾಕ್‍ಡೌನ್ ಕಾರಣಗಳಿಂದ ಸಿನಿಮಾದ ಚಿತ್ರೀಕರಣ ಈಗ ಆರಂಭವಾಗಿದ್ದು, ಶೂಟಿಂಗ್ ಸೆಟ್‍ಗೆ ಪುನೀತ್ ರಾಜ್‌ಕುಮಾರ್‌ರವರು  ಭೇಟಿ ನೀಡಿದ್ದರು.

puneeth 1 1 medium

ರಾಮಾ ರಾಮಾ ರೇ ಸಿನಿಮಾದಲ್ಲಿ ಅಭಿನಯಿಸಿದ್ದ ನಟರಾಜ್ ಹಾಗೂ ಧರ್ಮಣ್ಣರವರೇ ಈ ಸಿನಿಮಾದಲ್ಲಿ ಕೂಡ ಅಭಿನಯಿಸುತ್ತಿದ್ದು, ಉಳಿದಂತೆ ಹೊಸ ಕಲಾವಿದರು ಅಭಿನಯಿಸಲಿದ್ದಾರೆ. ಇದನ್ನೂ ಓದಿ: ನನಗೆ ಎರಡು ಡೈವೋರ್ಸ್ ಆಗಿದೆ: ಚಕ್ರವರ್ತಿ ಚಂದ್ರಚೂಡ್

Share This Article
Leave a Comment

Leave a Reply

Your email address will not be published. Required fields are marked *