ಮುಂಬೈ: ಚೆನ್ನೈ ತಂಡದ ಸಿನ್ಪರ್ ಮೋಯಿನ್ ಅಲಿಯವರ ಮೋಡಿಗೆ ತಲೆ ಬಾಗಿದ ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ವಿರುದ್ಧ 45 ರನ್‍ಗಳ ಸೋಲು ಕಂಡಿದೆ.
Advertisement
ಚೆನ್ನೈ ಪರ ಬಿಗುವಿನ ದಾಳಿ ಸಂಘಟಿಸಿದ ಮೋಯಿನ್ ಅಲಿ 3 ಓವರ್ ಎಸೆದು 7 ರನ್ ನೀಡಿ ಡೇವಿಡ್ ಮಿಲ್ಲರ್, ರಿಯಾನ್ ಪರಾಗ್ ಮತ್ತು ಕ್ರಿಸ್ ಮೋರಿಸ್ ಅವರ ಪ್ರಮುಖ 3 ವಿಕೆಟ್ ಪಡೆಯುವ ಮೂಲಕ ಚೆನ್ನೈ ಗೆಲುವಿನ ರೊವಾರಿಯಾದರು.
Advertisement
ಚೆನ್ನೈ ನೀಡಿದ 189 ರನ್‍ಗಳ ಮೊತ್ತವನ್ನು ಬೆನ್ನಟ್ಟಲು ಹೊರಟ ರಾಜಸ್ಥಾನ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಆರಂಭಿಕ ಆಟಗಾರ ಮನನ್ ವೋಹ್ರ 14 ರನ್( 11 ಎಸೆತ, 1 ಬೌಂಡರಿ 1 ಸಿಕ್ಸರ್) ಸಿಡಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಬಳಿಕ ಬಂದ ನಾಯಕ ಸಂಜು ಸ್ಯಾಮ್ಸನ್ 1 ರನ್ ಮಾಡಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಶಿವಮ್ ದುಬೆ 17 ರನ್ (20 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಅದರು.
Advertisement
ಬಟ್ಲರ್ ಏಕಾಂಗಿ ಹೋರಾಟ
ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಮತ್ತೊಂದು ಕಡೆ ಏಕಾಂಗಿ ಹೋರಾಟ ನಡೆಸಿದ ಜೋಸ್ ಬಟ್ಲರ್ ರಾಜಸ್ಥಾನ ತಂಡಕ್ಕೆ ನೆರವಾದರು. ಆದರೆ 49 ರನ್(35 ಎಸೆತ, 5 ಬೌಂಡರಿ, 2 ಸಿಕ್ಸರ್ ಸಿಡಿಸಿ) ಜಡೇಜಾಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಒಂದು ರನ್‍ನಿಂದ ಅರ್ಧಶತಕ ಕೂಡ ವಂಚಿತರಾದರು.
Advertisement
ರಾಜಸ್ಥಾನಕ್ಕೆ ಕೈ ಕೊಟ್ಟು ಮಿಡಲ್ ಆರ್ಡರ್ ಬ್ಯಾಟ್ಸ್ ಮ್ಯಾನ್‍ಗಳು
ರಾಜಸ್ಥಾನ ತಂಡದ ಮಿಡಲ್ ಆರ್ಡರ್ ಬ್ಯಾಟ್ಸ್‍ಮ್ಯಾನ್‍ಗಳಾದ ಡೇವಿಡ್ ಮಿಲ್ಲರ್ 2 ರನ್ ರಿಯಾನ್ ಪರಾಗ್ 3 ರನ್ ಕ್ರೀಸ್ ಮೋರಿಸ್ ಶೂನ್ಯ ರನ್‍ಗೆ ಔಟ್ ಆಗುವ ಮೂಲಕ ರಾಜಸ್ಥಾನ ತಂಡಕ್ಕೆ ಮುಳುವಾದರು.
ಅಂತಿಮವಾಗಿ ರಾಜಸ್ಥಾನ ತಂಡ ನಿಗದಿತ ಓವರ್‍ಗಳಲ್ಲಿ 143 ರನ್‍ಗೆ 9 ವಿಕೆಟ್ ಕಳೆದುಕೊಂಡು 45 ರನ್‍ಗಳ ಪರಾಜಯ ಕಾಣಬೇಕಾಯಿತು.
ಚೆನ್ನೈಪರ ಬೌಲಿಂಗ್‍ನಲ್ಲಿ ಮಿಂಚಿದ ಮೋಯಿನ್ ಅಲಿ 3 ವಿಕೆಟ್, ಸ್ಯಾಮ್ ಕರ್ರನ್ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್, ಡೇಯ್ನ್ ಬ್ರಾವೋ ಮತ್ತು ಠಾಕೂರ್ ತಲಾ 1 ವಿಕೆಟ್ ಪಡೆದು ಮಿಂಚಿದರು.
ಚೆನ್ನೈ ಸಂಘಟಿತ ಬ್ಯಾಟಿಂಗ್
ಈ ಮೊದಲು ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಎದುರಾಳಿ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಮಾಡಿಕೊಟ್ಟರು. ಸಿಎಸ್‍ಕೆ ಪರ ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಡ್ ಹಾಗೂ ಫಾಫ್ ಡುಪ್ಲೆಸಿಸ್ ಮತ್ತೊಮ್ಮೆ ಉತ್ತಮ ಆರಂಭ ನೀಡಲು ವಿಫಲವಾದರು. ಋತುರಾಜ್ ಗಾಯಕ್ವಡ್ ಕೇವಲ 10 ರನ್ (13 ಎಸೆತ, 1 ಬೌಂಡರಿ) ಬಾರಿಸಿ ಔಟ್ ಆದರೆ, ಫಾಫ್ ಡುಪ್ಲೆಸಿಸ್ 33 ರನ್ (17 ಎಸೆತ, 4 ಬೌಂಡರಿ, 2 ಸಿಕ್ಸರ್) ಬಾರಿಸಿ ಡಗೌಟ್ ಸೇರಿಕೊಂಡರು. ನಂತರ ಬಂದ ಮೊಯೀನ್ ಅಲಿ ಸಿಡಿಯುವ ಸೂಚನೆ ನೀಡಿದರು ಕೂಡ 26 ರನ್ (20 ಎಸೆತ, 1 ಬೌಂಡರಿ, 2 ಸಿಕ್ಸರ್) ಸಿಡಿಸಿದ ವೇಳೆ ರಾಹುಲ್ ತೆವಾಟಿಯ ಬೌಲಿಂಗ್‍ನಲ್ಲಿ ರಿಯಾನ್ ಪರಾಗ್ ಅವರಿಗೆ ಕ್ಯಾಚ್ ನೀಡಿ ಹೊರನಡೆದರು.
ನಂತರ ಬಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮ್ಯಾನ್‍ಗಳು ಗಳಾದ ಸುರೇಶ್ ರೈನಾ 18 ರನ್(15 ಎಸೆತ, 1 ಬೌಂಡರಿ, 1 ಸಿಕ್ಸರ್), ಅಂಬಾಟಿ ರಾಯುಡು 27 ರನ್, (17 ಎಸೆತ, 3 ಸಿಕ್ಸರ್), ಸ್ಯಾಮ್ ಕರ್ರನ್ 18 ರನ್ ( 6 ಎಸೆತ, 1 ಸಿಕ್ಸ್) ಮತ್ತು ಎಂ.ಎಸ್ ಧೋನಿ 18 ರನ್ ( 17 ಎಸೆತ, 2 ಬೌಂಡರಿ) ಬಾರಿಸಿ ರನ್ ಹೆಚ್ಚಿಸಿದರು. ಬಳಿಕ ಕಡೆಯಲ್ಲಿ ಮಿಂಚಿದ ಡೇಯ್ನ್ ಬ್ರಾವೋ 20 ರನ್ (8 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸುವ ಮೂಲಕ ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು.
ರಾಜಸ್ಥಾನ ರಾಯಲ್ಸ್ ಪರ ಡಿಸೆಂಟ್ ಸ್ಪೇಲ್ ಮಾಡಿದ ಚೇತನ್ ಝಕರಿಯಾ 3 ವಿಕೆಟ್ ಕಿತ್ತು ಮಿಂಚಿದರು. ಕ್ರೀಸ್ ಮೋರಿಸ್ 2 ವಿಕೆಟ್ ಪಡೆದರು.