– ಇದೊಂದು ಕಾರ್ಪೊರೇಟ್ ಕಂಪನಿ ಸರ್ಕಾರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರು, ಕೂಲಿ ಕಾರ್ಮಿಕರು, ಬಡವರ ಪರವಿಲ್ಲ. ಇದೊಂದು ಕಾರ್ಪೋರೆಟ್ ಕಂಪನಿಗಳ ಸರ್ಕಾರ. ಮೋದಿ ದೇಶದಲ್ಲಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ ರಾಜ್ಯ ಸಭೆ ಸಂಸದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
Advertisement
ಇಂದು ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ಕೃಷಿ ಮಸೂದೆ ವಿರೋಧಿಸಿ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆ ಬಳಿಕ ಮಾತನಾಡಿದ ಅವರು, ಮೋದಿ ಸರ್ಕಾರ ರೈತ ವಿರೋಧಿ ಮಸೂದೆಗಳನ್ನು ಜಾರಗೆ ತಂದಿದೆ. ಇದು ರೈತರ ಪರವಾಗಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಅನುಚಿತ ವರ್ತನೆ ಆರೋಪ- ನಾಸೀರ್ ಹುಸೇನ್ ಸೇರಿ 8 ಸಂಸದರು ಅಮಾನತು
Advertisement
Delhi: TMC's Derek O'Brien & Dola Sen, AAP's Sanjay Singh, INC's Rajeev Satav, Ripun Bora & Syed Nasir Hussain, CPI(M)'s KK Ragesh & Elamaram Karim suspended for one week for unruly behaviour with the Rajya Sabha Deputy Chairman yesterday, protest in Parliament premises pic.twitter.com/kKJlaZDNpe
— ANI (@ANI) September 21, 2020
Advertisement
ಕೇಂದ್ರ ಸರ್ಕಾರ ಜಾರಿ ತರಲು ಹೊರಟಿರುವ ಮಸೂದೆಗಳಿಂದ ರೈತರಿಗೆ ಲಾಭವಿಲ್ಲ. ಕಾರ್ಪೊರೇಟ್ ಕಂಪನಿಗಳ ಪರವಾಗಿ ಕಾನೂನು ತಂದಿದ್ದಾರೆ. ನಾವು ರೈತರ ಪರವಾಗಿ ನ್ಯಾಯಯುತ ಬೇಡಿಕೆ ಇಟ್ಟಿದ್ದು, ನ್ಯಾಯ ಕೇಳಿದ ಸಂಸದರನ್ನು ಅಮಾನತು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೇಂದ್ರದ ಕೃಷಿ ಮಸೂದೆಯಲ್ಲಿ ರೈತರ ಶೋಷಣೆಯೇ ಹೆಚ್ಚು – ರಾಜ್ಯಸಭೆಯಲ್ಲಿ ಹೆಚ್‍ಡಿಡಿ ವಿರೋಧ
Advertisement
I condemn this kind of expulsion of the members of Rajya Sabha in such a brazen and undemocratic manner. We will protest to restore the status quo ante of our members in Rajya Sabha: Congress MP Adhir Ranjan Chowdhury pic.twitter.com/PiDwuT0rMz
— ANI (@ANI) September 21, 2020
ರೈತರ ಪರವಾಗಿ ನ್ಯಾಯಯುತವಾಗಿ ಹೋರಾಟ ಮಾಡಿದ್ದೇವೆ, ಹೋರಾಟ ಮಾಡಿದವರನ್ನು ಅಮಾನತ್ತುಗೊಳಿಸಿದ್ದು ಇತಿಹಾಸದಲ್ಲೇ ಇದು ಮೊದಲು. ಪ್ರಶ್ನೆ ಕೇಳಿದ ಸಂಸದರನ್ನು ಸದನದಿಂದ ಹೊರ ಹಾಕಲಾಗಿದೆ. ರೈತರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಈಗಾಗಲೇ ಪ್ರತಿಭಟನೆ ಮೂಲಕ ಎಚ್ಚರಿಸಿದ್ದು, ಕೇಂದ್ರ ಸರ್ಕಾರ ಈಗಾಲಾದರೂ ರೈತ ವಿರೋಧಿ ಮಸೂದೆ ವಾಪಸ್ ಪಡೆಯಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು. ಇದನ್ನೂ ಓದಿ: ವಿರೋಧದ ನಡುವೆ 2 ಕೃಷಿ ಮಸೂದೆ ರಾಜ್ಯಸಭೆಯಲ್ಲಿ ಪಾಸ್