– ಖಾಸಗಿ ರಂಗದಲ್ಲಿ ಮೀಸಲಾತಿ ಸಿಗುತ್ತಾ?
– ಅದಾನಿ, ಅಂಬಾನಿಗೆ ಮಾತ್ರ ಅಚ್ಛೇದಿನ್
ಬೆಂಗಳೂರು: ದೇಶದಲ್ಲಿರುವ ಮೀಸಲಾತಿಯನ್ನು ಹಂತಹಂತವಾಗಿ ತೆಗೆದು ಹಾಕುವ ಮೂಲಕ ನರೇಂದ್ರ ಮೋದಿ ಸರ್ಕಾರ ಬಡವರನ್ನು ಮತ್ತಷ್ಟು ಬಡವರನ್ನಾಗಿಸುವ ಕೆಲಸಕ್ಕೆ ಮುಂದಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
Advertisement
ಬಜೆಟ್ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ಬಂದ ಮೇಲೆ ಜಿಡಿಪಿ ಇಳಿಯುತ್ತಲೇ ಇದೆ. ಮನಮೋಹನ್ ಸಿಂಗ್ ಇದ್ದಾಗ ಮಾತ್ರ ಏರಿಕೆಯಲ್ಲಿತ್ತು. ನಗರದಲ್ಲಿ ನಿರುದ್ಯೋಗ ಪ್ರಮಾಣ ಶೇ.9.5ರಷ್ಟು ಕಾಡುತ್ತಿದೆ. ದೇಶದ ಜನತೆ ಉದ್ಯೋಗವಿಲ್ಲದೆ ಪಕೋಡ ಮಾರಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಈ ಬಾರಿಯ ಬಜೆಟ್‍ನಲ್ಲಿ ಎಸ್ಸಿ, ಎಸ್ಟಿಗೆ ಯಾವ ಕಾರ್ಯಕ್ರಮವೂ ನೀಡಿಲ್ಲ, ಕೇಂದ್ರಕ್ಕೆ ಸರ್ಕಾರ ನಡೆಸೋಕೆ ಯೋಗ್ಯತೆಯೇ ಇಲ್ಲ. ಪಬ್ಲಿಕ್ ಸೆಕ್ಟರ್ ಗೆ ಹಣ ಹೂಡಿಕೆ ಮಾಡೋದು ಯಾಕೆ? ಜನಸಾಮಾನ್ಯರಿಗೆ ಉಪಯೋಗವಾಗಲಿ ಎಂದು ಆದರೆ ಸರ್ಕಾರ ಮಾತ್ರ ಅದಾನಿ, ಅಂಬಾನಿಗೆ ಅವಕಾಶ ಕೊಟ್ಟು ಉಪಕಾರದ ಬದಲು ಜನಸಾಮಾನ್ಯರಿಗೆ ಮತ್ತಷ್ಟು ಕಷ್ಟ ಕೊಡುತ್ತಿದೆ. ಇದರೊಂದಿಗೆ ಮೀಸಲಾತಿಯನ್ನೇ ತೆಗೆದುಹಾಕುವ ಪ್ರಯತ್ನವು ನಡೆಯುತ್ತಿದೆ, ಸರ್ಕಾರ ಪಬ್ಲಿಕ್ ಸೆಕ್ಟರ್ ಗೆ ಹೊಡಿಕೆ ಮಾಡಲು ಖಾಸಗಿ ಕಂಪನಿಗಳಿಗೆ ಅವಕಾಶ ಕೊಡುತ್ತಿದೆ. ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ಕೊಡುತ್ತಾರ ಎಂದು ಪ್ರಶ್ನಿಸಿದರು.
Advertisement
ದೇಶದಲ್ಲಿರುವ ರೈತರಿಗೆ ತೊಂದರೆ ಕೊಡೋದಕ್ಕಾಗಿಯೇ ಖಾಸಗಿ ಕಂಪನಿಗಳಿಗೆ ಅವಕಾಶ ಮಾಡಿಕೊಡುವ ಪ್ರಯತ್ನ ಕೇಂದ್ರ ಸರ್ಕಾರ ಮಾಡುತ್ತಿದೆ. ಈ ಮೂಲಕ ಅಂಬಾನಿ, ಅದಾನಿ, ನಿರವ್ ಮೋದಿಗೆ ಉಪಯೋಗ ಮಾಡಿಕೊಡುತ್ತಿದೆ. ಇದರಿಂದಾಗಿ ಅಚ್ಛೇದಿನ್ ಯಾರಿಗೆ ಬರುತ್ತೆ, ಅದಾನಿ, ಅಂಬಾನಿ ಅವರಿಗೆ ಮಾತ್ರ ಎಂದು ಆಕ್ರೋಶ ಹೊರ ಹಾಕಿದರು.
ಈಗ ಬಜೆಟ್ ಗಾತ್ರವೂ ಹೆಚ್ಚಾಗಿದೆ. ಸಾಲವೂ ಹೆಚ್ಚಾಗಿದೆ, ಸಾಲ ಹೆಚ್ಚಾದರೆ ವಿತ್ತೀಯ ಕೊರತೆಯೂ ಹೆಚ್ಚಾಗಲಿದೆ. ಹಾಗಾಗಿ ಇದು ಬರ್ಬಾದ್ ಬಜೆಟ್ ಆಗಿದೆ. ದೇಶದಲ್ಲಿ ಶಾಂತಕುಮಾರ್ ವರದಿ ಜಾರಿ ಮಾಡಿದರೆ ಕಷ್ಟ ಎದುರಿಸಬೇಕಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.