ಹುಬ್ಬಳ್ಳಿ: ಯುವತಿ ದಾರಿಯಲ್ಲಿ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಾಗ ಹಿಂದಿನಿಂದ ಮೊಪೆಡ್‍ನಲ್ಲಿ ಬಂದ ಖದೀಮ ಕ್ಷಣಾರ್ಧದಲ್ಲೇ ಎಸ್ಕೇಪ್ ಮಾಡಿದ್ದಾನೆ. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಗರದ ದೇಶಪಾಂಡೆ ನಗರದ ಬಳಿಯ ವಿವೇಕಾನಂದ ಆಸ್ಪತ್ರೆ ಎದುರು ಈ ಘಟನೆ ನಡೆದಿದ್ದು, ಕ್ಷಣಾರ್ಧದಲ್ಲಿ ಯುವತಿಯ ಮೊಬೈಲ್‍ನ್ನು ಕಳ್ಳ ಎಸ್ಕೇಪ್ ಮಾಡಿದ್ದಾನೆ. ಹಾಡು ಹಗಲೇ ನಡುರಸ್ತೆಯಲ್ಲಿ ಯುವತಿಯ ಮೊಬೈಲ್ ಕದ್ದು ಪರಾರಿಯಾದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದು ನಗರದ ಜನರಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಹೀಗಾದರೆ ದಾರಿಯಲ್ಲಿ ಮೊಬೈಲ್‍ನಲ್ಲಿ ಮಾತನಾಡುವುದಾದರೂ ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮೊಪೆಡ್‍ನಲ್ಲಿ ಬಂದ ವ್ಯಕ್ತಿ, ರಸ್ತೆಯಲ್ಲಿ ಮಾತನಾಡಿಕೊಂಡು ಹೋಗುತ್ತಿರುವ ವೇಳೆ ಯುವತಿಯ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾನೆ. ಮೊಬೈಲ್ ಕದ್ದೊಯ್ದ ವ್ಯಕ್ತಿಯನ್ನು ಯುವತಿ ಬೆನ್ನತ್ತಿದ್ದು, ಆದರೂ ವ್ಯಕ್ತಿ ಪರಾರಿಯಾಗಿದ್ದಾನೆ. ಮೊಬೈಲ್ ಎಸ್ಕೇಪ್ ಮಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.