ಅಬುಧಾಬಿ: ಇಂದು ನಡೆಯುತ್ತಿರುವ ಸಂಡೇ ಧಮಾಕದ ಎರಡನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್‍ಗೆ ರಾಜಸ್ಥಾನ್ ಬೌಲರ್ಸ್ ಗಳು ಬೆಚ್ಚಿ ಬಿದ್ದಿದ್ದಾರೆ.
ಇಂದು ಅಬುಧಾಬಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಮೊದಲು ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಉತ್ತಮ ಜೊತೆಯಾಟ ಮತ್ತು ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಅಬ್ಬರದ ಬ್ಯಾಟಿಂಗ್‍ನಿಂದ ರಾಜಸ್ಥಾನ್ ರಾಯಲ್ಸ್ ಗೆ 196 ರನ್‍ಗಳ ಟಾರ್ಗೆಟ್ ನೀಡಿದೆ.
Advertisement
Game recognize game! https://t.co/67aGMGyHh8
— Mumbai Indians (@mipaltan) October 25, 2020
Advertisement
ಈ ಪಂದ್ಯದಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ, ಕೇವಲ 21 ಬಾಲಿಗೆ ಏಳು ಸಿಕ್ಸರ್ ಮತ್ತು ಎರಡು ಫೋರ್ ಸಮೇತ ಬರೋಬ್ಬರಿ 60 ರನ್ ಭಾರಿಸಿದ್ದಾರೆ. ಮೊದಲು ತಾಳ್ಮೆಯಿಂದ ಆಟವಾಡಿದ ಪಾಂಡೆ ಮೊದಲ 9 ಬಾಲಿನಲ್ಲಿ ಕೇವಲ ಎಂಟು ರನ್ ಹೊಡೆದು ಹಾಡುತ್ತಿದ್ದರು. ಆದರೆ ನಂತರ ಸಿಕ್ಸರ್ ಗಳ ಸುರಿಮಳೆಗೈದ ಪಾಂಡ್ಯ ಕೊನೆಯ 12 ಬಾಲಿನಲ್ಲಿ ಭರ್ಜರಿ 52 ರನ್ ಸಿಡಿಸಿದರು. ಜೊತೆಗೆ 285.71ರ ಸ್ಟ್ರೈಕ್ ರೇಟಿನಲ್ಲಿ ಬ್ಯಾಟ್ ಬೀಸಿದರು.
Advertisement
79 runs from the final five overs ????????#OneFamily #MumbaiIndians #MI #Dream11IPL #RRvMI @hardikpandya7 pic.twitter.com/5cr7YT0Eyq
— Mumbai Indians (@mipaltan) October 25, 2020
Advertisement
ಕೊನೆಯ ನಾಲ್ಕು ಓವರಿನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್ ಮ್ಯಾನ್‍ಗಳು 17ನೇ ಓವರಿನಲ್ಲಿ 17 ರನ್, 18ನೇ ಓವರಿನಲ್ಲಿ 27 ರನ್, 19ನೇ ಓವರಿನಲ್ಲಿ ಕೇವಲ ಮೂರು ರನ್, 20ನೇ ಓವರಿನಲ್ಲಿ 27 ರನ್ ಭಾರಿಸಿದರು. ಈ ಮೂಲಕ ಕೊನೆಯ 24 ಬಾಲಿನಲ್ಲಿ 74 ರನ್ ಸಿಡಿಸಿ ಕೊನೆಯಲ್ಲಿ ರಾಜಸ್ಥಾನಕ್ಕೆ 196 ರನ್‍ಗಳ ಗುರಿಯನ್ನು ನೀಡಿದ್ದಾರೆ.