ಪುಣೆ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ಮೊದಲ ಅವಧಿಯಲ್ಲಿ ಭಾರತ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 3 ಓವರ್ ಆಗುವಷ್ಟರಲ್ಲೇ ಪಂದ್ಯದಲ್ಲಿ ಬಳಸುತ್ತಿದ್ದ ಹೊಸ ಬಾಲ್‍ನ್ನು ಬದಲಾವಣೆ ಮಾಡಲಾಗಿತ್ತು.
Advertisement
ಕ್ರಿಕೆಟ್‍ನಲ್ಲಿ ಬಾಲ್‍ಗಳಲ್ಲಿ ಲೋಪ ಮತ್ತು ಸ್ಟೇಡಿಯಂನಿಂದ ಹೊರ ಹೋದ ಬಾಲ್ ಸಿಗದೆ ಇದ್ದಾಗ ಮಾತ್ರ ಚೆಂಡನ್ನು ಬದಲಾವಣೆ ಮಾಡಲಾಗುತ್ತದೆ. ಆದರೆ ಪುಣೆಯಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ಆರಂಭದ 3 ನೇ ಓವರ್ ನಲ್ಲೇ ಬಾಲ್‍ನ್ನು ಬದಲಾಯಿಸಲು ಅಂಪೈರ್ ನಿರ್ಧಾರ ಮಾಡಿದ್ದರು.
Advertisement
ಇದ್ದನ್ನು ಗಮನಿಸಿದ ಅಭಿಮಾನಿಗಳಲ್ಲಿ ಬಾಲ್ ಬದಲಾವಣೆಯ ಕುರಿತು ಭಾರೀ ಕೂತುಹಲ ಮೂಡಿಸಿತ್ತು. ಆದರೆ ಪಂದ್ಯ ಮುಗಿದ ಬಳಿಕ ಬಾಲ್ ಬದಲಾವಣೆಯ ಕಾರಣ ರೀವಿಲ್ ಆಗಿದೆ.
Advertisement
Advertisement
ಭಾರತ ಬ್ಯಾಟಿಂಗ್ ಆರಂಭಿಸಿ 3ನೇ ಓವರ್ ವೇಳೆ ಹೊಸ ಬಾಲ್‍ನ್ನು ಅಂಪೈರ್ ಬದಲಾವಣೆಗಾಗಿ ಕೊಂಡೊಯ್ಯಲಾಗಿತ್ತು. ಶಿಖರ್ ಧವನ್ ಹೊಡೆದ ಬಾಲ್ ಬೌಂಡರಿ ಗೆರೆ ದಾಟಿದ ನಂತರ ಬಾಲ್‍ನ್ನು ಬದಲಾವಣೆ ಮಾಡಲಾಯಿತು. ಇದಕ್ಕೆ ಕಾರಣ ಚೆಂಡಿನಲ್ಲಿ ಇದ್ದಂತಹ ಸಣ್ಣ ತೂತು.
ಮೊದಲ ಏಕದಿನ ಪಂದ್ಯದ ವೇಳೆ ಹೊಸ ಬಾಲ್‍ನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ ಕೇವಲ 16 ಎಸೆತ ಎಸೆಯುವಷ್ಟರಲ್ಲಿ ಬಾಲ್‍ನಲ್ಲಿ ಕಂಡು ಬಂದ ದೋಷವನ್ನು ಗಮನಿಸಿದ ಅಂಪೈರ್ ಬದಲಾವಣೆ ನಿರ್ಧರಿಸಿದ್ದರು. ಬಾಲ್ ಮೈದಾನದ ಬೌಂಡರಿ ರೋಪ್, ಮೈದಾನದಲ್ಲಿದ್ದ ವಸ್ತುವಿಗೆ ಅಥವಾ ಡಿಜಿಟಲ್ ಬೋರ್ಡ್‍ಗೆ ಬಡಿದ ಪರಿಣಾಮ ಬಾಲ್‍ನಲ್ಲಿ ತೂತು ಕಂಡು ಬಂದು ಬಾಲ್‍ನ ತೂಕ ಕಡಿಮೆಯಾಗಿತ್ತು. ಹೀಗಾಗಿ ಅಂಪೈರ್ ಚೆಂಡು ಬದಲಾವಣೆಯ ನಿರ್ಧಾರ ಕೈಗೊಳ್ಳಲಾಯಿತು.