ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದಲ್ಲಿ ತಾತ ಹಾಗೂ ಮೊಮ್ಮಗನಿಗೆ ಕೊರೊನಾ ಸೋಂಕು ವರದಿಯಾದ ಬೆನ್ನಲ್ಲೇ ಇಂದು ತಾತನ ಮಗನಿಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಮೊದಲು 71 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ತಗುಲಿತ್ತು. ತದನಂತರ 22 ವರ್ಷದ ಮೊಮ್ಮಗನಿಗೂ ಸೋಂಕು ದೃಢವಾಗಿತ್ತು. ಈಗ ತಾತನ 46 ವರ್ಷದ ಮಗನಿಗೂ ಸೋಂಕು ದೃಢವಾಗಿದೆ. ಸದ್ಯ ಮೂವರಿಗೂ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
Advertisement
Advertisement
ಈ ಮೂರು ಪ್ರಕರಣ ಸಂಬಂಧ ಇದುವರೆಗೂ 160 ಮಂದಿಯನ್ನ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಮೊದಲ ದಿನ 58 ಮಂದಿ ಹಾಗೂ ಎರಡನೇ ದಿನ 44 ಮಂದಿ ಒಟ್ಟು 102 ಮಂದಿ ವರದಿ ನೆಗೆಟಿವ್ ಬಂದಿದೆ. ಉಳಿದವರ ವರದಿ ಇನ್ನೂ ಬರಬೇಕಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
Advertisement
ಇವರಲ್ಲಿ 16 ಮಂದಿ ಈಗಾಗಲೇ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಆರು ಮಂದಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಇನ್ನೂ ಇವರ ಕುಟುಂಬದಲ್ಲಿ ಐವರಿದ್ದು, ಅಜ್ಜಿ ಮೇ 4 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು.
Advertisement
ತದನಂತರ ಅನುಮಾನದ ಮೇರೆಗೆ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ಪತ್ತೆಯಾಗಿತ್ತು. ಅಜ್ಜಿ ತೀರಿಕೊಂಡಿದ್ದು, ತಾತ, ಮಗ, ಮೊಮ್ಮಗನಿಗೆ ಕೊರೊನಾ ದೃಢವಾಗಿದ್ದು, ತಾತನ ಸೊಸೆಯ ವರದಿ ನೆಗೆಟಿವ್ ಆಗಿದೆ. ಇದಲ್ಲದೆ ತಾತನ ಮಗಳ, ಅಳಿಯ ಹಾಗೂ ಇವರ ಮಗನ ವರದಿ ಸಹ ನೆಗೆಟಿವ್ ಬಂದಿದೆ. ಚಿಂತಾಮಣಿ ನಗರದಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.