ಬೆಂಗಳೂರು: ಕಿಚ್ಚ ಸುದೀಪ್ ಮೈ ಆಟೋಗ್ರಾಫ್ ಸಿನಿಮಾದಲ್ಲಿರುವ ಕೇರಳದ ಲತಿಕಾ ಮನೆಗೆ ಭೇಟಿ ನೀಡಿ ತಮ್ಮ ಅಂದಿನ ದಿನದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ವಿಡೀಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಸಿನಿಮಾ ಚಿತ್ರೀಕರಣಕ್ಕೆ ಕೇರಳಕ್ಕೆ ಹೋಗಿರುವ ಸುದೀಪ್ ಶೂಟಿಂಗ್‍ನ ಬಿಡುವಿನ ವೇಳೆಯಲ್ಲಿ 15 ವರ್ಷದ ಹಿಂದಿನ ನೆನಪಿನ ಮನೆಗೆ ಭೇಟಿಕೊಟ್ಟಿದ್ದಾರೆ. ಆಟೋಗ್ರಾಫ್ ಸಿನಿಮಾದ ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸುಮಾರು 15 ವರ್ಷಗಳ ಹಿಂದಿನ ಕಥೆಯನ್ನು ಮೆಲುಕು ಹಾಕಿದ್ದಾರೆ.
ಆಟೋಗ್ರಾಫ್ ನನ್ ಲಕ್ಕಿ ಚಾಮ್ ಸಿನಿಮಾ. 15 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಬರುತ್ತಿದ್ದೇನೆ. ಈ ಮನೆಯಲ್ಲಿ ಮರೆಯಲಾರದ ತುಂಬಾ ನೆನಪುಗಳಿವೆ ಎನ್ನುತ್ತಾ ಪ್ರತಿಯೊಂದು ದೃಶ್ಯ ತೆಗೆದಿರುವ ಸ್ಥಳವನ್ನು ಒಂದೊಂದಾಗಿ ಪರಿಚಯ ಮಾಡಿಸುತ್ತಾ ಮನೆಯ ಒಳಗೆ ಓಡಾಡಿದ್ದಾರೆ. ಕೆಲವಷ್ಟು ನೆನಪುಗಳನ್ನು ಯಾವತ್ತು ಮರೆಯಲು ಸಾಧ್ಯವಿಲ್ಲ. ಅವುಗಳಲ್ಲಿ ಮೈ ಆಟೋಗ್ರಾಫ್ ಸಿನಿಮಾ ಕೂಡ ಒಂದಾಗಿದೆ ಎಂದು ಈ ವಿಡಿಯೋ ತುಣುಕಿನಲ್ಲಿ ಹೇಳಿದ್ದಾರೆ. ಈ ವಿಡಿಯೋಗೆ ಸವಿಸವಿ ನೆನಪು ಎಂಬ ಹಾಡನ್ನು ಹಾಕಿಕೊಂಡಿದ್ದಾರೆ. ಆಟೊಗ್ರಾಫ್ ಸಿನಿಮಾದ ಸವಿ ಸವಿಯಾದ ನೆನಪುಗಳನ್ನು ಹಂಚಿಕೊಂಡಿರುವ ಸುದೀಪ್ ಅವರ ಇನ್‍ಸ್ಟಾಗ್ರಾಮ್ ಖಾತೆಯಲ್ಲಿರುವ ವಿಡಿಯೋ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸುದೀಪ್ ಅವರು ಮೈ ಆಟೋಗ್ರಾಫ್ ಸಿನಿಮಾ ತೆರೆಕಂಡು 15 ವರ್ಷಗಳು ಕಳೆದಿವೆ. ಆದರೆ ಸುದೀಪ್ 15 ವರ್ಷದ ಹಿಂದಿನ ನೆನಪನ್ನು ಮತ್ತು ಅಂದಿನ ದಿನಗಳನ್ನು ಮೆಲುಕು ಹಾಕಿ ಹಿಂದಿನ ದಿನವನ್ನು ನೆನೆದು ಖುಷಿಯಾಗಿದ್ದಾರೆ.
ಕಿಚ್ಚ ಸುದೀಪ್ ಸದ್ಯ ಅನುಪ್ ಭಂಡಾರಿ ಅವರ ನಿರ್ದೇಶನದ ಫ್ಯಾಂಟಮ್ ಸಿನಿಮಾದಲ್ಲಿ ಶೂಟಿಂಗ್‍ನಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡ ಸಿನಿಮಾದ ಕೊನೆಯ ಹಂತದ ಚಿತ್ರೀಕರಣವನ್ನು ಕೇರಳದಲ್ಲಿ ಮಾಡುತ್ತಿದೆ.
View this post on Instagram