ಮೈ ಆಟೋಗ್ರಾಫ್ ಸಿನಿಮಾಗಾಗಿ ಮನೆ ಪತ್ರ ಅಡ ಇಟ್ಟಿದ್ದೆ- ಜೀವನದ ಜೊತೆ ಸುದೀಪ್ ಸಿನಿಮಾ ಕಹಾನಿ

Public TV
2 Min Read
sudeep

– ದುಬೈನಿಂದ ರಾಜ್ಯದ ಪತ್ರಕರ್ತರ ಜೊತೆ ಕಿಚ್ಚ ಸುದ್ದಿಗೋಷ್ಠಿ

ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ಇತಿಹಾಸದಲ್ಲೇ ಕಿಚ್ಚ ಸುದೀಪ್ ದುಬೈನಿಂದ ನೇರಪ್ರಸಾರದಲ್ಲಿ ರಾಜ್ಯದ ಪತ್ರಕರ್ತರ ಜೊತೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ತಮ್ಮ ಕಲಾ ಬದುಕಿನ 25 ವರ್ಷದ ಜರ್ನಿ, ತಾವು ಅನುಭವಿಸಿದ ಕಷ್ಟ, ನಷ್ಟ, ಸುಖ ದುಃಖಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಲ್ಲದೆ ತಮ್ಮ ಮುಂಬರುವ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣನ ಕುರಿತು ಸಹ ಮಾಹಿತಿ ನೀಡಿದ್ದಾರೆ.

sudeep 2

ವಿಕ್ರಾಂತ್ ರೋಣ ಚಿತ್ರದ ಟೈಟಲ್ ಜನವರಿ 31ಕ್ಕೆ ಬುರ್ಜ್ ಖಲೀಫಾದಲ್ಲಿ ಲಾಂಚ್ ಹಾಗೂ ಜಗತ್ತಿನ ಅತಿ ಎತ್ತರದ ಕಟ್ಟಡದ ಮೇಲೆ ಕಿಚ್ಚನ ಕಟೌಟ್ ನಿಲ್ಲಲಿದೆ. ಹೀಗಾಗಿ ಕಿಚ್ಚ ಈಗಾಗಲೇ ದುಬೈ ತಲುಪಿದ್ದು, ಅಲ್ಲಿಂದಲೇ ಕರ್ನಾಟಕದ ಪತ್ರಕರ್ತರ ಜೊತೆ ಸಂಭಾಷಣೆ ನಡೆಸಿದ್ದಾರೆ. ಬೆಂಗಳೂರಿನ ಶಾರದಾ ಚಿತ್ರಮಂದಿರದಲ್ಲಿ ಕಿಚ್ಚ ನೇರಪ್ರಸಾರದಲ್ಲಿ ಮಾತನಾಡಿದ್ದಾರೆ.

sudeep 3

ನೀವೆಲ್ಲರೂ ನನ್ನ ಪಾಲಿನ ಸೆಲೆಬ್ರೇಷನ್. ವಾಪಸ್ ಬಂದ ಮೇಲೆ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇನೆ. ನನ್ನ ಜೀವನದ ಭಾಗವಾದ ಎಲ್ಲರಿಗೂ ಧನ್ಯವಾದ, ಇದು 25 ವರ್ಷದ ಜರ್ನಿಯ ಕೊನೆಯ ದಿನ. ನಾಳೆಯಿಂದ 26ನೇ ವರ್ಷ ಆರಂಬವಾಗಲಿದೆ ಎಂದು ತಿಳಿಸಿದರು.

ಆರಂಭದಲ್ಲಿ ಒಂದು ಹೌಸ್ ಫುಲ್ ಸಿನಿಮಾ ನಿರೀಕ್ಷೆ ಮಾಡುತ್ತಿದ್ದೆ. ಮೊದಲು ನಾನು ಸಿನಿಮಾಕ್ಕೆ ಬಂದಿದ್ದೇ ಡೈರೆಕ್ಟರ್ ಆಗೋಕೆ. ಮೈ ಆಟೋಗ್ರಾಫ್ ನನ್ನ ಮೆಮೋರೆಬಲ್ ಸಿನಿಮಾ. ಅದೃಷ್ಟವೆಂಬಂತೆ ನನ್ನ ಮೊದಲ ನಿರ್ದೇಶನದ ಸಿನಿಮಾನೂ ಸೂಪರ್ ಹಿಟ್ ಆಯ್ತು. ಆ ವೇಳೆ ನಾನು ಮನೆ ಪತ್ರ ಕೂಡ ಅಡ ಇಟ್ಟಿದ್ದೆ, ಅದು ಸಕ್ಸಸ್ ಆಗಲೇ ಬೇಕಿತ್ತು, ಆಯ್ತು. ಸಿನಿಮಾ ಸೋತರೆ ಸೂಟ್ ಕೇಸ್ ರೆಡಿ ಮಾಡು ಎಂದು ನನ್ನ ಪತ್ನಿಗೆ ಹೇಳಿದೆ ಎಂದು ಮೈ ಆಟೋಗ್ರಾಫ್ ಸಿನಿಮಾ ನಿರ್ಮಾಣಕ್ಕೆ ಮನೆ ಪತ್ರ ಅಡವಿಟ್ಟ ವಿಚಾರವನ್ನು ರಿವೀಲ್ ಮಾಡಿದ್ದಾರೆ.

sudeep 2

ಮೈ ಆಟೋಗ್ರಾಫ್ ಸಿನಿಮಾ 9.30ಕ್ಕೆ ಸರಿಯಾಗಿ ಕಂಠೀರವದಲ್ಲಿ ಮುಹೂರ್ತ ಆಗಿತ್ತು. ಅಂಬರೀಷ್ ಬಂದಿದ್ದರು. ವೈಟ್ & ವೈಟ್ ಸೂಟ್ ಹಾಕೊಂಡು ಬಂದಿದ್ದರು. ನನ್ನ ಫಸ್ಟ್ ಮೇಕಪ್ ಮೆನ್ ಗುರು. ಇವತ್ತೂ ಅವರೇ ನನ್ನ ಮೇಕಪ್ ಮ್ಯಾನ್. ಇತ್ತೀಚೆಗೆ ವಿಕ್ರಾಂತ್ ರೋಣ ಶೂಟಿಂಗ್ ಮಾಡುವಾಗ ಕೇರಳದಲ್ಲಿರುವ ಆ ಮನೆಗೆ ನಾನು ಹೋಗಿದ್ದೆ. ನನಗೆ ಆ ಮನೆ ತುಂಬಾ ಇಷ್ಟ. 25 ವರ್ಷ ಹೀಗೆ ಕಳೆದೇ ಹೋಯ್ತು. ಆ ನೆನಪುಗಳೆಲ್ಲ ಹಾಗೆಯೇ ಇದೆ. ಕೋಟಿಗೊಬ್ಬ 3 ಸಾಂಗ್ ಅದೇ ಕಂಠೀರವ ಫ್ಲೋರಲ್ಲಿ ಮಾಡಿದೆ. ರಿವೈಂಡ್ ಮಾಡಿಕೊಂಡರೆ ನನ್ನ ಕಣ್ಣ ಮುಂದೆಯೇ ಹಾಗೇ ಇದೆ ಎಂದು ಮೆಲುಕಲು ಹಾಕಿದರು.

Sudeep

ಸುದೀಪ್ ಚಿತ್ರಜೀವನಕ್ಕೆ 25 ವರ್ಷದ ಹರ್ಷ. ದುಬೈನಲ್ಲಿ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿದ್ದು, ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಚಿತ್ರದ ಕಟೌಟ್ ಬುರ್ಜ್ ಖಲೀಫಾದ ಮೇಲೆ ಅನಾವರಣ ಮಾಡಲಾಗುತ್ತಿದೆ. ಜಗತ್ತಿನ ಎತ್ತರದ ಬುರ್ಜ್ ಖಲೀಫಾದ ಮೇಲೆ 2,000 ಅಡಿ ವರ್ಚುವಲ್ ಸ್ಕ್ರೀನ್ ನಲ್ಲಿ ಟೀಸರ್ ಪ್ರಸಾರವಾಗುತ್ತಿದೆ. ಬುರ್ಜ್ ಖಲೀಫಾದ ಮೇಲೆ ವಿಕ್ರಾಂತ್ ರೋಣ ಚಿತ್ರದ 180 ಸೆಕೆಂಡುಗಳ ಟೀಸರ್ ಭಾನುವಾರ ಬಿಡುಗಡೆಯಾಗುತ್ತಿದೆ.

VIKRANTH RONA

11 ಭಾಷೆಗಳಲ್ಲಿ ವಿಕ್ರಾಂತ್ ರೋಣ ರಿಲೀಸ್ ಆಗುತ್ತಿದ್ದು, ಪ್ಯಾನ್ ಇಂಡಿಯಾ ಚಿತ್ರವಲ್ಲ, ಪ್ಯಾನ್ ವಲ್ರ್ಡ್ ಸಿನಿಮಾ ರೀತಿ ತಯಾರಾಗುತ್ತಿದೆ. ಟೀಸರ್ ಬಿಡುಗಡೆಗಾಗಿ ಮೂರು ದಿನಗಳ ಹಿಂದೆಯೇ ದುಬೈ ತಲುಪಿರುವ ಸುದೀಪ್ ಮತ್ತು ತಂಡ, ಇಂದು ಸುದೀಪ್ ಸಿನಿ ಜರ್ನಿಯ ಬೆಳ್ಳಿ ಹಬ್ಬ ಆಚರಿಸುತ್ತಿದ್ದು, ರಾಜ್ಯದ ಪತ್ರಕರ್ತರ ಜೊತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *