ಮೈಸೂರು: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸಾವು ಹೆಚ್ಚಳದ ವಿಚಾರದ ಬಗ್ಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ವಿವರವಾದ ಸ್ಪಷ್ಟನೆ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ಡೆತ್ ಜಾಸ್ತಿಯಾಗಿರುವುದರ ಕಾರಣ ತಿಳಿಸಿದ್ದಾರೆ.
Advertisement
ಈ ಕುರಿತು ವಿವರಿಸಿದರುವ ಅವರು, ಸಿಟಿ ಸ್ಕ್ಯಾನ್‍ನಲ್ಲಿ ಕೋವಿಡ್ ಪಾಸಿಟಿವ್ ಲಕ್ಷಣವಿದ್ದರೆ ರಿಪೋರ್ಟ್ ಮಾಡುವುದನ್ನು ಈಗ ಸ್ಟಾಪ್ ಮಾಡಿದ್ದೇವೆ. ಅಲ್ಲದೆ ಆರ್‍ಟಿಪಿಸಿಆರ್ ಟೆಸ್ಟ್ ಜಾಸ್ತಿ ಮಾಡುತ್ತಿದ್ದೇವೆ. ಹೀಗಾಗಿ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲ ಕೊರೊನಾ ಡೆತ್ ಗಳ ಸಂಖ್ಯೆ ಸಿಗಬೇಕು ಎಂಬ ಉದ್ದೇಶದಿಂದ ಡಿಸ್‍ಚಾರ್ಜ್ ಆದ ನಂತರ ಕೆಲವರು ಡೆತ್ ಆಗುತ್ತಿದ್ದಾರೆ. ಇದರ ಸಂಖ್ಯೆಯನ್ನು ಸಹ ಕೊಡಲಾಗುತ್ತಿದೆ ಎಂದು ವಿವರಿಸಿದರು.
Advertisement
Advertisement
ಟೆಸ್ಟ್ ಗೆ ಕೊಟ್ಟು ವರದಿಗೆ ಮುನ್ನ ಸತ್ತವರ ಸಂಖ್ಯೆ ಕೂಡ ಕಯಾಜ್ ಮೂಲಕ ಸೇರಿಸುತ್ತಿದ್ದೇವೆ. ಗ್ರಾಮೀಣ ಭಾಗದ ಆಸ್ಪತ್ರೆಯಲ್ಲಿ ತಡವಾಗಿ ಬೆಳಕಿಗೆ ಬರುವ ಡೆತ್ ಪ್ರಕರಣಗಳನ್ನೂ ಲೀಸ್ಟ್‍ಗೆ ಸೇರಿಸುತ್ತಿದ್ದೇವೆ. ಈ ಎಲ್ಲ ಕಾರಣಗಳಿಂದ ಡೆತ್ ರೇಟ್ ಜಾಸ್ತಿ ಆಗಿದೆ.
Advertisement
ಅಲ್ಲದೆ ಮೈಸೂರಿನಲ್ಲಿ ಡೆತ್‍ರೇಟ್ ಹೆಚ್ಚದೆಯೇ ಹೊರತು ಡೆತ್ ಹೆಚ್ಚಾಗಿಲ್ಲ. ಸಂಖ್ಯೆ ನೋಡಿ ಜನರು ಗಾಬರಿ ಆಗುವುದು ಬೇಡ. ಈ ವರೆಗೆ ಡೆತ್ ಡಾಟಾವನ್ನು ಸಂಪೂರ್ಣವಾಗಿ ಮಾಡಿಲ್ಲ. ಒಂದು ತಿಂಗಳಿನಿಂದ ಮಾಡುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದರು. ಡಿಸಿ ಸ್ಪಷ್ಟನೆ ವೇಳೆ ಮಧ್ಯೆ ಪ್ರವೇಶ ಮಾಡಿದ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಾವಿನ ಸಂಖ್ಯೆಯನ್ನು ಜಿಲ್ಲಾಡಳಿತ ಮುಚ್ಚಿಡುವುದಿಲ್ಲ. ಇದರಲ್ಲಿ ಬ್ಲಾಕ್ ಅಂಡ್ ವೈಟ್ ಯಾವುದೂ ಇಲ್ಲ, ಎಲ್ಲ ವೈಟ್ ಎಂದು ತಿಳಿಸಿದರು.