ಚೆನ್ನೈ: ನಟಿ ಮೆಘನಾ ರಾಜ್ ಹಾಗೂ ಅವರ 8 ತಿಂಗಳ ಮಗ ಸದ್ಯ ಬೆಂಗಳೂರಿನಲ್ಲಿಯೇ ಇದ್ದಾರೆ. ಕೊರೊನಾ ಮಹಾಮಾರಿಯಿಂದಾಗಿ ಅವರು ನಟ ಅರ್ಜುನ್ ಸರ್ಜಾ ಅವರ ಆಂಜನೇಯನ ದೇವಸ್ಥಾನದ ಉದ್ಘಾಟನೆಗೂ ತೆರಳಿಲ್ಲ. ಹೀಗಾಗಿ ಅರ್ಜುನ್ ಸರ್ಜಾ ಅವರು ತಾಯಿ- ಮಗನಿಗೆ ವೀಡಿಯೋ ಕಾಲ್ ನಲ್ಲೇ ದೇವರ ದರ್ಶನ ಮಾಡಿಸಿದ್ದಾರೆ.
ಹೌದು. ಬುಧವಾರ ಅರ್ಜುನ್ ಸರ್ಜಾ ಅವರು ಮೇಘನಾರಿಗೆ ವೀಡಿಯೋ ಕಾಲ್ ಮಾಡಿದ್ದಾರೆ. ಈ ವೇಳೆ ಅಮ್ಮ-ಮಗನಿಗೆ ತಾವು ಕಟ್ಟಿಸಿರುವ ಆಂಜನೇಯನ ದರ್ಶನ ಮಾಡಿಸಿದ್ದಾರೆ. ಇದರ ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ಅರ್ಜುನ್ ಸರ್ಜಾ ನಂತರ ತಮ್ಮ ಇನ್‍ಸ್ಟಾ ಸ್ಟೋರಿಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಕೊರೊನಾದಿಂದ ಭೇಟಿ ನೀಡಲು ಸಾಧ್ಯವಾಗದ ಕಾರಣ ಹನುಮಾನ್ ದೇವಾಲಯವನ್ನು ವೀಡಿಯೋ ಕಾಲ್ ಮೂಲಕ ತೋರಿಸಿದ್ದಾರೆ. ಫೋಟೋದಲ್ಲಿ, ಜೂ. ಚಿರು ನೇರವಾಗಿ ಕ್ಯಾಮೆರಾವನ್ನೇ ನೋಡುತ್ತಿರುವುದನ್ನು ಕಾಣಬಹುದು. ಇದನ್ನೂ ಓದಿ: ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ
ಕೋವಿಡ್-19 ಕಾರಣದಿಂದಾಗಿ ಕುಂಬಾಭಿಷೇಕಕ್ಕೆ ಬರಲು ಸಾಧ್ಯವಾಗದ ಕಾರಣ ಚಿರು ಮಗನಿಗೆ ದೇವಾಲಯವನ್ನು ತೋರಿಸಿರುವುದಾಗಿ ಫೋಟೋ ಮೇಲೆ ಬರೆದುಕೊಂಡಿದ್ದಾರೆ. ಇದನ್ನು ಅರ್ಜುನ್ ಸರ್ಜಾ ಅವರ ಮಗಳು, ನಟಿ ಐಶ್ವರ್ಯಾ ಅರ್ಜುನ್ ಕೂಡ ತಮ್ಮ ಇನ್‍ಸ್ಟಾ ಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದಿವ್ಯಾ ಸುರೇಶ್ ಮೇಲೆ ಕೈ ಮಾಡಿದ ಪ್ರಿಯಾಂಕ
View this post on Instagram
ದಿವಂಗತ ಚಿರಂಜೀವಿ ಸರ್ಜಾ ಅವರ ಮಾವ ಅರ್ಜುನ್ ಸರ್ಜಾ ಅವರು ಚೆನ್ನೈನ ಹನುಮಾನ್ ದೇವಾಲಯವನ್ನು ಉದ್ಘಾಟಿಸಿದ್ದಾರೆ. ಈ ಸಮಾರಂಭದಲ್ಲಿ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಹಾಜರಾಗಿದ್ದರೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮೇಘನಾ ಮತ್ತು ಜೂನಿಯರ್ ಚಿರು ಅವರಿಗೆ ಸಾಧ್ಯವಾಗಲಿಲ್ಲ.
View this post on Instagram
ಆಕ್ಷನ್ ಕಿಂಗ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಅರ್ಜುನ್ ಸರ್ಜಾ ಅವರು ಇತ್ತೀಚೆಗೆ ಚೆನ್ನೈನ ಹೊರವಲಯದಲ್ಲಿ ಹನುಮಾನ್ ದೇವಾಲಯವನ್ನು ನಿರ್ಮಿಸಿದ್ದಾರೆ. ಹನುಮನ ಕಟ್ಟಾ ಭಕ್ತನಾಗಿರುವುದರಿಂದ ದೇವಾಲಯವನ್ನು ನಿರ್ಮಿಸುವುದು ಅವರ ಕನಸಾಗಿತ್ತು. ಈ ಕನಸು ಇದೀಗ ನನಸಾಗಿದ್ದು, ಜುಲೈ 1 ಮತ್ತು 2 ರಂದು ಕುಂಬಾಭಿಷೇಕದೊಂದಿಗೆ ದೇವಾಲಯವನ್ನು ಉದ್ಘಾಟಿಸಲಾಯಿತು.