ಚೆನ್ನೈ: 2021ರ ತಮಿಳುನಾಡು ವಿಧಾನ ಸಭಾ ಚುನಾವಣೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಎದುರಾಗಲಿದೆ. ಈ ಹೊತ್ತಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಚೆನ್ನೈ ಮೆಟ್ರೋ ದರದಲ್ಲಿ 20 ರೂ. ಕಡಿತಗೊಳಿಸಿದ್ದಾರೆ. ಅಲ್ಲದೆ ಈ ಹೊಸ ಪರಿಷ್ಕೃತ ದರಗಳು 2021 ರ ಫೆಬ್ರವರಿ 22 ರಿಂದ ಜಾರಿಗೆ ಬರಲಿದೆ. ಒಟ್ಟಾರೆ 50 ರಿಂದ 70 ರೂ. ವರೆಗೆ ಮೆಟ್ರೋ ದರವನ್ನು ಇಳಿಸಲಾಗಿದೆ.
Advertisement
ಹೊಸ ಶುಲ್ಕಗಳ ಪಟ್ಟಿ:
* 0-2 ಕಿ.ಮೀ ದೂರ ಪ್ರಯಾಣಿಸುವವರಿಗೆ ಶುಲ್ಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಂದಿನಂತೆ 10ರೂ. ಪಾವತಿಸಬೇಕಾಗುತ್ತದೆ.
* ಆರಂಭದಲ್ಲಿ 2-4 ಕಿ.ಮೀ ಪ್ರಯಾಣಿಸುತ್ತಿದ್ದವರು 20 ರೂ. ಪಾವತಿಸಬೇಕಾಗಿತ್ತು. ಆದರೆ ಇನ್ನು ಮುಂದೆ 2-5 ಕಿ.ಮೀ ವರೆಗೆ 20 ರೂ. ವಿಧಿಸಲಾಗುತ್ತದೆ.
* 5-12 ಕಿ.ಮೀವರೆಗೂ ಪ್ರಯಾಣಿಸುವವರು 30 ರೂ. ಪಾವತಿಸಬೇಕಾಗುತ್ತದೆ.
* 12-21 ಕಿ.ಮೀ ದೂರ ಪ್ರಯಾಣಿಸುವವರು 40 ರೂ. ಪಾವತಿಸಬೇಕಾಗುತ್ತದೆ.
* 21 ಕಿ.ಮೀ ಗಿಂತ ಹೆಚ್ಚಿನ ದೂರ ಪ್ರಯಾಣಿಸುವವರು 50 ರೂ. ಪಾವತಿಸಬೇಕಾಗುತ್ತದೆ.
Advertisement
ಕ್ಯೂ ಆರ್ ಕೋಡ್ ಅಥವಾ ಸಿಎಮ್‍ಆರ್‍ಎಲ್ ಸ್ಮಾರ್ಟ್ ಕಾರ್ಡ್‍ಗಳನ್ನು ಬಳಸಿಕೊಂಡು ಮೆಟ್ರೋ ಟಿಕೆಟ್ ಬುಕ್ ಮಾಡುವವರಿಗೆ ಶುಲ್ಕದಲ್ಲಿ ಶೇ.20 ರಿಯಾಯಿತಿ ನೀಡಲಾಗುತ್ತದೆ. ಹಾಗೂ ರಜಾದಿನಗಳಲ್ಲಿ ಮತ್ತು ವಾರಾಂತ್ಯದಲ್ಲಿ ಪ್ರಯಾಣಿಸುವವರ ಟಿಕೆಟ್ ದರದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಲಾಗುತ್ತಿದೆ.