ಇದೇ ಶುಕ್ರವಾರ ಕ್ರಿಸ್‍ಮಸ್ ಹಬ್ಬ. ಮನೆಯಲ್ಲಿ ಕೇಕ್ ಇರಲೇಬೇಕು. ಕೊರೊನಾ ಹಿನ್ನೆಲೆ ಕ್ರಿಸ್‍ಮಸ್ ಆಚರಣೆ ವೇಳೆ ಜನತೆ ಎಚ್ಚರಿಕೆಯಿಂದಿರಬೇಕೆಂದು ಸರ್ಕಾರ ಸೂಚಿಸಿದೆ. ಊರುಗಳಿಂದ ದೂರವಿರೋ ಎಷ್ಟೋ ಜನಕ್ಕೆ ಕ್ರಿಸ್‍ಮಸ್ ಕುಟುಂಬದ ಜೊತೆ ಆಚರಿಸಲು ಸಾಧ್ಯವಾಗಲ್ಲ. ಕುಟುಂಬದಿಂದ ದೂರ ಇರುವವರು ಬೇಕರಿಯಿಂದ ಕೇಕ್ ತರುವ ಬದಲು ಮನೆಯಲ್ಲಿಯೇ ಸರಳವಾಗಿ ಕೇವಲ ಮೂರು ವಸ್ತುಗಳಿಂದ ರುಚಿಯಾದ ಆರೋಗ್ಯಕರ ಕೇಕ್ ತಯಾರಿಸುವ ರೆಸಿಪಿ ಇಲ್ಲಿದೆ.
Advertisement
ಬೇಕಾಗುವ ಸಾಮಗ್ರಿಗಳು
* ಮನೆಯಲ್ಲಿರುವ ವಿವಿಧ ಬಿಸ್ಕಟ್‍ಗಳು – 1 ಕಪ್
* ಹಾಲು – 1 ಕಪ್
* ಅಡುಗೆ ಸೋಡಾ – ಅರ್ಧ ಸ್ಪೂನ್
Advertisement
ಇತರೆ ಸಾಮಾಗ್ರಿಗಳು
* ಬಟರ್ ಪೇಪರ್
* ತುಪ್ಪ – 2 ಸ್ಪೂನ್
* ಕುಕ್ಕರ್
* ತವಾ
Advertisement
Advertisement
ಮಾಡುವ ವಿಧಾನ
* ಒಂದು ಮಿಕ್ಸಿ ಜಾರ್‍ಗೆ ಮನೆಯಲ್ಲಿರುವ ವಿವಿಧ ಬಿಸ್ಕಟ್ ಚೂರುಗಳನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
* ಈಗ ಅದೇ ಜಾರ್‍ಗೆ 1 ಕಪ್ ಹಾಲು ಸೇರಿಸಿ ರುಬ್ಬಿಕೊಳ್ಳಿ.
* ಒಂದು ಕುಕ್ಕರ್‍ಗೆ ತುಪ್ಪವನ್ನು ಸವರಿ.. ಒಳಗೆ ಬಟರ್ ಪೇಪರ್ ಅನ್ನು ಇಟ್ಟು ಮತ್ತೆ ತುಪ್ಪ ಸವರಿ.
* ಈಗ ರುಬ್ಬಿದ ಮಿಶ್ರಣಕ್ಕೆ ಅಡುಗೆ ಸೋಡಾವನ್ನು ಮಿಕ್ಸ್ ಮಾಡಿ ಕುಕ್ಕರ್‍ನಲ್ಲಿ ಬಟರ್ ಪೇಪರ್ ಮೇಲೆ ಸಮವಾಗಿ ಹಾಕಿ.
* ಸ್ಟೌವ್ ಮೇಲೆ ಒಂದು ತವಾ ಇಟ್ಟು.. ಅದರ ಮೇಲೆ ವಿಷಲ್ ಹಾಕದೇ ಕುಕ್ಕರ್ ಅನ್ನು ಇಟ್ಟು 15-20 ನಿಮಿಷವರೆಗೆ ಬೇಯಿಸಿ.
* ಬಳಿಕ ಸ್ಟೌವ್ ಆಫ್ ಮಾಡಿ ತಣ್ಣಗಾದ ಬಳಿಕ ಕುಕ್ಕರ್‍ನಿಂದ ಕೇಕ್ ಅನ್ನು ಬೇರ್ಪಡಿಸಿ
* ಕೇಕ್ ಮೇಲೆ ಬೇಕಾದ್ದಲ್ಲಿ ಚಾಕಲೇಟ್ ಗ್ರೀಸ್ ಮಾಡಬಹುದು ಅಥವಾ ಡ್ರೈ ಫ್ರೂಟ್ಸ್ ನಿಂದ ಅಲಂಕರಿಸಬಹುದು
* ಇಲ್ಲವಾದಲ್ಲಿ ಪ್ಲೇನ್ ಕೇಕ್ ರೀತಿ ಸರ್ವ್ ಮಾಡಬಹುದು