ಲಂಡನ್: ಒಮ್ಮೆ ಗರ್ಭಧರಿಸಿದರೆ ಮತ್ತೊಮ್ಮೆ ಗರ್ಭಿಣಿಯಾಗುವುದು ಹೆರಿಗೆ ಬಳಿಕವೇ ಆಗಿದೆ. ಆದರೆ ಬ್ರಿಟನ್‍ನಲ್ಲಿ ಅಪರೂಪದ ವಿದ್ಯಮಾನವೊಂದು ನಡೆದು ಎಲ್ಲೆಡೆ ಸುದ್ದಿಯಾಗಿದೆ.
Advertisement
ಮೂರು ತಿಂಗಳ ಗರ್ಭಿಣಿಯನ್ನು ವೈದ್ಯರು ಸ್ಕ್ಯಾನ್‍ಗೆ ಮಾಡಿದಾಗ ಆಕೆಯ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆಯಾಗಿದೆ. ಎರಡು ಭ್ರೂಣಗಳಿಗೂ ಮೂರು ವಾರಗಳ ಅಂತರವಿರುವುದು ವೈದ್ಯಕೀಯ ಲೋಕಕ್ಕೆ ಒಂದು ಪ್ರಶ್ನೆಯಾಗಿತ್ತು. ಮಗು ಬದುಕುವುದು ಅಸಾಧ್ಯ ಎಂದು ವೈದ್ಯರು ಹೇಳಿದ್ದರು. ಈ ವೇಳೆ ಮಹಿಳೆ ಗಾಭರಿಯಾಗಿದ್ದಳು. ವಿಶೇಷ ಎಂದರೆ, ಮೂರು ವಾರಗಳ ಅಂತರದಲ್ಲಿ ಎರಡು ಬಾರಿ ಗರ್ಭಧರಿಸಿರುವ ಮಹಿಳೆ ಎರಡೂ ಮಕ್ಕಳಿಗೆ ಒಮ್ಮೆಲೆ ಜನ್ಮ ನೀಡಿದ್ದಾಳೆ. ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ.
Advertisement
Advertisement
ರೆಬೆಕ್ಕಾ ರಾಬಟ್ರ್ಸ್ ಹಾಗೂ ರಿಸ್ ವೀವರ್ ದಂಪತಿಗೆ ಹಲವು ವರ್ಷಗಳ ಕಾಲ ಸಂತಾನ ಭಾಗ್ಯವಿರಲಿಲ್ಲ. ಗರ್ಭಧಾರಣೆ ಔಷಧವನ್ನು ವೈದ್ಯರು ನೀಡಿದ ಬಳಿಕ ರೆಬೆಕ್ಕಾ ಗರ್ಭವತಿಯಾಗಿದ್ದಳು. ಸ್ಕ್ಯಾನ್ ಮಾಡಿಸಿದಾಗ 2 ಭ್ರೂಣ ಇದೆ. ಆದರೆ 2 ಭ್ರೂಣಕ್ಕೂ ಮೂರುವಾರಗಳ ಅಂತರವಿದೆ ಎಂದು ವೈದ್ಯರು ಹೇಳಿರುವುದನ್ನು ಕೇಳಿ ದಂಪತಿ ಶಾಕ್ ಆಗಿದ್ದರು.
Advertisement
ಕಳೆದ ಸಪ್ಟೆಂಬರ್‍ನಲ್ಲಿ ಗಂಡು, ಹೆಣ್ಣು ಮಗುವಿಗೆ ರಬೆಕ್ಕಾ ಜನ್ಮ ನೀಡಿದ್ದಾಳೆ. ಮಕ್ಕಳು ಆರೋಗ್ಯವಾಗಿವೆ. ಹೆಣ್ಣು ಮಗುವನ್ನು 95 ದಿನಗಳ ಕಾಲ ತುರ್ತುನಿಗಾ ಘಟಕದಲ್ಲಿ ಇಡಲಾಗಿತ್ತು ಎಂದು ಮಹಿಳೆ ಹೇಳಿದ್ದಾಳೆ. ಗರ್ಭಿಣಿಯಾಗಿರುವಾಗಲೇ ಮತ್ತೊಂದು ಮಗುವಿಗೆ ಗರ್ಭ ಧರಿಸುವುದು ಸೂಪರ್ ಫೆಟೇಶನ್ ಎಂದು ಹೇಳಲಾಗುತ್ತದೆ. 2 ಬಾರಿ ಅಂಡಾಶಯದಿಂದ ಅಂಡಾಣು ಬಿಡುಗಡೆಯಾದಾಗ ಈ ರೀತಿಯಾಗಿ ಆಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.