ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ನಟನ ಮಾಜಿ ಆಪ್ತ ಸಹಾಯಕ ಅಂಕಿತ್ ಆಚಾರ್ಯ, ಸುಶಾಂತ್ ಸಿಂಗ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಸುಶಾಂತ್‍ನ ಎರಡು ವಸ್ತುಗಳು ಮಾತ್ರ ನನ್ನಲ್ಲಿವೆ: ರಿಯಾ ಚಕ್ರವರ್ತಿ
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅಂಕಿತ್ ಆಚಾರ್ಯ, ನಾನು ಸುಶಾಂತ್ ಸಿಂಗ್ ಅವರ ಜೊತೆ 27*7 ಇರುತ್ತಿದ್ದೆ. ಹೀಗಾಗಿ ಸುಶಾಂತ್ ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರ ಮೃತದೇಹದ ಫೋಟೋಗಳನ್ನು ನಾನು ಹಲವು ಬಾರಿ ನೋಡಿ ಪರಿಶೀಲನೆ ಮಾಡಿದ್ದೇನೆ. ಅವರ ನಾಯಿಯ ಬೆಲ್ಟ್ ಬಳಸಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: ರಿಯಾ ಸೋದರನ ಖಾತೆಗೆ ಸುಶಾಂತ್ ಅಕೌಂಟ್‍ನಿಂದ ಹಣ ವರ್ಗಾವಣೆ
“ನನಗೆ ಸುಶಾಂತ್ ಅಣ್ಣ ತುಂಬಾ ಚೆನ್ನಾಗಿ ಗೊತ್ತು. ಹೀಗಾಗಿ ಇದು ಆತ್ಮಹತ್ಯೆ ಎಂದು ನಾನು ನಂಬಲು ಸಾಧ್ಯವಿಲ್ಲ. ಖಂಡಿತವಾಗಿಯೂ ಇದು ಕೊಲೆ. ನಾವು ಸುಶಾಂತ್ ಅಣ್ಣ ನೇಣು ಹಾಕಿಕೊಂಡಿದ್ದೇವೆ ಎಂದು ಒಪ್ಪಿಕೊಂಡರೂ ಅದು ಆತ್ಮಹತ್ಯೆಯಾದಾಗ, ಗುರುತು ಯಾವಾಗಲೂ ‘ಯು’ ಆಕಾರದಲ್ಲಿರುತ್ತದೆ. ಆದರೆ ಯಾರಾದರೂ ಕತ್ತು ಹಿಸುಕಿದಾಗ ಅದು ಯಾವಾಗಲೂ ‘ಓ’ ಆಕಾರದಲ್ಲಿರುತ್ತದೆ. ಸುಶಾಂತ್ ಗಂಟಲಿನ ಮೇಲೂ ‘ಓ’ ಆಕಾರದ ಗುರುತು ಇದೆ. ಆತ್ಮಹತ್ಯೆಯ ಪ್ರಕರಣಗಳಲ್ಲಿ ವ್ಯಕ್ತಿಯ ಕಣ್ಣುಗಳು ದೊಡ್ಡದಾಗಿ ಹೊರಗೆ ಕಾಣುತ್ತಿರುತ್ತದೆ. ನಾಲಿಗೆ ಹೊರಬರುತ್ತದೆ. ಆದರೆ ಸುಶಾಂತ್ ದೇಹದಲ್ಲಿ ಇದು ಯಾವುದೂ ಸಂಭವಿಸಿಲ್ಲ. ಇದು ಖಂಡಿತವಾಗಿಯೂ ಕೊಲೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುಶಾಂತ್ ಕುತ್ತಿಗೆ ಮೇಲೆ ಇರುವ ಗುರುತು ಅವರ ಮುದ್ದಿನ ನಾಯಿ ಫಡ್ಜ್ ನ ಬೆಲ್ಟ್ ನದ್ದು ಎಂದಿದ್ದಾರೆ. ಸುಶಾಂತ್ ಮೃತದೇಹದ ಫೋಟೋಗಳನ್ನು ಇನ್ನೂ ಇರಿಸಿಕೊಂಡಿದ್ದೇನೆ. ಆ ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೇನೆ. ದುಷ್ಕರ್ಮಿಗಳು ಫಡ್ಜ್ ಬೆಲ್ಟ್ ಬಳಸಿ ಅವರ ಕತ್ತು ಬಿಗಿದುಕೊಂಡಿದ್ದಾರೆ ಎಂದು ಅಂಕಿತ್ ಆರೋಪಿಸಿದ್ದಾರೆ.
ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಅವರು ಸೂಕ್ತ ತನಿಖೆ ನಡೆಸಿ ಸುಶಾಂತ್ ಸರ್‌ಗೆ ನ್ಯಾಯ ಒದಗಿಸಲಿದ್ದಾರೆ ಎಂದು ನಂಬಿದ್ದೇನೆ. ಸುಶಾಂತ್ ಅವರನ್ನು ಕೊಂದ ದುಷ್ಕರ್ಮಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದಿದ್ದಾರೆ.