Connect with us

Bollywood

ರಿಯಾ ಸೋದರನ ಖಾತೆಗೆ ಸುಶಾಂತ್ ಅಕೌಂಟ್‍ನಿಂದ ಹಣ ವರ್ಗಾವಣೆ

Published

on

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಖಾತೆಯಿಂದ ನಟಿ ರಿಯಾ ಸೋದರ ಶೌವಿಕ್ ಚಕ್ರವರ್ತಿ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಆಗಿದೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ.

ಶೌವಿಕ್ ಖಾತೆಗೆ ದೊಡ್ಡ ಮೊತ್ತದ ಹಣ ವರ್ಗಾವಣೆ ಆಗಿಲ್ಲ. ಆದ್ರೆ ಹಲವು ಬಾರಿ ಹಣ ಟಾನ್ಸಫರ್ ಆಗಿದೆ. ಜೂನ್ 10, 2019ರಂದು ಶೌವಿಕ್ ಖಾತೆಗೆ 40 ಸಾವಿರ ರೂ. ವರ್ಗಾವಣೆ ಆಗಿದೆ. ತದನಂತರ ಹಲವು ಬಾರಿ ಕಡಿಮೆ ಮೊತ್ತದ ವ್ಯವಹಾರಗಳು ನಡೆದಿವೆ. ಸುಶಾಂತ್ ತನ್ನ ಮೂರು ಬ್ಯಾಂಕ್ ಖಾತೆಗಳನ್ನು ಕ್ಲೋಸ್ ಮಾಡಿ ಹೊಸ ಅಕೌಂಟ್ ತೆರೆಯಲು ತೀರ್ಮಾನಿಸಿದ್ದರು. ಇದನ್ನೂ ಓದಿ: ಸ್ಫೋಟಕ ಸತ್ಯ ಬಿಚ್ಚಿಟ್ಟ ಸುಶಾಂತ್ ಆಪ್ತ ಗೆಳೆಯ ಸಿದ್ಧಾರ್ಥ್ ಪಿಠಾಣಿ

ಸುಶಾಂತ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ರಿಯಾ ಬಳಸುತ್ತಿದ್ದರು. ರಿಯಾ ಮಾಡುತ್ತಿದ್ದ ಅತ್ಯಧಿಕ ಖರ್ಚುಗಳಿಂದ ಸುಶಾಂತ್ ಚಿಂತೆಯಲ್ಲಿದ್ದರು. ಬಣ್ಣದ ಲೋಕದಿಂದ ದೂರ ಉಳಿಯಲು ಗೆಳೆಯ ನಿರ್ಧರಿಸಿದ್ದ ಎಂದು ಸುಶಾಂತ್ ಆಪ್ತ ಸಿದ್ಧಾರ್ಥ್ ಪಿಠಾಣಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿರುವ ಇಡಿ ಶುಕ್ರವಾರ ರಿಯಾ ಮತ್ತು ಶೌವಿಕ್ ಇಬ್ಬರನ್ನು ವಿಚಾರಣೆಗೆ ಒಳಪಡಿಸಿತ್ತು. ಇದನ್ನೂ ಓದಿ: ಸುಶಾಂತ್ ಕೇಸ್- ಸಿಬಿಐ ತನಿಖೆಗೆ ಕೇಂದ್ರ ಸಮ್ಮತಿ

ಸುಶಾಂತ್ ಖಾತೆಯಿಂದ ರಿಯಾ ಬರೋಬ್ಬರಿ 15 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿಕೊಂಡಿರುವ ಆರೋಪ ನಟಿ ವಿರುದ್ಧ ಕೇಳಿ ಬಂದಿದೆ. ಹಣ ವರ್ಗಾವಣೆ ಶೌವಿಕ್ ಖಾತೆಯ ಮೂಲಕ ನಡೆದಿದೆ ಎನ್ನಲಾಗಿದೆ.

Click to comment

Leave a Reply

Your email address will not be published. Required fields are marked *