ಅಬುಧಾಬಿ: ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಓರ್ವ ಯುವತಿ ಕ್ಯಾಮೆರಾ ಕಣ್ಣಿಗೆ ಬಿದ್ದು ಸಖತ್ ಜನಪ್ರಿಯವಾಗಿದ್ದಳು. ಈಗ ಆ ಯುವತಿ ಯಾರೆಂಬುದುನ್ನು ನೆಟ್ಟಿಗರು ಕಂಡುಹಿಡಿದಿದ್ದಾರೆ.
ಕಳೆದ ಭಾನುವಾರ ನಡೆದ ಪಂಜಾಬ್ ಮತ್ತು ಮುಂಬೈ ನಡುವಿನ ಪಂದ್ಯವನ್ನು ಯಾವ ಕ್ರಿಕೆಟ್ ಪ್ರೇಮಿಯು ಮರೆಯುವುದಿಲ್ಲ. ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೇ ಎರಡು ಸೂಪರ್ ಓವರ್ ನಡೆದ ಮೊದಲ ಪಂದ್ಯ ಎಂದರೆ, ಅದು ಮುಂಬೈ ಮತ್ತು ಪಂಜಾಬ್ ನಡುವಿನ ಪಂದ್ಯ. ಈ ಮ್ಯಾಚಿನ ಸೂಪರ್ ಓವರ್ ವೇಳೆ ಬೆರಳು ಕಚ್ಚಿಕೊಂಡು ಪಂದ್ಯವನ್ನು ಗಂಭೀರವಾಗಿ ನೋಡುತ್ತಿದ್ದ ಯುವತಿಯ ವಿಡಿಯೋ ಸಖತ್ ವೈರಲ್ ಆಗಿತ್ತು.
Advertisement
Advertisement
ಸಾಮಾಜಿಕ ಜಾಲತಾಣದಲ್ಲಿ ಒಂದು ಬಾರಿ ವೈರಲ್ ಆದರೆ ಮುಗಿಯಿತು. ಅವರು ರಾತ್ರೋ ರಾತ್ರಿ ಸ್ಟಾರ್ ಆಗಿ ಬಿಡುತ್ತಾರೆ. ಅಂತೆಯೇ ಈ ಯುವತಿ ಕ್ಯಾಮೆರಾದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ನೆಟ್ಟಿಗರು ಅವಳ ಬಯೋಡೇಟಾಗಾಗಿ ಹುಡುಕಿದ್ದಾರೆ. ಜೊತೆಗೆ ಟ್ವಿಟ್ಟರಿನಲ್ಲಿ ಆಕೆಯ ಫೋಟೋ ಟ್ರೆಂಡಿಂಗ್ ಆಗಿತ್ತು. ಆದರೆ ಇಂದು ಆಕೆಯ ಬಗ್ಗೆ ವಿವರ ದೊರಕಿದ್ದು, ಬೆರಳು ಕಚ್ಚಿ ವೈರಲ್ ಆಗಿದ್ದ ಚೆಲುವೆ ರಿಯನಾ ಲಾಲ್ವಾನಿ ಎಂದು ತಿಳಿದು ಬಂದಿದೆ.
Advertisement
Advertisement
ರಿಯಾನಾ ಲಾಲ್ವಾನಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಪೋರ್ಟರ್ ಎಂದು ತಿಳಿದು ಬಂದಿದೆ. ಜೊತೆಗೆ ಸೂಪರ್ ಓವರ್ ಪಂದ್ಯದಲ್ಲಿ ಪಂಜಾಬಿನ ಸೂಪರ್ ಗರ್ಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಮಿಂಚಿದ್ದಾರೆ. ರಿಯಾನಾ ದುಬೈನ ಜುಮೇರಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪ್ರಸ್ತುತ ಇಂಗ್ಲೆಂಡ್‍ನ ಕೊವೆಂಟ್ರಿಯ ವಾರ್ವಿಕ್ ವಿಶ್ವವಿದ್ಯಾಲಯದಿಂದ ಪದವಿ ಮುಗಿಸುತ್ತಿದ್ದಾರೆ. ಜೊತೆಗೆ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ‘ದಟ್ ಸೂಪರ್ ಓವರ್ ಗರ್ಲ್’ ಎಂದು ಬರೆದುಕೊಂಡಿದ್ದಾರೆ. ಐಪಿಎಲ್‍ನಲ್ಲಿ ಈ ರೀತಿ ಸುಂದರಿಯರು ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ ಕಳೆದ ಬಾರಿಯೂ ಕೂಡ ಹೀಗೆ ಆಗಿತ್ತು.
ಕಳೆದ ಭಾನುವಾರ ನಡೆದ ಐಪಿಎಲ್ ಇತಿಹಾಸದಲ್ಲಿ ಒಂದು ಹೊಸ ದಾಖಲೆ ಬರೆದಿದೆ. ಏಕೆಂದರೆ ಈ ಮ್ಯಾಚಿನಲ್ಲಿ ಪಂದ್ಯ ಟೈ ಆದ ನಂತರ ಸೂಪರ್ ಓವರ್ ಆಡಿಸಲಾಗಿತ್ತು. ಆದರೆ ಮತ್ತೆ ಸೂಪರ್ ಓವರ್ ಕೂಡ ಟೈ ಆಗಿತ್ತು. ಕೊನೆಗೆ ಹೊಸ ನಿಯಮದಂತೆ ಎರಡನೇ ಸೂಪರ್ ಓವರ್ ಆಡಿಸಲಾಗಿತ್ತು. ಎರಡನೇ ಸೂಪರ್ ಓವರಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಪಂಜಾಬ್ ತಂಡ ಗೆದ್ದು ಬೀಗಿತ್ತು.
Boys were awake for 1st super over.
Men were awake for the 2nd one.
*While Legends were awake to watch this girl again one more time.#IPL2020 #MIvsKXIP #SuperOver pic.twitter.com/goE2Es5TZW
— Laughter Corridor (@laughtercoridor) October 18, 2020