ಮುಂಬೈ: ಬಾಲಿವುಡ್ ನಟಿ ಸನ್ನಿ ಲಿಯೋನ್ ಮುಂಬೈನಲ್ಲಿ ಮನೆ ಮನೆಕಟ್ಟಿಸಿದ್ದಾರೆ. ಈಗ ಕುಟುಂಬ ಸಮೇತರಾಗಿ ಹೊಸ ಮನೆಗೆ ಕಾಲಿಟ್ಟಿರುವ ನಟಿ, ಮನೆಯ ಕೆಲವು ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಭಾರತದಲ್ಲಿ ನಮ್ಮ ಜೀವನದ ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ. ನಾವು ಇಲ್ಲಿ ನಿರ್ಮಿಸಿದ ಮನೆ ಮತ್ತು ಜೀವನವನ್ನು ನಾನು ಪ್ರೀತಿಸುತ್ತೇವೆ. ಈ ಸುಂದರವಾದ ಮನೆಯಲ್ಲಿ ನಮ್ಮ 3 ಸುಂದರ ಮಕ್ಕಳೊಂದಿಗೆ ವಾಸಿಸಲಿದ್ದೇವೆ ಎಂದು ಬರೆದು ಕೊಂಡು ಕೆಲವು ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಸನ್ನಿ ಲಿಯೋನ್ ಬಾಲಿವುಡ್‍ಗೆ ಐಟಂ ಹಾಡುಗಳಿಗೆ ಹೆಜ್ಜೆ ಹಾಕುವ ನಟಿಯಾಗಿ ಕಾಲಿಟ್ಟು ನಂತರ ಸಿನಿಮಾ ನಿರ್ಮಾಣ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಹಿಂದಿ ಸಿನಿಮಾಗಳಲ್ಲಿ ಐಟಂ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಪಡ್ಡೆ ಹುಡುಗರ ನಿದ್ದೆ ಕದ್ದಿರುವ ಚೆಲುವೆಯಾಗಿದ್ದಾರೆ. ನಿರ್ಮಾಪಕಿಯಾಗಿ ಬಡ್ತಿ ಪಡೆದಿರುವ ಸನ್ನಿ ಲಿಯೋನ್ ಮುಂಬೈನಲ್ಲಿ ಸ್ವಂತ ಮನೆ ಖರೀದಿಸಿದ್ದಾರೆ.
ಹೊಸ ಮನೆಗೆ ಸನ್ನಿ ಲಿಯೋನ್ ಹಾಗೂ ಕುಟುಂಬದವರು ಗೃಹ ಪ್ರವೇಶ ಮಾಡಿದ್ದಾರೆ. ಈ ವೇಳೆ ಸನ್ನಿ ಲಿಯೋನ್, ಪತಿ ಹಾಗೂ ಮಕ್ಕಳು ಪಿಜ್ಜಾ ಪಾರ್ಟಿ ಮಾಡಿದ್ದಾರೆ. ಮನೆ ಖರೀದಿಸಿರುವ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ನಟಿ, ಮನೆಯಲ್ಲಿ ತೆಗೆದ ಕೆಲವು ಫೋಟೋಗಳನ್ನೂ ಶೇರ್ ಮಾಡುವ ಮೂಲಕವಾಗಿ ಅಭಿಮಾನಿಗಳೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ.