ಮುಂದಿನ ಸಿಎಂ ವಿವಾದ – ಆಪ್ತರಿಗೆ ಸಿದ್ದು `ನವ ಸೀಕ್ರೆಟ್ ಸಂದೇಶ’

Public TV
1 Min Read
siddaramaiah

ಬೆಂಗಳೂರು: ಕಾಂಗ್ರೆಸ್‍ನಲ್ಲಿ `ಮುಂದಿನ ಸಿಎಂ’ ಹೇಳಿಕೆ ವಿವಾದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತೆರೆ ಎಳೆಯಲು ಮುಂದಾಗಿದ್ದಾರೆ. ತಮ್ಮ ಶಿಷ್ಯ ಜಮೀರ್ ಅಹ್ಮದ್ ಅವರನ್ನು ಕರೆದು ಬುದ್ಧಿವಾದ ಹೇಳಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಅಭಿಮಾನ ಬೇರೆ ಪಕ್ಷದ ಶಿಸ್ತು ಬೇರೆ. ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಹೇಳಿಕೆ ಕೊಡಬೇಡ. ಸ್ವಲ್ಪ ದಿನ ಸೈಲೆಂಟ್ ಆಗಿ ಇದ್ದು ಬಿಡು ಎಂದು ಹೇಳಿದ್ದಾರೆ. ಜಮೀರ್ ಅಲ್ಲದೇ ತನ್ನ ಆಪ್ತರಿಗೆ ಎಲ್ಲಿ, ಹೇಗೆ, ಏನು, ಮಾತಾಡಬೇಕು? ಏನು ಮಾತನಾಡಬಾರದು ಎಂಬ ‘ನವ ಸೀಕ್ರೆಟ್ ಸಂದೇಶ’ವನ್ನು ಕಳುಹಿಸಿದ್ದಾರೆ.

zameer rizwan siddu

ಮಾಜಿ ಸಿಎಂ ಹೇಳಿದ್ದೇನು?
ನಾನೇ ಮುಂದಿನ ಸಿಎಂ ಅಂತ ಎಲ್ಲೂ ಬಹಿರಂಗವಾಗಿ ಹೇಳಬೇಡಿ. ಸಿದ್ದರಾಮಯ್ಯ ನೇತೃತ್ವದಲ್ಲಿ ಮುಂದಿನ ಚುನಾವಣೆ ಎನ್ನಬೇಡಿ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಪದೇ ಪದೇ ಹೇಳಿ ತೊಂದರೆ ಇಲ್ಲ. ಇದರ ಜೊತೆ ನಮ್ಮ ಸರ್ಕಾರದ ಜನಪ್ರಿಯ ಯೋಜನೆಗಳ ಬಗ್ಗೆ ಹೆಚ್ಚೆಚ್ಚು ಮಾತನಾಡಬೇಕು.

ಅಗತ್ಯವಿದ್ದಲ್ಲಿ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಹೇಳಿ ಹೊಗಳಿ. ಮಾತನಾಡುವಾಗ ಸಿದ್ದರಾಮಯ್ಯ ಹಾಗೂ ಎಲ್ಲ ನಮ್ಮ ಪಕ್ಷದ ನಾಯಕರು ಎಂದು ಹೇಳಿಬಿಡಿ. ಬಿಜೆಪಿ ವೈಫಲ್ಯಗಳ ಬಗ್ಗೆ ಮಾತಾಡುವಾಗ ನಮ್ಮ ಸರ್ಕಾರದ ಸಾಧನೆಗಳ ಜೊತೆ ಹೋಲಿಸಿ. ಕ್ಷೇತ್ರವಾರು ಹೆಚ್ಚೆಚ್ಚು ಕಾರ್ಯಕ್ರಮ ಹಮ್ಮಿಕೊಳ್ಳಿ. ಸಾಧ್ಯವಾದಷ್ಟು ನಾನು ಬಂದು ಹೋಗುತ್ತೇನೆ. ಹೈಕಮಾಂಡ್ ತೀರ್ಮಾನವೇ ಅಂತಿಮ, ವ್ಯಕ್ತಿಗಿಂತ ಪಕ್ಷ ಮುಖ್ಯ ಎನ್ನುವುದನ್ನು ಹೇಳಬೇಕು. ಇದನ್ನೂ ಓದಿ : ಸಿದ್ದರಾಮಯ್ಯ ಸಿಎಂ ಕ್ಯಾಂಡಿಡೇಟ್ ಎಂದು ಘೋಷಿಸಿದರೆ 150 ಸೀಟ್ ಫಿಕ್ಸ್: ಅಖಂಡ

siddaramaiah zameer 2 medium

ಮುಂದಿನ ಸಿಎಂ ಹೇಳಿಕೆಯಿಂದ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಅಳೆದು ತೂಗಿ ಯಾರಿಗೂ ತೊಂದರೆ ಆಗದಂತೆ ತಮ್ಮ ಇಮೇಜ್ ಬಿಲ್ಡ್ ಮಾಡುವಂತೆ  ವ್ಯವಸ್ಥಿತವಾಗಿ ಆಪ್ತರಿಗೆ ಸಂದೇಶ ಕಳುಹಿಸಿದ್ದಾರೆ. ಈ ಸಂದೇಶವನ್ನು ಆಪ್ತರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.

Share This Article
Leave a Comment

Leave a Reply

Your email address will not be published. Required fields are marked *