ತಿರುವನಂತಪುರ: ರೆಸಾರ್ಟ್ ಒಂದರ ಸ್ವಿಮ್ಮಿಂಗ್ ಪೂಲನ್ನು ಮೀನು ಸಾಕಾಣಿಕೆ ಕೇಂದ್ರವಾಗಿ ಬದಲಾಯಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕೊರೊನಾ ಲಾಕ್‍ಡೌನ್ ಕಾರಣದಿಂದ ಗ್ರಾಹಕರು ಇಲ್ಲದೇ ರೆಸಾರ್ಟ್ ಆದಾಯಕ್ಕೆ ಹೊಡೆತ ಬಿದ್ದಿದ್ದು, ಇದನ್ನು ಸರಿದೂಗಿಸುವ ಹಿನ್ನೆಲೆಯಲ್ಲಿ ರೆಸಾರ್ಟ್ ಮಾಲೀಕರು ಹೊಸ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
Advertisement
Advertisement
ಕೇರಳದ ಕುಮಾರಕೋಮ್‍ನಲ್ಲಿರುವ ಅವೆಡಾ ರೆಸಾರ್ಟ್ ಈಗ ಮೀನು ಸಾಕಾಣಿಕಾ ಕೇಂದ್ರವಾಗಿ ಬದಲಾಗಿದ್ದು, ಇಲ್ಲಿನ ಐಶಾರಾಮಿ ಸ್ಪಾ ಹಾಗೂ ಈಜುಕೊಳದಲ್ಲಿ ಮೀನುಗಳನ್ನು ಸಾಕಲಾಗುತ್ತಿದೆ.
Advertisement
ಕಳೆದ ಮಾರ್ಚ್ ತಿಂಗಳಿನಿಂದ ರೆಸಾರ್ಟಿಗೆ ಗ್ರಾಹಕರಿಲ್ಲದೇ ಆದಾಯಕ್ಕೆ ಪೆಟ್ಟುಬಿದ್ದಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲಸಗಾರರಿಗೂ ಸಂಬಳ ನೀಡಲು ಮಾಲೀಕರು ಸಂಕಷ್ಟ ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ ಹೊಸ ಚಿಂತನೆಯೊಂದಿಗೆ ಆದಾಯ ಗಳಿಸಲು ರೆಸಾರ್ಟಿನಲ್ಲಿದ್ದ 75 ಲಕ್ಷ ಲೀಟರ್ ಸಾಮಥ್ರ್ಯದ ಈಜುಕೊಳದಲ್ಲಿ ಮೀನು ಸಾಕಾಣಿಕೆ ಆರಂಭಿಸಿದ್ದರು.
Advertisement
ಈ ಕುರಿತು ಮಾತನಾಡಿರುವ ರೆಸಾರ್ಟ್ ಮ್ಯಾನೇಜರ್ ಸುರೇಂದ್ರನ್, ಲಾಕ್‍ಡೌನ್ ಕಾರಣದಿಂದ ನಮ್ಮ ಆದಾಯ ನಿಂತು ಹೋಗಿತ್ತು. ಆದ್ದರಿಂದ ಜೂನ್ ತಿಂಗಳಿನಿಂದ ರೆಸಾರ್ಟಿನಲ್ಲಿದ್ದ ಈಜುಕೊಳದಲ್ಲಿ ಮೀನು ಸಾಕುತ್ತಿದ್ದೇವೆ. 2 ತಿಂಗಳ ವಯಸ್ಸಿನ 16 ಸಾವಿರ ಪರ್ಲ್ ಸ್ಪಾಟ್ ಮೀನುಗಳನ್ನು ಸಾಕಿದ್ದು, ನವೆಂಬರ್ ವೇಳೆಗೆ ಮೀನು ಮಾರಾಟಕ್ಕೆ ಲಭಿಸುತ್ತದೆ. ಈ ಮೀನುಗಳನ್ನು ಮಧ್ಯಪ್ರಾಚ್ಯಕ್ಕೆ ರಫ್ತು ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಸದ್ಯ ನಮ್ಮಲಿರುವ ಈಜುಕೊಳದಲ್ಲಿ 40 ಲಕ್ಷ ಟನ್ ಮೀನು ಸಾಕಾಣಿಕೆ ಮಾಡಲು ಸಾಧ್ಯವಿದೆ. ಈ ಮೀನಿನ ಮಾರಾಟದಿಂದ 40 ಸಾವಿರ ಡಾಲರ್ (ಸುಮಾರು 29,90,892 ರೂ.) ಆದಾಯ ಗಳಿಸುವ ಸಾಧ್ಯತೆ ಇದೆ. ಇದರಿಂದ ನಮ್ಮ ಉದ್ಯೋಗಿಗಳಿಗೆ ಸಂಬಳ ನೀಡಲು ಹಾಗೂ ರೆಸಾರ್ಟ್ ನಿರ್ವಹಣೆ ಮಾಡಲು ಬಳಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.