ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ಎಷ್ಟು ಸಾವು-ನೋವಾಗಿದೆ ಅನ್ನೋದನ್ನ ನೋಡಿದ್ದೇವೆ. ಸರ್ಕಾರ, ತಜ್ಞ ವೈದ್ಯರು ಮಾಸ್ಕ್ ಹಾಕಿರಲೇ ಬೇಕು. ಇಲ್ಲ ಮೂರನೇ ಅಲೆ ಎದುರಿಸಬೇಕಾಗುತ್ತದೆ ಅನ್ನೋ ಎಚ್ಚರಿಕೆ ನಡುವೆ ಜನ ಮಾಸ್ಕ್ ಅನ್ನೋದನ್ನೇ ಮರೆತಿದ್ದಾರೆ. ಕೆ.ಆರ್ ಮಾರ್ಕೆಟ್ ಬಳಿ ಮಾರ್ಷಲ್ಸ್ ಮಾಸ್ಕ್ ಎಲ್ಲಿ ಅಂದಿದ್ದೇ ತಡ ಯುವಕನೊಬ್ಬ ಬಟ್ಟೆ ಬಿಚ್ಚಿ ಕೂತುಬಿಟ್ಟಿದ್ದಾನೆ.
Advertisement
ಮಾರ್ಕೆಟ್ ಅಂದ್ರೇ ಜನದಟ್ಟಣೆ ಇರೋ ಜಾಗ. ಇಲ್ಲಿ ಟೀ ಫ್ಲಾಸ್ಕ್ ಹಿಡಿದು ವ್ಯಾಪಾರ ಮಾಡ್ತಿದ್ದ ಯುವಕ ಮಾಸ್ಕ್ ಹಾಕಿರಲಿಲ್ಲ. ಮಾಸ್ಕ್ ಇಲ್ಲದೆ ಎಲ್ಲಿ ಫೈನ್ ಕಟ್ಟು ಅಂತ ಮಾರ್ಷಲ್ಸ್ ಕೇಳಿದ್ದೇ ತಡ ಶರ್ಟ್ ಪ್ಯಾಂಟ್ ಬಿಚ್ಚಿ ಯುವಕ ಅರೆನಗ್ನನಾದ. ಇದನ್ನೂ ಓದಿ: ಕೇಂದ್ರದ ಮಾಜಿ ಸಚಿವರ ಪತ್ನಿಯ ಬರ್ಬರ ಹತ್ಯೆ
Advertisement
Advertisement
ಯುವಕನ ಈ ಸಡನ್ ವರ್ತನೆಗೆ ಕಕ್ಕಾಬಿಕ್ಕಿಯಾದ ಮಾರ್ಷಲ್ಸ್ ಅಲ್ಲಿಂದ ಜಾಗ ಖಾಲಿ ಮಾಡಿದರು. ಅವರು ಹೋದ ನಂತರ ಬಟ್ಟೆ ಹಾಕಿಕೊಂಡ ಯುವಕ ವ್ಯಾಪಾರ ಮಾಡ್ತಿದ್ದವರಿಗೆ ಯಾರೂ ಮಾಸ್ಕ್ ಹಾಕಬೇಡಿ ಏನ್ ಮಾಡ್ತಾರೋ ನೋಡೋಣ ಅಂತ ಹೇಳುತ್ತಾ ಹೋದ ಪ್ರಸಂಗ ನಡೆಯಿತು.