ಧಾರವಾಡ: ಕೊರೊನಾ ವೈರಸ್ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಗತ್ಯ. ಆದರೆ ಬಹುತೇಕರು ಇದನ್ನು ಪಾಲಿಸುವುದಿಲ್ಲ. ಹೀಗಾಗಿ ನಗರದಲ್ಲಿ ವಿಭಿನ್ನ ರೀತಿಯ ಜಾಗೃತಿ ಮೂಡಿಸಲಾಗುತ್ತಿದೆ.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ನಿರಂತರ ಪ್ರಯತ್ನ ಮಾಡುತ್ತಿವೆ. ಇದರ ಭಾಗವಾಗಿ ಇದೀಗ ಕೊರೊನಾ ವೈರಸ್ ವೇಷಧಾರಿಯನ್ನು ನಗರದ ಸಿಬಿಟಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕಳುಹಿಸಲಾಯಿತು.
Advertisement
Advertisement
ಜಿಲ್ಲಾಧಿಕಾರಿ ನಿತೇಶ್.ಕೆ.ಪಾಟೀಲ್ ಅವರ ಪರಿಕಲ್ಪನೆಯಲ್ಲಿ ಈ ಕಾರ್ಯ ಕೈಗೊಂಡಿದ್ದು, ಪ್ರತಿನಿತ್ಯ ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಕೊರೊನಾ ತಪಾಸಣೆಗೆ ಒಳಪಡಿಸುವ ಕಾರ್ಯಾಚರಣೆ ಮಧ್ಯೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಲಾವಿದರೊಬ್ಬರನ್ನು ಬಳಸಿಕೊಂಡು ಅವರಿಗೆ ಕೊರೊನಾ ವೈರಸ್ ವೇಷ ಹಾಕಿಸಿ, ಜನ ನಿಬಿಡ ಸ್ಥಳಗಳಲ್ಲಿ ಹಠಾತ್ ಕಳಿಸಿ, ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಕೋವಿಡ್ ತಪಾಸಣೆಗೆ ಕರೆತರುವ ಕಾರ್ಯಾಚರಣೆ ಆರಂಭಿಸಲಾಗಿದೆ.
Advertisement
Advertisement
ಈ ಕಾರ್ಯ ಇಂದಿನಿಂದ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದು, ನಾದಝೇಂಕಾರ ಸಂಸ್ಥೆಯ ಯಮನಪ್ಪ ಜಾಲಗಾರ ಅವರು ತಮ್ಮ ತಂಡದ ಬಸವರಾಜ ಗುಡ್ಡಪ್ಪನವರ ಅವರಿಗೆ ಕೊರೊನಾ ವೇಷ ತೊಡಿಸಿ, ಜನರ ಮಧ್ಯೆ ಕಳಿಸಿದ್ದರು. ಈ ಮೂಲಕ ಜನರಲ್ಲಿ ಜಾಗೃತಿ ಹಾಗೂ ಕೊರೊನಾ ಪರೀಕ್ಷೆಗೆ ಕರೆತರಲಾಗುತ್ತಿದೆ.