ಮಾಸ್ಕ್ ಮರೆತ ಕೋಟೆನಾಡಲ್ಲಿ ವಿದ್ಯಾರ್ಥಿಗಳಿಂದ ಜನಜಾಗೃತಿ

Public TV
1 Min Read
Social distance

ಚಿತ್ರದುರ್ಗ: ಮದುವೆ, ಮುಂಜಿ, ನಾಮಕರಣ ಎಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜನರು ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಮರೆತು ಓಡಾಡ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಇದನ್ನೂ ಓದಿ:  ಜುಲೈ 19, 22ಕ್ಕೆ SSLC ಎಕ್ಸಾಂ ಫಿಕ್ಸ್ – 2 ದಿನದಲ್ಲಿ ಸರಳ ಪರೀಕ್ಷೆ, ಯಾರೂ ಫೇಲ್ ಇಲ್ಲ

ನಮಗೆ ಕೊರೊನಾ ಮತ್ತೆ ಮರುಕಳಿಸಿ ಅನಾಹುತವನ್ನ ಸೃಷ್ಟಿಮಾಡಬಹುದೆಂಬ ಮುಂಜಾಗ್ರತೆಯಿಂದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮದ ಮಕ್ಕಳ ಸಹಯೋಗದೊಂದಿಗೆ ಮಾಸ್ಕ್ ಕುರಿತ ಜನಜಾಗೃತಿ ಕಾರ್ಯಕ್ರಮ ಇಂದು ನಡೆಸಲಾಯಿತು.

Chitradurga mask Awareness medium

ಈ ವೇಳೆ ಮಾತನಾಡಿದ ಜಾಗೃತಿ ಹೋರಾಟಗಾರದ ಹೆಚ್ ಎಸ್‍ಕೆ ಸ್ವಾಮಿಯವರು,ವೈದ್ಯರಸಲಹೆಯಂತೆ ವರ್ಷ ಪೂರ್ತಿ ಮಾಸ್ಕ್ ಧರಿಸಿಕೊಂಡು ಇರಬೇಕು. 3ನೇ ಅಲೆ ಮತ್ತೆ ಬರಬಹುದು, ಅದಕ್ಕಾಗಿ ನಾವು ಸಿದ್ಧರಾಗಿರಬೇಕು. 3ನೇ ಅಲೆ ಮಕ್ಕಳಿಗೆ ಬರುತ್ತದೆ ಹೀಗಾಗಿ ಶಾಲಾ ಮಕ್ಕಳಿಗೆ ಲಸಿಕೆ ಹಾಕುವರೆಗೆ ನಾವು ಎಚ್ಚರವಾಗಿರಬೇಕು. ಅಲ್ಲದೇ ಸಾಮಾಜಿಕ ಅಂತರ ಮರೆಯಬಾರದು. ಸಾವಿನ ಪ್ರಮಾಣ ಹೆಚ್ಚಾಗುವ ಸಂಭವವುಂಟು. ಹೀಗಾಗಿ ಕೊರೊನಾ ನಿಗ್ರಹಿಸುವುದು ಮುಂದೆ ಕಷ್ಟಕರವಾಗಬಹುದು. ಆದರೆ ಜನರು ಬೇಗ ವೈದ್ಯಕೀಯ ಮಾಹಿತಿಯನ್ನ ಮರೆತು ಓಡಾಡುವುದನ್ನ ಕಲಿಯುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

Chitradurga mask Awareness5 medium

ಈ ವರ್ಷ ಶಾಲೆಗಳು ಪ್ರಾರಂಭಮಾಡುವುದು ದುಸ್ತರವಾಗಿದೆ, ಅದಕ್ಕಾಗಿ ನಾವು ಇನ್ನೂ ಸಿದ್ಧರಾಗಿಲ್ಲ. ಈ ವರ್ಷ ಪೂರ್ತಿ ಮಕ್ಕಳು ಮನೆಯಲ್ಲೇ ಕಲಿಯಬೇಕಾಗುವುದು, ಅವರ ದೈಹಿಕ ಆರೋಗ್ಯ ಕೂಡ ಏರು ಪೇರಾಗುವುದು. ಪೌಷ್ಟಿಕಾಂಶಗಳ ಕೊರೆತೆ ಎದ್ದು ಕಾಣುವುದು. ಬಿಸಿ ಊಟ ಇಲ್ಲದೇ, ಬಡತನದಲ್ಲಿ ಬದುಕು ಸಾಗಿಸುತ್ತಿರುವ ಸಾವಿರಾರು ಮಕ್ಕಳ ಆರೋಗ್ಯ ರಕ್ಷಣೆ ಆಗಬೇಕು, ಅವರ ಬದುಕು ಕೂಡ ಹಸನಾಗಬೇಕು. ಅದಕ್ಕಾಗಿ ನಾವು ಸಾಕಷ್ಟು ಪ್ರಯತ್ನಪಟ್ಟು ಕೊರೊನಾವನ್ನು ನಮ್ಮಿಂದ ದೂರ ಮಾಡಬೇಕಾಗಿದೆ ಎಂದರು.

mask 3

ಕಾರ್ಯಕ್ರಮದಲ್ಲಿ ಮಕ್ಕಳ ಮಾಸ್ಕ್ ಧರಿಸಿ ಎಂಬ ಕಾಗದದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂಬ ಬಿತ್ತಿ ಪತ್ರಗಳನ್ನ ಪ್ರದರ್ಶಿಸಿ, ಕೊರೊನಾ ಹಾಡಿನ ಮೂಲಕ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಕಾವ್ಯ, ಜಾನವಿ, ಶ್ರೀನಿವಾಸ, ಸುರಕ್ಷಾ, ಹೆಚ್.ಎಸ್.ರಚನ, ಹೆಚ್.ಎಸ್. ಪ್ರೇರಣ, ವೇನಿಲಾ, ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *