– ಕೋವಿಡ್ ನಿಯಂತ್ರಣ, ಲಸಿಕೆ ನೀಡುವ ಸಂಬಂಧ ವಚ್ರ್ಯುಯಲ್ ಸಭೆ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಿಸಬೇಕಾದರೆ ಪ್ರತಿಯೊಬ್ಬರೂ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹಾಗೂ ಆಗಿಂದ್ದಾಗ್ಗೆ ಕೈತೊಳೆಯುತ್ತಿರಬೇಕು. ಇದಲ್ಲದೆ ಧಾರ್ಮಿಕ ಕೇಂದ್ರಗಳು, ಮಾಲ್‍ಗಳು, ಪಬ್ಸ್, ರೆಸ್ಟೋರೆಂಟ್‍ಗಳು, ಚಿತ್ರಮಂದಿಗಳಿಗೆ ಹೋಗುವುದನ್ನು ಆದಷ್ಟು ನಿಯಂತ್ರಣ ಮಾಡಿಕೊಳ್ಳಿ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
Advertisement
ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಇಂದು ಜೂಮ್ ಮೂಲಕ ವಚ್ರ್ಯುಯಲ್ ಮೂಲಕ ಸಭೆ ನಡೆಸಿದ ಮುಖ್ಯ ಆಯುಕ್ತರು, ಅಪಾಟ್ರ್ಮೆಂಟ್ಸ್/ ಕಾಂಪ್ಲೆಕ್ಸ್ ಗಳಲ್ಲಿ ವಾಸಿಸುತ್ತಿರುವವರು ಐ.ಎಲ್.ಐ/ಸಾರಿ, ಸೋಂಕು ಲಕ್ಷಣಗಳು ಕಂಡು ಬಂದರೆ ಕೂಡಲೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಿ. ಜೊತೆಗೆ ಯಾರಿಗಾದರು ಸೋಂಕು ಪತ್ತೆಯಾಗಿದ್ದರೆ ಅವರ ಜೊತೆ ಸಂಪರ್ಕದಲ್ಲಿದ್ದವರು ಮುಂಜಾಗ್ರತೆಯಿಂದ ಸ್ವಯಂಪ್ರೇರಿತವಾಗಿ ಪರೀಕ್ಷೆ ಮಾಡಿಸಿಕೊಂಡು, ಐಸೋಲೇಟ್ ಆದಾಗ ಕೋವಿಡ್ ಸೊಂಕು ಹರಡುವುದು ಕಡಿಮೆಯಾಗಲಿದೆ. ಈ ಸಂಬಂಧ ಎಲ್ಲರೂ ಪಾಲಿಕೆಯ ಜೊತೆ ಕೈಜೋಡಿಸಿ ಕೋವಿಡ್ ಸೋಂಕು ನಿಯಂತ್ರಿಸಲು ಸಹಕರಿಸುವಂತೆ ತಿಳಿಸಿದರು.
Advertisement
Advertisement
ನಗರದ ಅಪಾಟ್ರ್ಮೆಂಟ್ಸ್/ ಕಾಂಪ್ಲೆಕ್ಸ್ ಗಳಲ್ಲಿ ಲಸಿಕೆ ನೀಡಲು ಕಾಯುವ ಕೊಠಡಿ, ಲಸಿಕೆ ನೀಡುವ ಕೊಠಡಿ, ಪರಿವೀಕ್ಷಣಾ ಕೊಠಡಿಗಳಿಗೆ ಸ್ಥಳಾವಕಾಶವಿದ್ದಲ್ಲಿ ಸ್ಥಳೀಯ ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದೊಂದಿಗೆ ತಾತ್ಕಾಲಿಕ ಲಸಿಕೆ ಕೇಂದ್ರಗಳನ್ನು ಸ್ಥಾಪಿಸುವ ಸಂಬಂಧ ಸರ್ಕಾರದ ಮಾರ್ಗಸೂಚಿ ಹೊರಡಿಸಿದ ನಂತರ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ಸದ್ಯ ಹತ್ತಿರವಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ಲಸಿಕೆ ಪಡೆಯಬಹುದು ಎಂದರು.
Advertisement
ನಗರದಲ್ಲಿ 20 ರಿಂದ 40 ವರ್ಷದ ವ್ಯಕ್ತಿಗಳಿಗೆ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ. ಈ ಸಂಬಂಧ ಒಳಾಂಗಣ ಮತ್ತು ಹೊರಾಂಗಣಗಳಲ್ಲಿ ನಡೆಯುವ ಸಭೆ/ಸಮಾರಂಭ/ಕಾರ್ಯಕ್ರಮಗಳಿಗೆ ಹೋಗುವುದನ್ನು ಸಾಧ್ಯವಾದಷ್ಟು ನಿಲ್ಲಿಸಿ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಮಾತನಾಡಿ, ನಗರದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ದಿನಕ್ಕೆ 3,000 ಪ್ರಕರಣಗಳು ಪತ್ತೆಯಾಗುತ್ತಿವೆ. ಪಾಸಿಟಿವ್ ರೇಟ್ ಜೊತೆ ಸಾವಿನ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಮುಂಜಾಗ್ರತೆಯಿಂದ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಕೋವಿಡ್ ಸೋಂಕು ಹರಡುವುದನ್ನು ತಡೆಯಬೇಕು. ಅದಕ್ಕೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ವಿಶೇಷ ಆಯುಕ್ತ ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಆರೋಗ್ಯಾಧಿಕಾರಿ, ಆರೋಗ್ಯ ವೈದ್ಯಾಧಿಕಾರಿ ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ನಿವಾಸಿಗಳು ಭಾಗವಹಿಸಿದ್ದರು.