ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ಮಾಸ್ಕ್ ಧರಿಸದ ಜನರಿಗೆ ದಂಡ ಹಾಕಲಾಗುತ್ತಿದೆ. ಕಳೆದ 9 ದಿನಗಳಲ್ಲಿ 1,02,800 ರೂ. ದಂಡ ವಸೂಲಿ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಮಾಣ ಏರಿಕೆ ಆಗುತ್ತಲಿದೆ. ಹೀಗಿರುವಾಗ ಜಿಲ್ಲಾಡಳಿತ ಸಹ ಕಠಿಣ ಕ್ರಮವನ್ನು ಜಾರಿಗೊಳಿಸಿದೆ.
Advertisement
ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರವಾಸಿಗರು ದಾಂಡೇಲಿ ತಾಲೂಕಿಗೆ ಬರುತ್ತಾರೆ. ಈ ಹಿಂದೆ ದಾಂಡೇಲಿ-ಹಳಿಯಾಳ ತಾಲೂಕುಗಳು ಸೇರಿ 6,679ಜನರು ಕರೋನಾ ಸೋಂಕಿತರಾಗಿದ್ದು 123 ಜನ ಕೊರೊನಾಗೆ ಬಲಿಯಾಗಿದ್ದಾರೆ. ಹೀಗಾಗಿ ಪ್ರವಾಸಿಗರು ಹೆಚ್ಚು ಬರುವ ದಾಂಡೇಲಿ ತಾಲೂಕಿನಲ್ಲಿ ಕಠಿಣ ಕೊರೊನಾ ನಿಯಮವನ್ನು ಜಾರಿಗೆ ತಂದಿದೆ. ಆದರೆ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಕೊರೊನಾ ನಿಯಮಗಳನ್ನು ಗಾಳಿಗೆ ತೂರುತ್ತಿದ್ದು, ಇದೀಗ ಸ್ಥಳೀಯ ಆಡಳಿತ ಮಾಸ್ಕ ಧರಿಸದ ಜನರ ವಿರುದ್ಧ ಕಾರ್ಯಾಚರಣೆ ನಡೆಸಿ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ. ಇದನ್ನೂ ಓದಿ: ನಿಮ್ಮ ಹೆಸರು ನೀರಜ್, ವಂದನಾ ಆಗಿದ್ರೆ ರೋಪ್ ವೇ ಸೇವೆ ಉಚಿತ
Advertisement
Advertisement
ಮೂರನೇ ಅಲೆ ತಡೆಗೆ ನಗರದ ತಾಲೂಕಾಡಳಿತ, ನಗರಾಡಳಿತ, ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತಿದೆ. ಮಾಸ್ಕ್ ಧರಿಸದವರನ್ನು ಗುರುತಿಸಿ ದಂಡ ವಸೂಲಿ ಮಾಡಲಾಗುತ್ತಿದೆ. ಆಗಸ್ಟ್ 1ರಿಂದ 9ರವೆರೆಗೆ ಕೇವಲ ಒಂಭತ್ತು ದಿನದಲ್ಲಿ 1,02,800 ರೂ.ಗಳನ್ನು ಇಲ್ಲಿನ ನಗರಾಡಳಿತ, ತಾಲೂಕಾಡಳಿತ, ಪೊಲೀಸ್ ಇಲಾಖೆ ಸಹಕಾರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಸಂಗ್ರಹ ಮಾಡಲಾಗಿದೆ ಎಂದು ತಹಶೀಲ್ದಾರ್ ಶೈಲೇಶ್ ತಿಳಿಸಿದ್ದಾರೆ.