ಮುಂಬೈ: ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವನ್ನಪ್ಪಿದ್ದ ನಾಲ್ಕು ದಿನಗಳ ಬಳಿಕ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುಂಬೈನ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗುತ್ತಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜೂನ್ 10ರಂದು ದಿಶಾ 14ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಅಂದು ರಾತ್ರಿ ಗೆಳೆಯರ ಜೊತೆ ಪಾರ್ಟಿ ಮಾಡಿದ್ದ ದಿಶಾ 14ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ದಿಶಾ ಗೆಳೆಯನ ಜೊತೆ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು.
ಇನ್ನು ಖಾಸಗಿ ವಾಹಿನಿಯ ಪವಿತ್ರ ರಿಶ್ತಾ ಧಾರಾವಾಹಿ ಮೂಲಕ ಸುಶಾಂತ್ ಮನೆ ಮಾತಾಗಿದ್ದರು. ಹಂತ ಹಂತವಾಗಿ ಬೆಳವಣಿಗೆ ಹೊಂದಿದ್ದ ಸುಶಾಂತ್, ತಮ್ಮ ಕ್ಯೂಟ್ ಸ್ಮೈಲ್, ಸ್ಟೈಲ್, ಕಟ್ಟುಮಸ್ತಾದ ದೇಹದ ಮೂಲಕ ಗುರುತಿಸಿಕೊಂಡಿದ್ದಾರೆ. ಧೋನಿ ಸಿನ್ಮಾ ಬಳಿಕ ಟಾಪ್ ನಟರಲ್ಲಿ ಒಬ್ಬರಾಗಿ ಸುಶಾಂತ್ ಒಬ್ಬರಾಗಿದ್ದರು.
ಕೈ ಪೋ ಚೇ, ಶುದ್ಧ ದೇಸಿ ರೊಮ್ಯಾನ್ಸ್, ಪಿಕೆ, ರಾಬ್ತಾ, ವೆಲ್ ಕಮ್ ನ್ಯೂಯಾರ್ಕ್, ಕೇದಾರನಾಥ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸುಶಾಂತ್ ನಟಿಸಿದ್ದರು.
ಧೋನಿ ಸಿನ್ಮಾ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆhttps://t.co/ZmScHKWlr4#SushantSingRajput #bollywood
— PublicTV (@publictvnews) June 14, 2020