ರಾಯಚೂರು: ಮಹಿಳೆಯರ ಸೀರೆ ಎಳೆದು ಕಿರುಕುಳ ನೀಡುತ್ತಿದ್ದವನಿಗೆ ಸ್ಥಳೀಯರು ಧರ್ಮದೇಟು ಕೊಟ್ಟಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ನಗರದ ಆಶಾಪುರ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವ ರಸ್ತೆಯಲ್ಲಿ ಓಡಾಡುವ ಮಹಿಳೆಯರಿಗೆ ಸೀರೆ ಎಳೆದು ಕಿರುಕುಳ ನೀಡುತ್ತಿದ್ದ. ಇದನ್ನ ಗಮನಿಸಿದ ಸ್ಥಳೀಯರು ವ್ಯಕ್ತಿಯನ್ನ ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಳಿಕ ಮರಕ್ಕೆ ಕಟ್ಟಿಹಾಕಿದ್ದಾರೆ. ಇದನ್ನೂ ಓದಿ: ಮೇಕೆದಾಟು ವಿಚಾರ – ಉಪವಾಸ ಸತ್ಯಾಗ್ರಹ ಮಾಡ್ತೀವಿ ಎಂದಿರೋ ಅಣ್ಣಾಮಲೈಗೆ ಬೊಮ್ಮಾಯಿ ತಿರುಗೇಟು
ಹಿಂದೆ ಎಂದೂ ಈ ಪ್ರದೇಶದಲ್ಲಿ ಕಾಣಿಸಿಕೊಳ್ಳದ ಈ ವ್ಯಕ್ತಿ ಓಡಾಡುವ ಮಹಿಳೆಯರ ಹಿಂದೆ ಬಿದ್ದು ಸೀರೆ ಎಳೆಯುತ್ತಿದ್ದನು. ಭಯದಿಂದ ಮಹಿಳೆಯರು ಮುಂದೆ ಹೋಗುತ್ತಿದ್ದರು. ಇದನ್ನೆ ಮುಂದುವರೆಸಿದ ವ್ಯಕ್ತಿಯನ್ನ ಹಿಡಿದು ಜನ ಚೆನ್ನಾಗಿ ಥಳಿಸಿದ್ದಾರೆ. ಕೊನೆಗೆ ವ್ಯಕ್ತಿಯನ್ನ ನಗರದ ಪಶ್ಚಿಮ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ.