ಸ್ಕರ್ಟ್ ಗಳಲ್ಲಿ ಹಲವಾರು ವಿಧದ ಸ್ಕರ್ಟ್‍ಗಳಿವೆ. ಅದರಲ್ಲಿ ಟೆನ್ನಿಸ್ ಸ್ಕರ್ಟ್ ಕೂಡ ಒಂದು. ಕೆಲವರು ಸ್ಟೈಲ್‍ಗಾಗಿ ಸ್ಕರ್ಟ್‍ನನ್ನು ಬಳಸಿದರೆ, ಇನ್ನೂ ಕೆಲವರು ಬೆಳಗ್ಗಿನ ಜಾವ ಜಾಗಿಂಗ್ ಮಾಡಲು ಧರಿಸುತ್ತಾರೆ. ವಿಮಾನಗಳಲ್ಲಿ ಪ್ರಯಾಣಿಸುವ ವೇಳೆ ಸ್ಕರ್ಟ್ ಧರಿಸುವುದರಿಂದ ಕಂಫರ್ಟ್ ಫೀಲ್ ದೊರೆಯುತ್ತದೆ. ಕೆಲವು ದಿನಗಳಿಂದ ಲೆಗ್ಗಿಂಗ್ಸ್‍ಗಳಿಗೆ ಹೆಚ್ಚು ಡಿಮ್ಯಾಂಡ್ ಇದ್ದರೂ ಸಹ ಟೆನ್ನಿಸ್ ಸ್ಕರ್ಟ್ ನೋಡಲು ಬಹಳ ಸುಂದರವಾಗಿ ಕಾಣಿಸುತ್ತದೆ ಎಂದು ಹೇಳಬಹುದು. ಕ್ರೀಡಾ ಪಟುಗಳಿಗೆ ಹೆಚ್ಚು ಕಂಫರ್ಟ್ ಫೀಲ್ ನೀಡುತ್ತದೆ.
Advertisement
ಟೆನ್ನಿಸ್ ಸ್ಕರ್ಟ್ (Tennis Skirt)
ರೋಯಿಂಗ್ ಬ್ಲೇಜರ್ಸ್ ಇತ್ತೀಚಿನ ಲೇಟೆಸ್ಟ್ ಡಿಸೈನರ್ ಸ್ಕರ್ಟ್ ಆಗಿದ್ದು, ಬಿಳಿ ಬಣ್ಣದ ಈ ಸ್ಕರ್ಟ್ ಸುತ್ತ ಪಟ್ಟೆಯ ರೀತಿ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಬಹಳ ಬೇಗ ಎಲ್ಲರನ್ನು ಆಕರ್ಷಿಸುತ್ತದೆ ಮತ್ತು ಧರಿಸಲು ಪರ್ಫೆಕ್ಟ್ ಆಗಿರುತ್ತದೆ.
Advertisement
Advertisement
ಕೋರ್ಟ್ ಸ್ಕರ್ಟ್ (Court Skort 4.5″)
2013ರ ಟ್ರೆಂಡಿಂಗ್‍ನಲ್ಲಿದ್ದ ಈ ಸ್ಕರ್ಟ್ ಉತ್ತಮ ಕ್ವಾಲಿಟಿ ಹೊಂದಿದ್ದು, ಕೈಗೆಟಕುವ ಬೆಲೆಗೆ ಸುಲಭವಾಗಿ ದೊರೆಯುತ್ತದೆ. ಹಲವಾರು ವರ್ಷಗಳಿಂದ ಇಲ್ಲಿಯವರೆಗೂ ಟ್ರೆಂಡಿಂಗ್‍ನಲ್ಲಿಯೇ ಇರುವ ಈ ಸ್ಕರ್ಟ್‍ನನ್ನು ಕ್ರೀಡಾಪಟುಗಳೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.
Advertisement
ಮ್ಯಾಚ್ ಪಾಯಿಂಟ್ ಟೆನ್ನಿಸ್ ಸ್ಕರ್ಟ್ (Match Point Tennis Skirt)
ಈ ಸ್ಕರ್ಟ್ ಬೇಸಿಗೆ ಕಾಲದಲ್ಲಿ ಧರಿಸಲು ಬಹಳ ಉತ್ತಮವಾಗಿದೆ. ಜೆರ್ಸಿ ಜೊತೆಗೆ ಈ ಸ್ಕರ್ಟ್ ಸಖತ್ ಆಗಿ ಕಾಣಿಸುತ್ತದೆ. ಇದರ ತೂಕ ಕೂಡ ಬಹಳ ಕಡಿಮೆ ಇದೆ.
ಬ್ಲೇಕ್ ಟೆನ್ನಿಸ್ ಸ್ಕರ್ಟ್ (Blake Tennis Skirt)
ಇದನ್ನು ಮಿನಿ ಸೈಡ್-ಸ್ಲಿಟ್ ಸ್ಕರ್ಟ್ ಎಂದು ಕರೆಯುತ್ತಾರೆ. ಈ ಸ್ಕರ್ಟ್ ಓಡಾಡುವಾಗ ಕಂಫರ್ಟ್ ಫೀಲ್ ಕೊಡುತ್ತದೆ. ಈ ಸ್ಕರ್ಟ್‍ಗೆ ಮೇಲಿನ ತುದಿಯಲ್ಲಿ ಕಪ್ಪು ಬಣ್ಣದ ಸಣ್ಣ ಪಟ್ಟಿ ನೀಡಲಾಗಿದ್ದು, ಸ್ಕರ್ಟ್ ಕೆಳಗಿನ ಅಂಚಿನ ಅಕ್ಕ-ಪಕ್ಕ ಸ್ವಲ್ಪ ಕಟ್ ಮಾಡಲಾಗಿದೆ.
ಲೋಗೋ ಪ್ಯಾಚ್ ಎ-ಲೈನ್ ಸ್ಕರ್ಟ್ (Logo-Patch A-Line Skirt)
ಈ ಸ್ಕರ್ಟ್ ಕೆಲಸ ಮಾಡುವ ಸ್ಥಳಗಳಲ್ಲಿ ಧರಿಸಲು ಸೂಕ್ತವಾಗಿದ್ದು, ಜೊತೆಗೆ ಹೆಚ್ಚು ಮಾಡರ್ನ್ ಲುಕ್ ನೀಡುತ್ತದೆ. ಅಲ್ಲದೇ ಬೇಸಿಗೆಯಲ್ಲಿ ಮಾತ್ರವಲ್ಲದೇ ಎಲ್ಲಾ ಸಮಯದಲ್ಲಿಯೂ ಧರಿಸಲು ಉತ್ತಮವಾಗಿದೆ.