ಗಾಂಧಿನಗರ: ವ್ಯಕ್ತಿಯೊಬ್ಬ ಹೆಣ್ಣಿನಂತೆ ವೇಷಧರಿಸಿ ಬ್ಯೂಟಿ ಪಾರ್ಲರ್‌ಗೆ ಬಂದು, ಪಾರ್ಲರ್ ಮಹಿಳೆಗೆ ಕಿರುಕುಳ ನೀಡಿರುವ ಘಟನೆ ಗುಜರಾತ್‍ನಲ್ಲಿ ನಡೆದಿದೆ.
ಸಂತ್ರಸ್ತೆ ಮಹಿಳೆ ಗಂಡನನ್ನು ಕಳೆದುಕೊಂಡಿದ್ದಾರೆ. ಒಬ್ಬಂಟಿಯಾಗಿ 12 ವರ್ಷದ ಮಗನೊ0ದಿಗೆ ವಾಸವಾಗಿದ್ದಾರೆ. ಇವರು ಬ್ಯೂಟಿ ಪಾರ್ಲರ್ ನಡೆಸಿ ಜೀವನವನ್ನು ಸಾಗಿಸುತ್ತಿದ್ದಾರೆ.
ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮಹಿಳೆ ಒಬ್ಬರೇ ಪಾರ್ಲರ್‌ನಲ್ಲಿ ಇದ್ದರು. ಈ ವೇಳೆ ವ್ಯಕ್ತಿಯೊಬ್ಬ ಬಿಳಿ ಕುರ್ತಾ ಧರಿಸಿ ಮಹಿಳೆಯಂತೆ ವೇಷಧರಿಸಿ ಬಂದಿದ್ದಾನೆ. ಪಾರ್ಲರ್ ಮಹಿಳೆಗೆ ಅವರ ಧ್ವನಿ ಕೇಳಿ ಅನುಮಾನ ಬಂದಿದೆ. ಹೊರಗೆ ಹೋಗಿ ಎಂದು ಹೇಳಿದ್ದಾಳೆ. ಆಗ ಮಹಿಳೆಯಂತೆ ವೇಷ ಧರಿಸಿರುವ ವ್ಯಕ್ತಿ, ಮಹಿಳೆಯ ಕೈ ಹಿಡಿದು ಎಳೆದು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳೆ ಅವನನ್ನು ತಳ್ಳಿ ಹಾಕಿ ಹೊರಗೆ ಓಡಿ ಹೋಗಿದ್ದಾಳೆ. ಆಗ ಮಹಿಳಾ ವೇಷಧಾರಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಆರೋಪಿ ದ್ವಿಚಕ್ರವಾಹನದಲ್ಲಿ ಪಾರ್ಲರ್‌ಗೆ ಬಂದಿದ್ದಾನೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಸಿಸಿಟಿವಿಗಳಲ್ಲಿ ಈ ದೃಶ್ಯಾವಳಿ ಸೆರೆಯಾಗಿವೆ. ನಾವು ಪರಿಶೀಲಿಸಿ ಆರೋಪಿಯನ್ನು ಬಂಧಿಸುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.