ಲಂಡನ್: ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ ಆಟಗಾರ್ತಿಯಾಗಿ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.
Advertisement
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಮಿಥಾಲಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಇಂಗ್ಲೆಂಡ್‍ನ ಮಾಜಿ ಆಟಗಾರ್ತಿ ಚಾರ್ಲೋಟ್ ಎಡ್ವರ್ಡ್ಸ್ ದಾಖಲೆಯನ್ನು ಮುರಿದಿದ್ದಾರೆ. ಎಡ್ವರ್ಡ್ಸ್ ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿ ಒಟ್ಟು 10,273 ರನ್ ಗಳಿಸಿದ್ದರು. ಇದೀಗ ಮಿಥಾಲಿ ಒಟ್ಟು 10,377 ರನ್ ಬಾರಿಸುವ ಮೂಲಕ ವಿಶ್ವ ಮಹಿಳಾ ಕ್ರಿಕೆಟ್‍ನ ಕ್ವೀನ್ ಆಗಿ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ಖೇಲ್ ರತ್ನ ಪ್ರಶಸ್ತಿಗೆ ಅಶ್ವಿನ್, ಮಿಥಾಲಿ ರಾಜ್ ಹೆಸರು ಶಿಫಾರಸು
Advertisement
Advertisement
ಈ ಹಿಂದೆ ಏಕದಿನ ಕ್ರಿಕೆಟ್‍ನಲ್ಲಿ 7,000ರನ್ ಗಳಿಸಿದ ಮೊದಲ ಮಹಿಳಾ ಆಟಗಾರ್ತಿಯೆಂದು ಗುರುತಿಸಿಕೊಂಡಿದ್ದ ಮಿಥಾಲಿ, ಇದೀಗ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ಒಟ್ಟು 10,000 ರನ್ ಗಡಿದಾಟಿದ್ದಾರೆ. ಈ ಮೂಲಕ 10,000 ರನ್ ಗಡಿದಾಟಿದ ಮಹಿಳಾ ಕ್ರಿಕಟ್‍ನ ಎರಡನೇ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಮೊದಲು ಚಾರ್ಲೋಟ್ ಎಡ್ವರ್ಡ್ಸ್ 10,000 ರನ್ ಸಿಡಿಸಿದ್ದರು. ಇದೀಗ ಮಿಥಾಲಿ ಕೂಡ ಈ ಸಾಧನೆ ಮಾಡಿದ್ದಾರೆ.
Advertisement
RECORD????: #TeamIndia captain @M_Raj03 is now the LEADING RUN-GETTER in women's international cricket across formats. She goes past England's Charlotte Edwards. ???????????????? pic.twitter.com/XVEEK5ugtV
— BCCI Women (@BCCIWomen) July 3, 2021
ಮಿಥಾಲಿ ಒಟ್ಟು 317 ಪಂದ್ಯಗಳಿಂದ 10,377 ರನ್ ಸಿಡಿಸಿದ್ದರೆ. ಚಾರ್ಲೋಟ್ ಎಡ್ವರ್ಡ್ಸ್ 309 ಪಂದ್ಯಗಳಿಂದ 10,273 ರನ್ ಕಲೆಹಾಕಿದ್ದಾರೆ. ಎಡ್ವರ್ಡ್ ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ನೀಡಿದ್ದಾರೆ. ಮಿಥಾಲಿ ಇನ್ನೂ ಕೂಡ ಭಾರತ ತಂಡದ ಪರ ಆಡುತ್ತಿದ್ದಾರೆ. ಇದನ್ನೂ ಓದಿ: ಏಕದಿನ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್ ವಿಶ್ವದಾಖಲೆ