ಮುಂಬೈ: ಮಹಾಮಾರಿ ಕೊರೊನಾ ಸಾಮಾನ್ಯ ಜನರಿಂದ ಹಿಡಿದು ಗಣ್ಯಾತಿಗಣ್ಯರನ್ನೂ ಬಿಟ್ಟಿಲ್ಲ. ಇದೀಗ ಸೀರಿಯಲ್ ನಟಿ ದಿವ್ಯಾ ಭಟ್ನಾಗರ್ ಕೋವಿಡ್ ಸೋಂಕಿನಿಂದ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟಿ ದಿವ್ಯಾ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ನಟಿ ದಿವ್ಯಾ ಭಟ್ನಾಗರ್ ಅವರು ಕೊರೊನಾ ವೈರಸ್ ನಿಂದ ಬಳಲುತ್ತಿದ್ದರು. ಈ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ನಿಂದಾಗಿ ಇಂದು ಮುಂಜಾನೆ ನಿಧನರಾಗಿದ್ದಾರೆ. ಇವರ ದೇಹ ಸ್ಥಿತಿ ಹದಗೆಟ್ಟ ನಂತರ ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರಿಂದ ಅವರು ಸುಮಾರು ಒಂದು ವಾರದವರೆಗೆ ಈ ರೋಗದ ವಿರುದ್ಧ ಹೋರಾಡಿ ಇಂದು ಮೃತಪಟ್ಟಿದ್ದಾರೆ.
ಮಗಳ ಬಗ್ಗೆ ಮಾತನಾಡಿದ ದಿವ್ಯಾ ತಾಯಿ, ದಿವ್ಯಾಳನ್ನು ವೆಂಟಿಲೇಟರ್ ನಲ್ಲಿ ಇರಿಸಲಾಗಿದೆ. ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವಳನ್ನು ನವೆಂಬರ್ 26 ರಂದು ಆಸ್ಪತ್ರೆಗೆ ಸಾಗಿಸಲಾಗಿದೆ. ನ್ಯುಮೋನಿಯಾದಿಂದಲೂ ಬಳಲುತ್ತಿದ್ದಳು. ನನ್ನ ಮಗ ಮತ್ತು ನಾನು, ದಿವ್ಯಾ ಆರೋಗ್ಯದ ಬಗ್ಗೆ ತಿಳಿದ ನಂತರ ಮುಂಬೈಗೆ ಬಂದೆವು ಎಂದು ಹೇಳಿದ್ದಾರೆ.
View this post on Instagram
ದೇವೋಲೀನಾ ಭಟ್ಟಾಚಾರ್ಜಿ ಅವರು ತಮ್ಮ ಇನ್‍ಸ್ಟಾಗ್ರಾಮ್ ಪುಟದಲ್ಲಿ ನಟಿಗೆ ಸಂತಾಪ ಸೂಚಿಸಿದ್ದಾರೆ. ಅವರು ಕೆಲವು ಫೋಟೋವನ್ನು ಹಂಚಿಕೊಂಡು ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ.
View this post on Instagram
ನಟಿ ಶಿಲ್ಪಾ ಶಿರೋಡ್ಕರ್ ಅವರು ದಿವ್ಯಾ ಅವರೊಂದಿಗೆ ಫೋಟೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು. ನಾನು ತುಂಬಾ ದುಖಿಃತಳಾಗಿದ್ದೇನೆ. ನನ್ನ ಪ್ರೀತಿಯ ದಿವ್ಯಾ ಎಂದು ಬರೆದುಕೊಂಡು ಸಂತಾಪ ಸೂಚಿಸಿದ್ದಾರೆ.