ಮಡಿಕೇರಿ: ಸ್ವರ್ಗದಂತಹ ಸ್ಥಳವಾಗಿರುವ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದಲ್ಲಿ 2018ರ ಆಗಸ್ಟ್ ತಿಂಗಳಲ್ಲಿ ಕಂಡು ಕೇಳರಿಯದಂತಹ ಭೀಕರ ಭೂಕುಸಿತ ಮತ್ತು ಜಲಪ್ರಳಯ ಸಂಭವಿಸಿತ್ತು.
ಈ ವೇಳೆ ಮುಕ್ಕೋಡ್ಲಿನ ಪರಮೇಶ್ವರ್ ನಾಯಕ್ ಮತ್ತು ಜಯಮ್ಮ ದಂಪತಿ ನೆಲೆಸಿದ್ದ ಮನೆಯ ಪಕ್ಕದಲ್ಲೇ ಹರಿಯುತ್ತಿದ್ದ ಹೊಳೆ ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ಮನೆಯಿಂದ 30 ಅಡಿ ದೂರದಲ್ಲಿದ್ದ ಚಿಕ್ಕ ಹೊಳೆ ನೋಡನೋಡುತ್ತಿದ್ದಂತೆ ನದಿಯಾಗಿ ಪರಿವರ್ತನೆ ಆಗಿತ್ತು. ಇದರಿಂದ ಕಷ್ಟಪಟ್ಟು ಕಟ್ಟಿದ್ದ ಮನೆಯ ಒಂದೊಂದೇ ಭಾಗ ಕಣ್ಣೆದುರೇ ಬೀಳಲಾರಂಭಿಸಿತ್ತು. ಅಷ್ಟೇ ಅಲ್ಲ ಭಾರೀ ಪ್ರಮಾಣದ ಗುಡ್ಡ ಕುಸಿದು, ಹೊಳೆಯಂತೆ ನೀರು ಹರಿದು ಬರತೊಡಗಿತ್ತು. ಅಂದು ತಮ್ಮ ಪ್ರಾಣ ರಕ್ಷಿಸಿಕೊಂಡರೆ ಸಾಕು ಎಂದು ಪರಮೇಶ್ ನಾಯ್ಕ್ ಮತ್ತು ಜಯಮ್ಮ ಬೆಟ್ಟಗುಡ್ಡಗಳನ್ನು ಹತ್ತಿದ್ದರು.
Advertisement
Advertisement
ಅಂದು ಮನೆ ಬಿಟ್ಟವರು ಇಂದಿನ ಗಾಳಿಬೀಡು ಗ್ರಾಮದ ಎಸ್ಟೇಟ್ ಒಂದರಲ್ಲಿ ಕೂಲಿ ಕೆಲಸ ಮಾಡುತ್ತಾ ಲೈನ್ ಮನೆಯಲ್ಲೇ ಬದುಕುತ್ತಿದ್ದಾರೆ. 2018 ರಲ್ಲಿ ಭೂ ಕುಸಿತವಾದ ಬಳಿಕ ಅಂದಿನ ಸಮ್ಮಿಶ್ರ ಸರ್ಕಾರ ನಿರಾಶ್ರಿತರಾದವರಿಗೆ ಮನೆಗಳನ್ನು ವಿತರಣೆ ಮಾಡಿತ್ತು.
Advertisement
2018 ರಲ್ಲಿ ಸಿದ್ಧವಾದ ನಿರಾಶ್ರಿತರ ಪಟ್ಟಿಯಲ್ಲಿ ಪರಮೇಶ್ ಅವರ ಹೆಸರು ಸಹ ಇತ್ತು. ಬಳಿಕ ಪಟ್ಟಿಯಿಂದ ಇವರ ಹೆಸರು ಬಿಟ್ಟು ಹೋಗಿದೆ. ಮನೆಯ ಹಿಂಭಾಗ ಬಹುತೇಕ ಬಿದ್ದುಹೋಗಿದೆ. ಉಳಿದ ಮನೆಯು ಸಾಕಷ್ಟು ಬಿರುಕುಬಿಟ್ಟಿದೆ. ಜೊತೆಗೆ ಮನೆಯಿಂದ 30 ಅಡಿ ದೂರದಲ್ಲಿ ಹರಿಯುತ್ತಿದ್ದ ಹೊಳೆ ಈಗ ಸಾಕಷ್ಟು ಅಗಲ ವ್ಯಾಪಿಸಿದೆ. ಹೀಗಾಗಿ ಪರಮೇಶ್ ಅವರ ಮನೆಯ ಪಕ್ಕದಲ್ಲೇ ಹೊಳೆ ಹರಿಯುತ್ತಿದ್ದು ಮಳೆ ಜೋರಾಗಿ ಸುರಿದಲ್ಲಿ ಹೊಳೆಯ ನೀರು ಮನೆಗೆ ನುಗ್ಗುವ ಸಾಧ್ಯತೆ ಇದೆ.
Advertisement
ಇಂತಹ ಸ್ಥಿತಿಯಲ್ಲಿರುವ ಮನೆಯಲ್ಲಿ ಬದುಕೋದಕ್ಕೆ ಹೇಗೆ ಸಾಧ್ಯ. ಮನೆ ಒಂದನ್ನು ಬಿಟ್ಟರೆ ನಮ್ಮ ಪಾಲಿಗೆ ಬೇರೇನೂ ಇಲ್ಲ. ಕೂಲಿ ಮಾಡುತ್ತಿದ್ದ ನಮಗೆ ಇತ್ತೀಚೆಗೆ ಕೂಲಿ ಕೆಲಸವೂ ಸರಿಯಾಗಿ ದೊರೆಯುತ್ತಿಲ್ಲ. ನಮಗೆ ಪರ್ಯಾಯ ಮನೆ ಮಾಡದಿದ್ದರೆ ನಮಗೆ ಸಾವೊಂದೇ ಗತಿ ಎಂದು ಪರಮೇಶ್ ಕಣ್ಣೀರು ಹಾಕುತ್ತಿದ್ದಾರೆ.