– ವಿಜಯೇಂದ್ರ ಪೊಲಿಟಿಕಲ್ ಗೇಮ್ ಇನ್‍ಸೈಡ್ ಸ್ಟೋರಿ
ರಾಯಚೂರು: ಉಪಚುನಾಣೆ ಘೋಷಣೆ ಬಳಿಕ ಮಸ್ಕಿ ಅಖಾಡಕ್ಕೆ ಎಂಟ್ರಿ ನೀಡಿದ ಮೊದಲ ದಿನವೇ ಬಿಜೆಪಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ಎಸ್.ವಿಜಯೇಂದ್ರ ಪೊಲಿಟಿಕಲ್ ಸ್ಟ್ಯಾಟರ್ಜಿಯನ್ನು ನಡೆಸಿದರು.
ಮಸ್ಕಿಯ ಪೊಲೀಸ್ ಠಾಣೆ ಪಕ್ಕದ ಖಾಲಿ ಜಾಗದಲ್ಲಿ ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನ ನಿರ್ಮಾಣ ಮಾಡಲಾಗಿತ್ತು. ಕೆ.ವಿರೂಪಾಕ್ಷಪ್ಪ ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ, ಇಬ್ಬರು ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಸಚಿವ ಬಿ.ಶ್ರೀರಾಮುಲು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಹುತೇಕ ರಾಜಕೀಯ ಮುಖಂಡರೆಲ್ಲರೂ ನೇರವಾಗಿ ಸಿಂಧನೂರು ಮೂಲಕ ಮಸ್ಕಿ ಕಾರ್ಯಕ್ರಮಕ್ಕೆ ಅಗಮಿಸಿದರು. ಆದ್ರೆ ವಿಜಯೇಂದ್ರ ಮಾತ್ರ ಭಿನ್ನ ಹಾದಿ ಮೂಲಕ ಮಸ್ಕಿ ಪ್ರವೇಶಿಸಿ ಹಳ್ಳಿಯಲ್ಲಿ ಪ್ರಚಾರ ನಡೆಸಿದರು. ಈ ಮೂಲಕ ಮಸ್ಕಿಯಲ್ಲಿ ಬಿಜೆಪಿ ಪ್ರಚಾರದ ಸಂಚಲನ ಮೂಡಿಸಿದರು.
Advertisement
Advertisement
ಏಲ್ಲೆಲ್ಲಿ ಪ್ರಚಾರ? ಗಂಗಾವತಿ, ಕನಕಗಿರಿ ಮೂಲಕ ಮಸ್ಕಿ ಕ್ಷೇತ್ರದ ಕಲ್ಮಂಗಿ, ಉಮಲೂಟಿ ಗ್ರಾಮ ಪ್ರವೇಶ ಮಾಡಿದ ಬಿ.ವೈ.ವಿಜಯೇಂದ್ರ ಮೊದಲ ದಿನವೇ ಮತಬೇಟೆ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರುವಿಹಾಳ ಅವರ ತವರೂರಾದ ತುರುವಿಹಾಳ, ತಿಡಿಗೋಳ ಭಾಗದಲ್ಲಿನ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿದರು. ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲರನ್ನು ಜತೆಗಿಟ್ಟುಕೊಂಡೇ ಮತ ಪ್ರಚಾರ ಆರಂಭಿಸಿದರು. ತುರುವಿಹಾಳ ಭಾಗದ ಪ್ರಮುಖ ಮುಖಂಡರ ಸಭೆ ನಡೆಸುವ ಮೂಲಕ ವಿಶೇಷವಾಗಿ ಲಿಂಗಾಯತ ಸಮುದಾಯದ ಮುಖಂಡರ ಮತಗಳನ್ನು ಸೆಳೆಯುವ ಕಸರತ್ತು ನಡೆಸಿದರು.
Advertisement
Advertisement
ಮಸ್ಕಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಕಾರ್ಯಕ್ರಮ ಸಂಜೆ 5 ಗಂಟೆಗೆ ನಿಗದಿಯಾಗಿದ್ದರಿಂದ ಬಿ.ವೈ.ವಿಜಯೇಂದ್ರ ನೇರವಾಗಿ ಮಸ್ಕಿ ಕ್ಷೇತ್ರದ ಉಮಲೂಟಿ ಗ್ರಾಮಕ್ಕೆ ಮಧ್ಯಾಹ್ನ 1 ಗಂಟೆಗೆ ಆಗಮಿಸಿದರು. ಬೈಕ್ ರ‍್ಯಾಲಿಯ ಮೂಲಕ ಪ್ರಚಾರ ನಡೆಸಿ ಉಮಲೂಟಿ ಗ್ರಾಮದ ಶ್ರೀ ಮಹಿಮಾಂಬುಕಾ ದೇವಿಗೆ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದರು. ಬಳಿಕ ಗುಂಡಾ ಗ್ರಾಮಕ್ಕೆ ಭೇಟಿ ನೀಡಿದ ವಿಜಯೇಂದ್ರ, ಗುಂಡಾ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಭಾಗಿಯಾದರು. ನಂತರ ಗ್ರಾಮದ ಅಮರೇಶ್ವರ ಮಠದ ಚನ್ನಸಿದ್ದರಾಮೇಶ್ವರ ಸ್ವಾಮಿಗಳ ಆಶೀರ್ವಾದ ಪಡೆದು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಅಲ್ಲಿಂದಲೇ ಚಿಕ್ಕಬೇರ್ಗಿ, ಹಿರೇಬೇರಗಿಯಲ್ಲಿ ಮತಯಾಚನೆ ಮಾಡಿ ತುರುವಿಹಾಳ ಗ್ರಾಮಕ್ಕೆ ಭೇಟಿ ನೀಡಿದರು. ಅಲ್ಲಿನ ಬಸವೇಶ್ವರ ಮೂರ್ತಿಗೆ ಮಾಲರ್ಪಣೆ ಮಾಡಿ ಹಲವು ಮುಖಂಡರ ಜತೆ ಮಾತುಕತೆ ನಡೆಸಿದರು.
ಮುಖಂಡರ ಪಟ್ಟಿ: ತುರುವಿಹಾಳ, ತಿಡಿಗೋಳ ಜಿ.ಪಂ ಕ್ಷೇತ್ರದಲ್ಲಿ ಸಂಚಾರ ಮಾಡಿದ ಬಿ.ವೈ.ವಿಜಯೇಂದ್ರ ಈ ಭಾಗದ ಪ್ರಮುಖ ನಾಯರ ಪಟ್ಟಿ ಮಾಡಿ ಹೆಸರು ದೂರವಾಣಿ ಸಂಖ್ಯೆಗಳನ್ನು ಪಡೆದುಕೊಂಡರು ಎಂದು ತಿಳಿದು ಬಂದಿದೆ. ಯಾವುದೇ ಪಕ್ಷ ಎನ್ನದೇ ಎಲ್ಲ ಪಾರ್ಟಿಯಲ್ಲಿರುವ ಆಯಾ ಜಾತಿಯ ಮುಖಂಡರ ಪಟ್ಟಿ ಮಾಡಿಕೊಂಡರು. ಮುಂದಿನ ದಿನಗಳಲ್ಲಿ ಜಾತಿವಾರು ಪ್ರಬಲ ನಾಯಕರನ್ನು ಸೆಳೆಯುವ ಲೆಕ್ಕಾಚಾರ ಎಂದು ತಿಳಿದು ಬಂದಿದೆ.
ಬಾಕ್ಸ್-01 ಹಿಂದೆ ಹಿನ್ನಡೆಯಾಗಿತ್ತು: 2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ವೇಳೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ರಿಗೆ ಲಿಂಗಾಯತ ಸಮುದಾಯದ ಮತಗಳು ಕೈ ತಪ್ಪಿದ್ದವು. ಹೀಗಾಗಿ ಈ ಬಾರಿ ಈ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ಮೊದಲ ಭಾಗವಾಗಿಯೇ ಬಿ.ವೈ.ವಿಜಯೇಂದ್ರ ತುರುವಿಹಾಳ, ತಿಡಿಗೋಳ ಭಾಗದಲ್ಲಿ ಸಂಚಾರ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ ಉಪಚುನಾವಣೆ ಘೋಷಣೆ ಮೊದಲ ದಿನವೇ ವಿಜಯೇಂದ್ರ ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತವಾಗದೇ ನೇರವಾಗಿ ಪ್ರಚಾರಕ್ಕೆ ಇಳಿದಿದ್ದರು.